ಕೋಲಾರದಲ್ಲಿ ಬಂಧಿತನಾದ ಅಂಗಡಿಗಳ ಕಳವು ಪ್ರಕರಣಗಳ ಆರೋಪಿ ಸೈಯದ್ ಸಲ್ಮಾನ್ ನನ್ನು ಪೊಲೀಸರು ಬಂಧಿಸಿ, ಸ್ಥಳ ಮಹಜರು ಮಾಡುತ್ತಿರುವುದು.  Kolara crime
ಕೋಲಾರ

14 ಕಳವು ಪ್ರಕರಣದ ಆರೋಪಿ Arrest

ಕೋಲಾರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳಲ್ಲಿ ಕೃತ್ಯ ಎಸಗಿ ಬೈಕ್ ನಲ್ಲಿ ಪರಾರಿಯಾಗುತ್ತಿದ್ದ ಆರೋಪಿ ಸೈಯದ್ ಸಲ್ಮಾನ್. ಕೋಲಾರ ಪೊಲೀಸರಿಂದ ಬಂಧನ.

ಕೋಲಾರ: ಅಂಗಡಿಗಳ ಶೆಟರ್ ಮುರಿದು ನಗದು ಮತ್ತು ವಸ್ತುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ನಗರಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದು, ವಿಚಾರಣೆ ವೇಳೆ ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆ ಒಟ್ಟು 14 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ನಗರದ ಸೈಯದ್ ಸಲ್ಮಾನ್ ಬಂಧಿತ. ಆ.31ರಂದು ಚೌಡೇಶ್ವರಿ ನಗರದ ಕೋಲಾರ-ಟೇಕಲ್ ಮುಖ್ಯರಸ್ತೆ ಪಕ್ಕದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಕಳುವಾಗಿರುವ ಬಗ್ಗೆ ಅಂಗಡಿ ಮಾಲೀಕ ಧರ್ಮಪ್ರಕಾಶ್ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ.31ರಂದು ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದ ಮಾಲೀಕ ಸೆ.1ರಂದು ಬೆಳಗ್ಗೆ 6 ಗಂಟೆಗೆ ಅಂಗಡಿ ತೆರೆಯಲು ಬಂದಾಗ ಶೆಟರ್‌ನ ಬೀಗ ಮುರಿದು 30 ಸಾವಿರ ರೂ. ನಗದು ಕಳವು ಮಾಡಿದ್ದ. ಇದೇ ವೇಳೆ ಟೇಕಲ್ ಸರ್ಕಲ್‌ನಲ್ಲಿರುವ ಬಿರಿಯಾನಿ ಹೋಟೆಲ್ ಹಾಗೂ ಧರ್ಮಸ್ಥಳ ಬೇಕರಿಯಲ್ಲೂ ಕೃತ್ಯ ಎಸಗಿದ್ದ.

ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್ ಹಾಗೂ ಕೋಲಾರ ಉಪವಿಭಾಗದ ಡಿವೈಎಸ್‌ಪಿ ವಿ.ಕೃಷ್ಣಪ್ಪ ಮಾರ್ಗದರ್ಶನದಲ್ಲಿ ನಗರ ಠಾಣೆ ಇನ್‌ಸ್ಪೆಕ್ಟರ್ ಲೋಕೇಶ್ ಎಂ.ಜೆ., ಪಿಎಸ್‌ಐ ಸಂಗಪ್ಪ ಮೊಟಿ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಬರೋಬ್ಬರಿ 14 ಕಳವು ಪ್ರಕರಣ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.