ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ
ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಕಾಂಗ್ರೆಸ್ ವಾತ್ರವಲ್ಲ, ಜೆಡಿಎಸ್, ಬಿಜೆಪಿ ಸ್ಪರ್ಧಾಕಾಂಕ್ಷಿಗಳಲ್ಲಿಯೂ ಆತಂಕ ಶುರುವಾಗಿದೆ.
ಸಿದ್ದರಾಮಯ್ಯ ಸ್ಪರ್ಧಿಸಿದ್ದೇ ಆದರೆ ಬಿಜೆಪಿ, ಜೆಡಿಎಸ್ ಕಾರ್ಯತಂತ್ರ ಬದಲಾಗುವುದರ ಜತೆಗೆ ಅಭ್ಯರ್ಥಿಗಳೂ ಬದಲಾಗುತ್ತಾರೆ ಎಂಬ ವಾತುಗಳು ಕೇಳಿ ಬರುತ್ತಿದ್ದು, ಇಲ್ಲಿಯ ತನಕ ಧಾರಾಳವಾಗಿ ಹಣದ ಹೊಳೆ ಹರಿಸುತ್ತಿದ್ದವರು ಈಗ ಬರಿಗೈ ತೋರುತ್ತಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆ ಮುನ್ನೆಲೆಗೆ ಬಾರದಿದ್ದಾಗ ಕ್ಷೇತ್ರದಲ್ಲಿ ಸವಾಜ ಸೇವಕರದ್ದೇ ಕಾರುಬಾರು. ಕಾಂಗ್ರೆಸ್ ಕೈಬಿಡುವುದಿಲ್ಲವೆಂದು ದೊಡ್ಡವಲ್ಲಬ್ಬಿ ಲಕ್ಷ್ಮಣ್‌ಗೌಡ, ಅರಿಕೆರೆ ಮಂಜುನಾಥಗೌಡ, ಕೆಜಿಎಫ್ ಬಾಬು ಕ್ಷೇತ್ರಾದ್ಯಂತ ಕ್ರೀಡಾಕೂಟ, ದೇಗುಲಗಳ ಜೀರ್ಣೋದ್ಧಾರ, ನಾಟಕಗಳ ಪ್ರದರ್ಶನಕ್ಕೆ ದೇಣಿಗೆ ಮತ್ತು ಅಸಹಾಯಕರು, ಕರೊನಾ ಸಂಕಷ್ಟಕ್ಕೀಡಾದವರಿಗೆ ನೆರವು ನೀಡುವಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರು. ಕಾಂಗ್ರೆಸ್‌ನ ಜಿಲ್ಲಾ ನಾಯಕರೂ (ಕೆ.ಎಚ್.ಮುನಿಯಪ್ಪ ಬಣ) ಸಹ ಇವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರಂತೆ. ಆದರೆ ಅಂತಹ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇವರನ್ನು ನಡುನೀರಲ್ಲಿ ಕೈ ಬಿಟ್ಟರು. ಇದರ ಪರಿಣಾಮ ಕ್ಷೇತ್ರದಲ್ಲಿ ಇವರ‌್ಯಾರೂ ಸಕ್ರಿಯ ರಾಜಕಾರಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.
ಇನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಾಂಗ್ರೆಸ್‌ನಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರ ಬದಲಿಗೆ ವಾಜಿ ಶಾಸಕ ಮುಳಬಾಗಿಲಿನ ಕೊತ್ತೂರು ಮಂಜುನಾಥ್ ಹೆಸರನ್ನು ವಾಜಿ ಸ್ಪೀಕರ್ ರಮೇಶ್‌ಕುವಾರ್ ಬಣದ ನಾಯಕರು ಮುನ್ನೆಲೆಗೆ ತಂದರು. ನಂತರ ಇದೇ ನಾಯಕರು ಸಿದ್ದರಾಮಯ್ಯ ಸ್ಪರ್ಧೆಗೆ ಒಲವು ತೋರಿ ಇಬ್ಬರೂ ಆಕಾಂಕ್ಷಿಗಳನ್ನು ಸಿದ್ದರಾಮಯ್ಯ ಬಳಿ ಕರೆದೊಯ್ದು ಬೆಂಬಲ ೋಷಿಸುವಂತೆ ವಾಡಿದರು. ಇದರಿಂದ ಅಸವಾಧಾನಗೊಂಡ ಗೋವಿಂದಗೌಡರು ಮೌನಕ್ಕೆ ಶರಣಾದರು. ಮತ್ತೊಂದೆಡೆ ವಾಜಿ ಪ್ರಧಾನಿ ದೇವೇಗೌಡ, ವಾಜಿ ಮುಖ್ಯಮಂತ್ರಿ ಎಚ್.ಡಿ.ಕುವಾರಸ್ವಾಮಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರನ್ನು ಜೆಡಿಎಸ್ ಸ್ಪರ್ಧೆಗಿಳಿಸುವ ಸಾಧ್ಯತೆ ಇದೆ ಎಂಬ ವಾತುಗಳೂ ಕೇಳಿ ಬರುತ್ತಿವೆ.
