ಜಿಲ್ಲೆ

ಕೋಲಾರ: ದ್ವಿಚಕ್ರ ಶೋ ರೂಂಗೆ ಬೆಂಕಿ, 25 ವಾಹನಗಳು ಭಸ್ಮ

Webdesk - Mallikarjun K R

ಬೇತಮಂಗಲ: ಇಲ್ಲಿನ ಕೆಜಿಎಫ್ ರಸ್ತೆಯಲ್ಲಿರುವ ಮಂಜುನಾಥ ಶೋ ರೂಂನಲ್ಲಿ ಬುಧವಾರ ಬೆಳಗ್ಗೆ 10 ಗಂಟೆ ವೇಳೆ ಅಗ್ನಿ ಅವಘಡ ಸಂಭವಿಸಿ ಸುಮಾರು 25 ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ. ಶೋ ರೂಂ ಪಕ್ಕದಲ್ಲಿದ್ದ ಶ್ರೀಹರಿ ಸೂಪರ್ ಮಾರ್ಕೆಟ್ ಮಳಿಗೆಗೆ ಬೆಂಕಿ ತಾಕಿದ್ದು ಹಾನಿಯಾಗಿದೆ.

ಸರ್ವೀಸ್​ಗೆಂದು ಬಂದ ದ್ವಿಚಕ್ರವಾಹನಕ್ಕೆ ಪೆಟ್ರೋಲ್​ ಸುರಿಯುವ ವೇಳೆ ಸೈಲೆನ್ಸರ್​ ಮೇಲೆ ಪೆಟ್ರೋಲ್​ ಸುರಿದಿದೆ. ಶಾಕಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಅಗ್ನಿ ಶಾಮಕ ದಳ ಖಚಿತಪಡಿಸಿಲ್ಲ.

ಅಗ್ನಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದರೆ ಕಟ್ಟಡ ಸೇರಿದಂತೆ ಕೋಟ್ಯಂತರ ಮೌಲ್ಯದ ದ್ವಿಚಕ್ರ ವಾಹನಗಳು ಸುಟ್ಟ ನಾಶವಾಗಿವೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಸ್ಥಳೀಯರು ನೀರು ಟ್ಯಾಂಕರ್ ತರಿಸಿ ಬೆಂಕಿ ನಂದಿಸಿದರು.  ಕೆಜಿಎಫ್ ಬಂದ ಅಗ್ನಿ ಶಮನ ವಾಹನಗಳು ಬೆಂಕಿ ನಂದಿಸಿದವು. ಸ್ಥಳೀಯರು, ಪೊಲೀಸರು ಸಮಯ ಪ್ರಜ್ಷೆಯಿಂದ ಪ್ರಾಣಹಾನಿ ಸಂಭವಿಸಿಲ್ಲ.