ಬಸವನಗೌಡ ಪಾಟೀಲ್​ ಯತ್ನಾಳ್​  
ಕೋಲಾರ

ರಕ್ಷಣೆಗಾಗಿ ಹಿಂದುಪರ ಸರ್ಕಾರ ರಚನೆಯಾಗಬೇಕು

ಕೋಲಾರ: ರಾಜ್ಯದಲ್ಲಿ ಪಾಕಿಸ್ತಾನ ಮಾದರಿಯ ಸರ್ಕಾರವಿದೆ, ಇಲ್ಲಿ ಹಿಂದುಗಳಿಗೆ ರಕ್ಷಣೆ ಸಿಗಬೇಕಾದರೆ ಹಿಂದು ಪರ ಕೆಲಸ ಮಾಡುವ ಸರ್ಕಾರ ರಚನೆಯಾಗಬೇಕಿದೆ ಎಂದು ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್​ ಹೇಳಿದರು. 
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನವಮಿ ಎಂದರೆ ಉರಿಯುತ್ತೆ, ಹಿಂದು ಪ್ರತಿಯೊಂದಕ್ಕು ಅನುಮತಿ ಪಡೆಯಬೇಕು, ಆದರೆ ಮುಸ್ಮಿಂರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ, ರಾಜ್ಯದಲ್ಲಿ ಅಲ್ಪಸಂಖ್ಯಾತ ಪರ ಆಡಳಿತ ಇದೆ ಎಂದರು.  
ರಾಜ್ಯದಲ್ಲಿ ಮುಂದೆ ಹಿಂದುಪರ ಸರ್ಕಾರ ಅಧಿಕಾರಕ್ಕೆ ಬರಬೇಕು, ನಾಟಕ ಆಡೋರು ಬೇಡ. ಹಿತ ರಕ್ಷಣೆ ಮಾಡುವ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಉಪ ಚುನಾವಣೆ ವಿಚಾರದ ಕುರಿತು ಮಾತನಾಡಿ, ದಾವಣಗೆರೆಯಲ್ಲಿ ಬಿಜೆಪಿಗೆ ಮುಸ್ಲಿಂ ಒಂದು ಓಟು ಸಿಗಲ್ಲ, ಎಲ್ಲಿವರೆಗೂ ಮುಸ್ಲಿಂರು, ಶೇ.40ಆಗಲ್ವೊ, ಅಲ್ಲಿವರೆಗೂ ಅವರಿಗೆ ಹೇಳಿದ್ದ ಹಾಗೆ ಆಗುತ್ತೆ, ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳಿಗೆ 15 ಓಟು ಸಿಗಲ್ಲ, ಮುಸ್ಲಿಂರೆಲ್ಲಾ ಕಾಂಗ್ರೆಸ್​ಗೆ ಮತ ಹಾಕ್ತಾರೆ ಎಂದರು.
ನಾನು ಮುಸ್ಲಿಂರನ್ನು ಮತ ಕೇಳಲ್ಲ, ಕೇಳಿ ನಾನು ಮೂರ್ಖನಾಗಲ್ಲ. ಬಿಜೆಪಿಗೆ ಓಟು ಹಾಕ್ತೀವಿ ಎನ್ನುತ್ತಾ, ಬಿಜೆಪಿಯನ್ನೆ ಹುಚ್ಚು ಮಾಡ್ತಾರೆ. ಬಿಜೆಪಿ ಜೆಡಿಎಸ್​ ಮೈತ್ರಿಯಾದರೆ ಖಂಡಿತ ಅಧಿಕಾರಕ್ಕೆ ರ್ಬತಾರೆ ಇದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮುಂದಿನ ಮೇ ತಿಂಗಳಲ್ಲಿ ಚಿತ್ರದುರ್ಗದಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮಾಡ್ತಿದ್ದೇವೆ. ಹಿಂದೂಗಳು ಮನಸ್ಥಿತಿ ಬದಲಿಸಿಕೊಂಡು ಸಂಘಟಿತರಾಗಬೇಕು, ಜಾತಿ ಬೇಡ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಸೇರುವ ಪರೋಕ್ಷ ಸುಳಿವು ನೀಡಿದ ಯತ್ನಾಳ್​, ಬಿಜೆಪಿ ನಾವು ಬೆಳೆಸಿದ ಪಕ್ಷ, ಬಿಎಸ್​ವೈ  ಪಕ್ಷಕ್ಕೆ ಮರು ಸೇರ್ಪಡೆ ಆಗೊಲ್ಲ ಎಂದಿದ್ದರು ಆದರೆ ನಾನು ಹಾಗೇ ಎಲ್ಲಾ ಹೇಳೊಕಾಗಲ್ಲ ಎಂದು ತಿಳಿಸಿದರು. 
* ಕೊತ್ವಾಲ್​ ರಾಮಚಂದ್ರನಂತೆ ಡಿಕೆಶಿ ವರ್ತನೆ
ಸದನದಲ್ಲಿ ಐಪಿಎಲ್​ ಟಿಕೆಟ್​ಗಾಗಿ ಶಾಸಕರ ಬೇಡಿಕೆ ವಿಚಾರದ ಕುರಿತು ಮಾತನಾಡಿ, ಡಿ.ಕೆ.ಶಿವಕುಮಾರ್​ ವರ್ತನೆ ಕೊತ್ವಾಲ್​ ರಾಮಚಂದ್ರ ಕಾಲದಂತಿತ್ತು. ಶಾಸಕರು ನಾಚಿಕೇಗೇಡಿಗಳು ಆಗಿದ್ದಾರೆ, ಅವರ ಮಾನಸೀಕತೆ ಹೇಗಾಗಿದೆ ಎಂದರೆ ವಿಧಾನಸೌಧದಲ್ಲಿ ಸಮಸ್ಯೆಗಳ ಚರ್ಚೆ ಗಂಭೀರವಾಗಿ ಆಗ್ತಿಲ್ಲ. ಶಾಸಕರುಗಳ ಘನತೆ ಕಡಿಮೆಯಾಗ್ತಿದೆ, ಆರೋಗ್ಯಕರ ಚರ್ಚೆ ಆಗ್ತಿಲ್ಲ. ಐಪಿಎಲ್​ ನಲ್ಲಿ ಒಳ್ಳೆ ಸೀಟ್​ ಬೇಕೆಂದರೆ ಹಣ ಕೊಟ್ಟು ಹೋಗಬೇಕು ಎಂದು  ಬಸವನಗೌಡ ಪಾಟೀಲ್​ ಯತ್ನಾಳ್​  ಬೇಸರ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್​ ಸಿಎಂ ಆಗಲು ಬಹಳ ಪ್ರಯತ್ನ ಮಾಡ್ತಿದ್ದಾರೆ, ಬಿಜೆಪಿ ಶಾಸಕರನ್ನು ಆ ಸಂಬಂಧ ಬೇಟಿಯಾಗಿ, ಪ್ರಯತ್ನ ಮಾಡಿದ್ದಾರೆ, ಆದರೆ ಅದಕ್ಕೆ ನರೇಂದ್ರ ಮೋದಿಯವರು ಒಪ್ಪಿಲ್ಲ. ಅದಕ್ಕಾಗಿ ಇನ್ನೂ ಡಿಕೆಶಿ ಹೋರಾಟ ಮಾಡ್ತಿದ್ದಾರೆ ಎಂದರು.