ಕೋಲಾರ ನಗರದ ಎಸ್ಎನ್ಆರ್ ಸಮೀಪದ ರಸ್ತೆಯಲ್ಲಿ ಯುಜಿಡಿ ಮುಚ್ಚಳ ಹಾನಿಯಾಗಿದ್ದು, ಬ್ಯಾರಿಕೇಡ್ ಅಡ್ಡಲಾಗಿ ಇಟ್ಟಿರುವುದು.
ಕಿರುವಾರ ಎಸ್.ಸುದರ್ಶನ್ ಕೋಲಾರ
ನಗರದ ಬಹುತೇಕ ಕಡೆ ಯುಜಿಡಿ ಮ್ಯಾನ್ ಹೋಲ್ಗಳ ಅಸಮರ್ಪಕ ನಿರ್ವಹಣೆಯಿಂದ ಮುಚ್ಚಳಗಳು ಹಾನಿಯಾಗಿದ್ದು, ಅಪಾಯಕಾರಿ ಸ್ಥಿತಿ ತಲುಪಿ ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.
ಕೋಲಾರ ನಗರ ಸಭೆ ವ್ಯಾಪ್ತಿಯಲ್ಲಿ 35 ವಾರ್ಡ್ಗಳಿವೆ. ನಗರದ ಹಲವು ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ನಡು ರಸ್ತೆಯಲ್ಲೇ ನಿರ್ಮಾಣ ಮಾಡಿರುವ ಮ್ಯಾನ್ಹೋಲ್ಗಳು ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡಿವೆ. ಇನ್ನು ಕೆಲ ಕಡೆ ಕಳಪೆ ಕಾಮಗಾರಿ ಮಾಡಿದ್ದು ಯುಜಿಡಿ ಹಾನಿಗೆ ಕಾರಣವಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ನಗರದ ಎಸ್ಎನ್ಆರ್ ಆಸ್ಪತ್ರೆ ಸಮೀಪ ಮ್ಯಾನ್ಹೋಲ್ ಮುಚ್ಚ ಹಾನಿಯಾಗಿ ಒಂದು ವಾರವೇ ಕಳೆದಿದೆ. ಇದಕ್ಕೆ ಬ್ಯಾರಿಕೇಡನ್ನು ಅಡ್ಡಲಾಗಿ ಇಡಲಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಕ್ಲಾಕ್ ಟವರ್ರಿಂದ ಸಂಚಾರಿ ಪೊಲೀಸ್ ಠಾಣೆ ತನಕ ರಸ್ತೆಯಲ್ಲಿ ಯುಜಿಡಿ ಮುಚ್ಚಳಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಗೋಚರಿಸುವುದಿಲ್ಲ. ಈಗಾಗಲೇ ಸಾಕಷ್ಟು ಬಂದಿ ದ್ವಿಚಕ್ರ ವಾಹನ ಸವಾರರು ಅಯತಪ್ಪಿ ಬಿದ್ದು ಗಾಯಗೊಂಡಿರುವ ಟನೆ ಸಂಭವಿಸಿದೆ.
ುಡ್ಕೋರ್ಟ್ ಸಮೀಪವು ರಸ್ತೆ ಮಧ್ಯೆದಲ್ಲಿ ದೊಡ್ಡ ಗಾತ್ರದ ಗುಂಡಿ ಬಿದ್ದಿದ್ದು ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗಿದೆ. ಜತೆಗೆ ಬ್ಯಾರಿಕೇಡ್ ಅಡ್ಡಲಾಗಿ ಇಡಲಾಗಿದೆ. ಹಾನಿಯಾಗಿರುವ ಮ್ಯಾನ್ಹೋಲ್ಗಳಲ್ಲಿ ಸರಿಪಡಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಇಲಾಖೆ ವತಿಯಿಂದ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಒಳ ಚರಂಡಿ ಕೊಳವೆ ಮಾರ್ಗವನ್ನು ನಿರ್ಮಾಣ ಕುರಿತು ಕ್ರಿಯಾಯೋಜನೆ ತಯಾರಿಸಿ ಅದಕ್ಕೆ ಅನುಮೋಧನೆ ಪಡೆದು ಟೆಂಡರ್ ಕರೆದು ಕಾಮಗಾರಿ ನಿರ್ವಹಣೆ ಜವಾಬ್ದಾರಿ ಹೊಂದುತ್ತಾರೆ.
