ಕೋಲಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದದಲ್ಲಿನ ಉಡುಪಿ ಶ್ರೀಕೃಷ್ಣ ಬೃಂದಾವನ ಹೋಟೆಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.
ಕೋಲಾರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿನ ಉಡುಪಿ ಶ್ರೀಕೃಷ್ಣ ಬೃಂದಾವನ ಹೋಟಲ್ ಮೇಲೆ ವಿವಿಧ ಇಲಾಖಾಧಿಕಾರಿಗಳು ಗುರುವಾರ ದಾಳಿ ಮಾಡಿದ್ದು, ಅವ್ಯವಸ್ಥೆಯನ್ನು ಕಂಡು ತಾತ್ಕಲಿಕವಾಗಿ ಬೀಗ ಹಾಕಿದರು.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆಹಾರ ಸುರಕ್ಷತೆ ಮತ್ತು ಔಷದಿ ಆಡಳಿತ ಇಲಾಖೆ ಅಂಕಿತಾಧಿಕಾರಿ ಡಾ.ರಾಕೇಶ್, ನಗರಸಭೆ ಪೌರಾಯುಕ್ತ ನವೀನ್ ಚಂದ್ರ, ಎ್ಎಸ್ಎಸ್ಎಐ ನೋಡಲ್ ಅಧಿಕಾರಿ ಜಿ.ಪಿ.ಪ್ರತಿಶ್, ಟಿಎಚ್ಒ ಡಾ.ನಾರಾಯಸ್ವಾಮಿ ದಾಳಿ ನಡೆಸಿ ಪರಿಶೀಲಿಸಿದರು.
ಜ್ಯೂಸ್ ಕೌಂಟರ್, ಅಡುಗೆ ಕೋಣೆ, ಉಗ್ರಾಣ ವೀಸಿದಾಗ ಕೊಳೆತ ತರಕಾರಿ, ಸ್ವಚ್ಚತೆ ಇಲ್ಲದೆ ಇರುವುದು, ಹೋಟೆಲ್ ಕಾರ್ಮಿಕರಿಗೆ ರಕ್ಷಣೆ ಕಲ್ಪಿಸದೆ ಇರುವುದು ಕಂದು ಬಂದಿತು. ಈ ಹಿಂದೆ ದಾಳಿ ಮಾಡಿದಾಗ ಕಂಡು ಬಂದ ಲೋಪಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿತ್ತು. ಆದರೆ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದು ಅಧಿಕಾರಿಗಳು ಹೋಟೆಲ್ ಮಾಲೀಕರನನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಫ್ರೀಡ್ಜ್ ತುಕ್ಕು ಹಿಡಿದಿರುವುದನ್ನು ಕಂಡು ಅಧಿಕಾರಿಗಳು ಗರಂ ಆದರು.
ಈ ಹಿಂದೆ ದಾಳಿ ಮಾಡಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀೆಯ ವರದಿ ಬಂದಿದ್ದು ನೀರು ಕಲುಷಿತವಾಗಿರುವುದು ದೃಢಪಟ್ಟಿದ್ದು, ಆ ಹಿನ್ನಲೆಯಲ್ಲಿ ದಾಳಿ ಮಾಡಿ ಮತ್ತೊಮ್ಮೆ ಅಧಿಕಾರಿಗಳ ತಂಡವು ಪರಿಶೀಲಿಸಿ ಕ್ರಮವಹಿಸಿದೆ.
ಕೋಣೆಗೆಯಲ್ಲಿ ನಿಂತಿದ್ದ ನೀರು, ಇಡ್ಲಿ ಹಾಗೂ ದೋಸೆ ರುಬ್ಬುವ ಗೆಂಡರ್ ಅಸ್ವಚ್ಛತೆ, ಮೇಲ್ಚಾವಣಿಯ ಬಣ್ಣ ಉದುರಿ ಬೀಳುತ್ತಿರುವುದು, ತುಕ್ಕು ಹಿಡಿದ್ದ ಅಡುಗೆ ಯಂತ್ರಗಳನ್ನು ಕಂಡು ಅಧಿಕಾರಿಗಳ ತಂಡ ಹೋಟೆಲ್ ಮಾಲೀಕ ಕಿರಣ್ ಮೇಲೆ ಆಹಾರ ಸುರಕ್ಷತೆ ನಿಯಮ ಪಾಲಿಸಿಲ್ಲ ಎಂಬ ಆರೋಪದಡಿ ಬೀಗ ಜಡಿದಿದ್ದಾರೆ.
* ಎಚ್ಚರಿಕೆ ನೀಡಿಯೂ ಸರಿಪಡಿಸಿಕೊಂಡಿಲ್ಲ
ದಾಳಿಯ ನಂತರ ಆಹಾರ ಸುರಕ್ಷತೆ ಮತ್ತು ಔಷದಿ ಆಡಳಿತ ಇಲಾಖೆ ಅಂಕಿತಾಧಿಕಾರಿ ಡಾ.ರಾಕೇಶ್ ಮಾತನಾಡಿ, ಈ ಹಿಂದೆ ದಾಳಿ ಮಾಡಿದಾಗ ನ್ಯೂನತೆಗಳು ಕಂಡು ಬಂದಿದ್ದು, ಸರಿಪಡಿಸಿಕೊಳ್ಳಲು ಕಾಲವಕಾಶ ನೀಡಲಾಗಿತ್ತು, ಇದೀಗ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ, ಅದ್ದರಿಂದಾಗಿ ತಾತ್ಕಲಿಕವಾಗಿ ಬೀಗ ಹಾಕಲಾಗಿದೆ ಎಂದು ಹೇಳಿದರು.
ಗ್ರಾಹಕರಿಗೆ ಶುದ್ಧ ನೀರು ನೀಡಲು ಉಪಕರಣ ಅಳವಡಿಸದೆ ಇರುವುದು, ಹೋಟೆಲ್ ನೌಕರರ ವೈಯಕ್ತಿಕ ಸ್ವಚ್ಚತೆ ಸಮರ್ಪಕವಾಗಿಲ್ಲ, ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಟೋಪಿ ನೀಡಿಲ್ಲ. ನೊಣ, ಕೀಟಗಳ ನಿಯಂತ್ರಣಕ್ಕಾಗಿ ಕ್ರಮವಹಿಸಿಲ್ಲ. ಆಹಾರ ತಯಾರು ಮಾಡುವ ಕೊಠಡಿ, ಸಂಗ್ರಹ ಹಾಗೂ ಮಾರಾಟ ಸ್ಥಳದಲ್ಲಿ ಸ್ವಚ್ಚತೆ ಇಲ್ಲದೆ ಇರುವುದು ಕಂಡು ಬಂದಿದೆ ಎಂದು ತಿಳಿಸಿದರು.