ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಕುರಿಗಳು ಮೃತಪಟ್ಟಿರುವ ಸ್ಥಳಕ್ಕೆ ಸಂಸದ ಎಂ.ಮಲ್ಲೇಶ್​ ಬಾಬು, ಅರಣ್ಯ ಉಪ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್​, ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಭೇಟಿ ನೀಡಿ ಪರಿಶೀಲಿಸಿದರು.  
ಕೋಲಾರ

ಚಿರತೆ ದಾಳಿಗೆ 12 ಕುರಿಗಳು ಬಲಿ

ಕಿರುವಾರ ಎಸ್.ಸುದರ್ಶನ್
ಕೋಲಾರ: ಚಿರತೆ ದಾಳಿ ಮಾಡಿ 12 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಕಳೆದ ಬುಧವಾರ ರಾತ್ರಿ ಜರುಗಿದೆ.
ಚಿನ್ನಾಪುರ ನಾರಾಯಣಸ್ವಾಮಿ ಎಂದಿನಂತೆ ಕುರಿಗಳನ್ನು ಮೇಯಿಸಿಕೊಂಡು ಬಂದು ಕೊಟ್ಟಿಗೆಯಲ್ಲಿ ಬಿಟ್ಟಿದ್ದಾರೆ. ರಾತ್ರಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ಗುರುವಾರ ಮುಂಜಾನೆ ಬಂದು ನೋಡಿದಾಗ ಕುರಿಗಳು ಮೃತಪಟ್ಟಿರುವುದನ್ನು ನೋಡಿ ಆತಂಕಗೊಂಡಿದ್ದಾರೆ. ಇದರಿಂದಾಗಿ ರೈತನಿಗೆ ಸುಮಾರು 3 ಲಕ್ಷ ಕ್ಕೂ ಅಧಿಕ ಆರ್ಥಿಕ ನಷ್ಟವುಂಟಾಗಿದೆ. ಆಗಿರುವ ನಷ್ಟಪರಿಹಾರವನ್ನು ಸರ್ಕಾರ ತುಂಬಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಮತ್ತು ಪಶು ಸಂಗೋಪನಾ ಇಲಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಟನಾ ಸ್ಥಳಕ್ಕೆ ಸಂಸದ ಎಂ.ಮಲ್ಲೇಶ್​ ಬಾಬು, ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್​, ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​, ಜೆಡಿಎಸ್​ ತಾಲೂಕು ಅಧ್ಯಕ್ಷ ಬಾಬು ಮೌನಿ ಭೇಟಿ ನೀಡಿದರು.
ರೈತನಿಗೆ ಧೈರ್ಯ ತುಂಬಿದ ಸಂಸದ ಎಂ.ಮಲ್ಲೇಶ್​ ಬಾಬು, ರೈತನಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಹಾಗೂ ಚಿರತೆ ದಾಳಿ ಪ್ರಕರಣಗಳು ಮರು ಕಳುಹಿಸದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
* ಕಾಡುಪ್ರಾಣಿಗಳ ದಾಳಿ ತಡೆಯಲು ಸೂಚನೆ
ಸಂಸದ ಎಂ.ಮಲ್ಲೇಶ್​ ಬಾಬು ಮಾತನಾಡಿ, ಕುರಿಗಳು ಮೃತಪಟ್ಟಿರುವ ಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸಂಜೆಯ ನಂತರ ಕ್ಯಾಮೆರಾ, ಗಸ್ತು ಹಾಕಿ ಕಾಡು ಪ್ರಾಣಿಯನ್ನು ಹಿಡಿಯಲು ಸೂಚಿಸಲಾಗಿದೆ ಎಂದು ಹೇಳಿದರು.
ಗ್ರಾಮಸ್ಥರು ಸಹ ಸಂಜೆಯ ನಂತರ ಓಂಟಿಯಾಗಿ ಓಡಾಡಲು ಹೋಗಬೇಡಿ, ಕೈಯಲ್ಲಿ ಟಾರ್ಚ್​ ಲೈಟ್​, ಕೋಲು ಇರಲಿ, ಯಾವುದೇ ರೀತಿ ಕಾಡು ಪ್ರಾಣಿಗಳು ಕಾಣಿಸಿಕೊಂಡಾಗ ಅರಣ್ಯ ಇಲಾಖೆ ಅಧಿಣ್ಯಾಧಿಕಾರಿಗಳಿ ತಿಳಿಸಬೇಕು ಎಂದರು.