ನಗರ ಭಾಗದಲ್ಲಿ ಗುಜರಾತಿನ ಗುತ್ತಿಗೆ ಸಂಸ್ಥೆಯವರು ಟೆಂಡರ್ ಪರೆದು ಯಜಿಡಿ ನಿರ್ಮಾಣ ಮಾಡಿದ್ದಾರೆ. ಕಾಮಗಾರಿ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಯ ಇಂಜನಿಯರ್ಗಳು ಪರಿಶೀಲನೆ ನಡೆಸದೆ ಇರುವುದು ಅನಾಹುತಗಳಿಗೆ ಕಾರಣವಾಗಿದೆ.
ಮ್ಯಾನ್ಹೋಲ್ಗಳ ನಿರ್ಮಾಣದ ಕೆಲವೇ ದಿನಗಳಿಗೆ ಹಾನಿಯಾಗಿವೆ. ಒಳಚರಂಡಿ ಮಾರ್ಗದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕಾಮಗಾರಿಯನ್ನು ಕಳಪೆ ಮಾಡಿದ್ದಾರೆ ಎಂದು ಹಿಂದೆ ನಗರಸಭೆಯ ಕೆಲ ಸದಸ್ಯರು ಆರೋಪಿಸಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರು ಸಹ ಕ್ರಮಕ್ಕೆ ಅಧಿಕಾರಿಗಳು ಮಾತ್ರ ಮುಂದಾಗಿಲ್ಲ.
ಯುಜಿಡಿ ನಿರ್ವಹಣೆಗಾಗಿ ನಗರಸಭೆಯಿಂದ ಪ್ರತ್ಯೇಕ ಸಿಬ್ಬಂದಿ, ಜಟ್ಟಿಂಗ್, ಸಕ್ಕಿಂಗ್ ಯಂತ್ರಗಳಿವೆ. ಇದಕ್ಕೆ ವರ್ಷಕ್ಕೆ ಲಾಂತರ ರೂ ಹಣ ಸಹ ವೆಚ್ಚ ಮಾಡಲಾಗುತ್ತಿದೆ. ಹಾನಿಯಾಗಿರುವ ಮ್ಯಾನ್ಹೋಲ್ ಹಾಗೂ ಪೈಪ್ನ್ನು ತಕ್ಷಣಕ್ಕೆ ರಿಪೇರಿ ಮಾಡಿಸಿದರು ಸಹ ವೆಚ್ಚ ಮೀರಿ ಹಣ ಡ್ರಾ ಮಾಡುತ್ತಾರೆ, ಆದರೆ ಆ ರಿಪೇರಿ ಕೆಲಸವು ಸಹ ಕಳಪೆಯಿಂದ ಕೂಡಿರುತ್ತದೆ. ಇದಕ್ಕೆಲ್ಲ ಆರೋಗ್ಯ ನಿರೀಕ್ಷಕರ, ಇಂಜನಿಯರ್ಗಳ ಉದಾಸೀನವೇ ಕಾರಣವಾಗಿದೆ.
ಯುಜಿಡಿಯಿಂದ ತ್ಯಾಜ್ಯ ನೀರು ಹೊರ ಬರುತ್ತಿರುವ ಬಗ್ಗೆ ನಗರಸಭೆ ಸಿಬ್ಬಂದಿಗೆ ತಿಳಿಸಲು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಇನ್ನು ವ್ಯಾಟ್ಸಪ್ ಸಂದೇಶ ಕಳುಹಿಸಿದರು ನೋಡಿ ಸುಮ್ಮನಿರುತ್ತಾರೆ. ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
* ಹೋಟೆಲ್ಗಳಿಂದ ಯುಜಿಗೆ ತ್ಯಾಜ್ಯ
ಸಸ್ಯ ಹಾಗೂ ಮಾಂಸಹಾರಿ ಹೋಟೆಲ್ಗಳವರು ಹೋಟೆಲ್ ತ್ಯಾಜ್ಯ, ಪ್ಲಾಸ್ಟಿಕ್ ಬಿಡುವುದರಿಂದ ಒಳ ಚರಂಡಿಯಲ್ಲಿ ತ್ಯಾಜ್ಯ ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ.
