ಮಾಲೂರು: ನಗರದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂ (ಆರ್ಎಸ್ಎಸ್)ದಿಂದ ಸಹಸ್ರಾರು ಸಂಖ್ಯೆಯ ಗಣವೇಷಧಾರಿ ಸ್ವಯಂಸೇವಕರು ಅದ್ದೂರಿ ಪಥಸಂಚಲನ ನಡೆಸಿದರು. ಇಡೀ ನಗರ ಕೇಸರಿಮಯವಾಗಿತ್ತು. ಎಲ್ಲೆಲ್ಲೂ ಕೇಸರಿ ಧ್ವಜಗಳು ರಾರಾಜಿಸಿದವು.
ಕರ್ನಾಟಕ ದಣ ಪ್ರಾಂತ್ಯದ ಸಾಮರಸ್ಯ ಗತಿ ವಿಧಿಯ ಸಹ ಸಂಯೋಜಕ ಜಿ.ವಿ.ರಾಜೇಶ್ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂವು ಸಮಾಜದಲ್ಲಿ ಎಲ್ಲ ಧರ್ಮ ವರ್ಗಗಳ ಜನರನ್ನು ಸಾಮರಸ್ಯದಿಂದ ಉತ್ತಮ ಬಾಂಧವ್ಯದೊಂದಿಗೆ ಒಳಗೊಂಡು ಹೊಂದಿಕೊಂಡು ಬರುತ್ತಿದೆ. ಹಿಂದುತ್ವವನ್ನು ಜಾಗೃತಗೊಳಿಸಿ ಸಮಾಜದೊಳಗೆ ಸೇರಿಕೊಂಡಿರುವ ಲೋಪದೋಷಗಳನ್ನು ನಿವಾರಿಸಿ ಸದ್ಗುಣಶೀಲ ಸಂಟಿತ ಸಮಾಜ ರೂಪಿಸುವ ಕೆಲಸವನ್ನು ಸಂ ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಶಿಸ್ತಿನ ಹೆಜ್ಜೆಯೊಂದಿಗೆ ಸಾಗಿದ ಪಥಸಂಚಲನ ಸಾರ್ವಜನಿಕರ ಗಮನ ಸೆಳೆಯಿತು. ಪಥಸಂಚಲನಕ್ಕೆ ನಗರದಾದ್ಯಂತ ಭವ್ಯ ಸ್ವಾಗತ ದೊರೆತಿದ್ದು, ರಸ್ತೆಗಳ ಮೇಲೆ ನೀರು ಹಾಕಿ ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ಹೂವಿನ ಪುಷ್ಪಗಳನ್ನು ಎರಚಿ ಸ್ವಯಂಸೇವಕರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ನಗರದ ಹೊಸೂರು ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಿಂದ ಆರಂಭವಾದ ಪಥಸಂಚಲನವು ಶಿರಡಿ ಸಾಯಿಬಾಬಾ ದೇವಾಲಯ, ಗಾಂಧಿ ವೃತ್ತ, ಆರ್.ಎಫ್. ರಸ್ತೆ, ಧರ್ಮರಾಯಸ್ವಾಮಿ ದೇವಾಲಯ ರಸ್ತೆ, ಅಗ್ರಹಾರ ಬೀದಿ, ಕುಂಭೇಶ್ವರ ರಸ್ತೆ ಹಾಗೂ ಮಾರಿಕಾಂಭ ದೇವಾಲಯ ಮಾರ್ಗವಾಗಿ ಮಹಾರಾಜ ವೃತ್ತ ತಲುಪಿತು. ಅಲ್ಲಿಂದ ಬಾಬುರಾವ್ ರಸ್ತೆ, ಮಾರುತಿ ಬಡಾವಣೆ, ಬ್ರಹ್ಮಕುಮಾರಿ ರಸ್ತೆ ಹಾಗೂ ಅರಳೇರಿ ರಸ್ತೆಯ ಮೂಲಕ ಸಂಚರಿಸಿ ಮತ್ತೆ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಮರಳಿತು.
ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು ಮನೆಗಳ ಮುಂಭಾಗ ಹಾಗೂ ರಸ್ತೆಗಳಿಗೆ ನೀರು ಹಾಕಿ ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿದ್ದರು. ಭಗವಾಧ್ವಜಗಳನ್ನು ಅಳವಡಿಸಿ, ಗಣವೇಷಧಾರಿ ಸ್ವಯಂಸೇವಕರು ಸಾಗುತ್ತಿದ್ದಂತೆ ಹೂವಿನ ಪುಷ್ಪಗಳನ್ನು ಎರಚಿ ಸಂಭ್ರಮದಿಂದ ಸ್ವಾಗತಿಸಿದರು. ವಿವಿಧೆಡೆ ಸಾರ್ವಜನಿಕರು ಪಥಸಂಚಲನ ವೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟಿ, ಮಾಜಿ ಸಂಸದ ಎಸ್.ಎಂ. ಮುನಿಸ್ವಾಮಿ ಹಾಗೂ ಮಾಜಿ ಶಾಸಕ ಕೆ.ಎಸ್. ಮಂಜುನಾಥ್ಗೌಡ, ಆರ್ಎಸ್ಎಸ್ನ ಗೋವಿಂದರಾಜು, ರಾಮ್, ಪ್ರಕಾಶ್, ರವಿಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಈ.ರಾಮೇಗೌಡ, ಮಾಲೂರು ಪುರಸಭೆ ಮಾಜಿ ಅಧ್ಯ ಸಿ.ಪಿ.ನಾಗರಾಜ್, ಸದಸ್ಯ ಎಂ.ವಿ. ವೇಮನ, ವೆಂಕಟೇಶ್ ಪಥಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಪಥಸಂಚಲನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಂಟಿಂಗ್ಸ್, ಭಗವಾಧ್ವಜಗಳು ಹಾಗೂ ರಾಷ್ಟ್ರದ ಮಹನೀಯರ ೂಷವಾಕ್ಯಗಳನ್ನು ಒಳಗೊಂಡ ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು. ಇದರಿಂದ ಇಡೀ ನಗರ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು.
ಪಥಸಂಚಲನದ ವೇಳೆ ಯಾವುದೇ ಅಹಿತಕರ ಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು. ಅಪರ ಪೊಲೀಸ್ ಅಧೀಕ್ಷಕ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಕೆಎಸ್ಆರ್ಪಿ ಎರಡು ತುಕಡಿ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.