ಪಶು ಸಂಗೋಪನಾ ಇಲಾಖೆಯಿಂದ ಕುರಿಯೊಂದಕ್ಕೆ 7,500 ರೂ. ಹಾಗೂ ಅರಣ್ಯ ಇಲಾಖೆಯಿಂದ 4 ಸಾವಿರ ಪರಿಹಾರ ದೊರೆಯಲಿದ್ದು, ಪಶು ಸಂಗೋಪಾನೆ ಇಲಾಖೆಯಿಂದ ಪರಿಹಾರ ನೀಡಲು ತಿಳಿಸಲಾಗಿದೆ. ಇಂತಹ ಟನೆಗಳು ಮರುಕಳುಹಿಸದಂತೆ ಎಚ್ಚರವಹಿಸಬೇಕಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
* ಮರಣೋತ್ತರ ವರದಿ ಆಧಾರದ ಮೇರೆಗೆ ಪರಿಹಾರ
ಡಿಸಿಎ್​ ಸರಿನಾ ಸಿಕ್ಕಲಿಗರ್​ ಮಾತನಾಡಿ, ಚಿನ್ನಾಪುರ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಕುರಿಗಳು ಮೃತಪಟ್ಟಿರುವುದಾಗಿ ಗ್ರಾಮಸ್ಥರು ತಿಳಿಸಿದ್ದು, ಮರಣೋತ್ತರ ಪರೀೆಯ ನಂತರ ಯಾವ ಪ್ರಾಣಿ ದಾಳಿಯಿಂದ ಮೃತಪಟ್ಟಿವೆ ಎಂಬುದು ತಿಳಿಯಲಿದ್ದು, ವರದಿ ಆಧಾರದ ಮೇರೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಹೆಜ್ಜೆ ಗುರುತು ಅಥವಾ ಯಾವುದೇ ಕುರುಗಳು ಪತ್ತೆಯಾಗುವ ಸಾಧ್ಯತೆಯಿದೆ. ಈ ಭಾಗದಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಂಡ ಕೂಡಲೇ ಇಲಾಖೆಗೆ ಮಾಹಿತಿ ತಿಳಿಸಿದರೆ ರಕ್ಷಣೆ ನೀಡಲಾಗುತ್ತದೆ. ಇದೀಗ ಗ್ರಾಮದ ಸುತ್ತಮುತ್ತಲು ಬೋನ್​ ಇಟ್ಟು ಚಿರತೆಯನ್ನು ಹಿಡಿಯಲು ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
* ಕನಿಷ್ಠ 20 ಸಾವಿರ ಪರಿಹಾರಕ್ಕೆ ಒತ್ತಾಯ
ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಮಾತನಾಡಿ, ಕಾಡುಪ್ರಾಣಿ ದಾಳಿಯಿಂದ ಬೆಲೆ ಬಾಳುವ ಕುರಿಗಳು ಮೃತಪಟ್ಟಿವೆ, ಇದರಿಂದ ರೈತನಿಗೆ ಅಪಾರ ನಷ್ಟವುಂಟಾಗಿದ್ದು, ನೆರವಿಗೆ ಅಧಿಕಾರಿಗಳು ಧಾವಿಸಿ ಒಂದು ಕುರಿಗೆ ಕನಿಷ್ಟ 20 ಸಾವಿರ ರೂ. ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಅರಣ್ಯ, ಬೆಟ್ಟ ಗುಡ್ಡಗಳು ಇರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ದಾಳಿ ಮಾಡುತ್ತಿರುವ ಟನೆಗಳು ಸಂಭವಿಸುತ್ತಿವೆ. ಕಾಡು ಪ್ರಾಣಿಗಳು ಗ್ರಾಮದೊಳಗೆ ಪ್ರವೇಶ ಮಾಡದಂತೆ ಅರಣ್ಯ ಇಲಾಖೆಯವರು ಎಚ್ಚರವಹಿಸಬೇಕು ಎಂದರು.
* ಘಟನೆಯಿಂದ ಅಘಾತ
ರೈತ ನಾರಾಯಣಸ್ವಾಮಿ ಮಾತನಾಡಿ, ಕಳೆದ 6&7 ತಿಂಗಳ ಹಿಂದೆಯಷ್ಟೆ ಕುರಿಗಳನ್ನು ಖರೀದಿ ಮಾಡಿ ತಂದಿದ್ದು, ಕೆಲ ಕುರಿಗಳು ಕೆಲವೇ ದಿನಗಳಲ್ಲಿ ಮರಿಗಳನ್ನು ಹಾಕುತ್ತಿದ್ದವು, ಎಂದಿನಂತರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದು, ರಾತ್ರಿ 1 ರತನಕವು ಓಡಾಡಿಕೊಂಡೆ ಇದ್ದೆ, 3 ಗಂಟೆ ನಂತರ ಈ ಟನೆ ನಡೆದಿರಬಹುದು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಟನೆಯಿಂದ ಕುರಿಗಳು ಮೃತಪಟ್ಟಿದ್ದು ಸರ್ಕಾರ ನಮಗೆ ಪರಿಹಾರ ಕಲ್ಪಿಸಬೇಕು, ಕುರಿಗಳನ್ನು ಮೇಯಿಸಿಕೊಂಡೆ ಜೀವನ ನಡೆಸಲಾಗುತ್ತಿತ್ತು, ಈ ಟನೆಯಿಂದ ಏನು ಮಾಡಬೇಕು ಎಂಬುದು ದಿಕ್ಕು ದೋಚುತ್ತಿಲ್ಲ ಎಂದು ನೋವುವ್ಯಕ್ತಪಡಿಸಿದರು.