ಈ ಬಗ್ಗೆ ಮಾಲೀಕರ ಗಮನಕ್ಕೆ ಇದ್ದರು ಸಹ ಪದೇ ಪದೇ ತ್ಯಾಜ್ಯವನ್ನು ಬಿಟ್ಟು ಯುಜಿಡಿ ಹಾನಿಯಾಗಲು ಕಾರಣರಾಗುತ್ತಿದ್ದಾರೆ. ಈ ಬಗ್ಗೆ ನಗರಸಭೆಯಿಂದ ಹಲವು ಭಾರಿ ತಿಳಿ ಹೇಳಿದ್ದರು ಸಹ ತಪು$್ಪ ಎಸಗುತ್ತಿದ್ದಾರೆ.
* ಭಾರಿ ಗಾತ್ರದ ವಾಹನಗಳಿಂದ ಅನಾಹುತ
ನಗರ ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ರಸ್ತೆಗಳಲ್ಲಿ ಮೀತಿ ಭಾರ ಇರುವ ವಾಹನಗಳು ಚಲಿಸಬೇಕು ಎಂಬ ನಿಯಮವಿದೆ. ಆದರೆ ಮಿತಿ ಮೀರಿ ಭಾರ ಹೊತ್ತಿರುವ ಲಾರಿ, ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ಮ್ಯಾನ್ಹೋಲ್ಗಳು ಹಾನಿಯಾಗುತ್ತಿವೆ.
ನಗರದೊಳಗೆ ಭಾರಿ ಗಾತ್ರದ ವಾಹನಗಳು ಬರುವುದನ್ನು ತಡೆದು ಹೊರ ರಸ್ತೆಗಳಲ್ಲಿ ಸಂಚರಿಸುವಂತೆ ನಿರ್ದೇಶಿಸಬೇಕಾಗಿದೆ.
ಯುಜಿಡಿ ನಿರ್ವಹಣೆ ಎಂಬುದು ನಿತರಂತ. ಸಾರ್ವಜನಿಕರು ರ್ನಿಧಿಷ್ಟ ಮಾಹಿತಿ ನೀಡಿದರೆ ಕೂಡಲೇ ಸರಿಪಡಿಸಿಕೊಡಲಾಗುವುದು. ಬಹಳ ವರ್ಷಗಳ ಹಿಂದೆ ಕಡಿಮೆ ವಿನ್ಯಾಸದ ಪೈಪ್ ಅಳವಡಿಸಿರುವುದು ಸಮಸ್ಯೆಯಾಗುತ್ತಿದೆ. ಆದರು ಸಹ ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಲಾಗುತ್ತಿದೆ.
- ನವೀನ್ ಚಂದ್ರ, ಪೌರಾಯುಕ್ತ, ಕೋಲಾರ
ಹಳೇ ಕೋಲಾರ ಭಾಗದ ಬಹುತೇಕ ಬಡಾವಣೆಗಳಲ್ಲಿ ಯುಜಿಡಿ ನಿರ್ಮಾಣ ಆಗಿಲ್ಲ, ಆದರೂ ಸಹ ತೆರಿಗೆ ವಸೂಲು ಮಾಡಲಾಗುತ್ತಿದೆ. ಇದರಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳು ಆದಷ್ಟು ಬೇಗ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.
- ವಿಶ್ವಾನಾಥ್ ಗೌಡ, ಕಾರಂಜಿಕಟ್ಟೆ ನಿವಾಸಿ.