ಇನ್ನು ಜೆಡಿಎಸ್ ಆಕಾಂಕ್ಷಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕೆಂಬ ಭರಾಟೆಯಲ್ಲಿ ಸಿ.ಎಂ.ಇಬ್ರಾಹಿಂ ಹೆಸರನ್ನು ತೇಲಿಬಿಡಲಾಗಿದೆ. ಆಕಾಂಕ್ಷಿಗಳಾಗಿದ್ದ ಸವಾಜ ಸೇವಕ ಸಿಎಂಆರ್ ಶ್ರೀನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷೆ ರಾಜರಾಜೇಶ್ವರಿ ಹೈಕವಾಂಡ್‌ನಿಂದ ಅಭ್ಯರ್ಥಿ ಕುರಿತು ಸ್ಪಷ್ಟ ತೀರ್ವಾನ ಹೊರಬೀಳುವ ತನಕ ‘ಇನ್ವೆಸ್ಟ್’ ವಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ರಾಜಕಾರಣದಿಂದ ದೂರವಾಗುವುದೂ ಬೇಡ, ಕೈಸುಟ್ಟುಕೊಳ್ಳುವುದೂ ಬೇಡ ಎಂಬ ತೀರ್ವಾನಕ್ಕೆ ಬಂದಂತಿದೆ.
ಆಟೋಟಗಳಿಗೆ ಖರ್ಚುವೆಚ್ಚ, ಪುಸ್ತಕಗಳ ವಿತರಣೆ, ಆರೋಗ್ಯ ತಪಾಸಣಾ ಶಿಬಿರಗಳು ಸೇರಿ ವಿವಿಧ ಸವಾಜ ಸೇವೆಗಳ ಮೂಲಕ ಪ್ರಚಾರದಲ್ಲಿರುವ ಸಿಎಂಆರ್ ಶ್ರೀನಾಥ್, ಮೊದಲಿನಷ್ಟು ಹುರುಪಿನಿಂದ ಸಂಟನೆಯಲ್ಲಿ ತೊಡಗಿಸಿಕೊಂಡಿಲ್ಲವಾದರೂ, ಜಿಲ್ಲಾ ನಾಯಕರ ಭರವಸೆ ಮೇರೆಗೆ ಸವಾಜಸೇವೆ ಮುಂದುವರಿಸಿದ್ದಾರೆ. ಆದರೆ ಕರೊನಾ ಸಂಕಷ್ಟ ಕಾಲದಲ್ಲಿ ದೊಡ್ಡಮಟ್ಟದಲ್ಲಿ ನೆರವು, ಸರ್ಕಾರಿ ಆಸ್ಪತ್ರೆಗಳಿಗೆ ಔಷಧ, ವಿತರಣೆ ಸೇರಿ ಪಕ್ಷ ಸಂಟನೆಯಲ್ಲಿ ಸಕ್ರಿಯವಾಗಿದ್ದ ಕುರ್ಕಿ ರಾಜರಾಜೇಶ್ವರಿ ಮೌನಕ್ಕೆ ಶರಣಾಗಿದ್ದಾರೆ.
ವರ್ತೂರು ಪ್ರಕಾಶ್‌ಗೂ ಟಿಕೆಟ್ ಅನುವಾನ: ಕ್ಷೇತ್ರದಲ್ಲಿ ನಿತ್ಯ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರಿದರೆಂದು ೆಟೋ, ಸುದ್ದಿಯನ್ನು ವಾಧ್ಯಮಗಳಿಗೆ ರವಾನಿಸುತ್ತಿರುವ ವಾಜಿ ಸಚಿವ ವರ್ತೂರು ಪ್ರಕಾಶ್ ನಮ್ಮ ಅಭ್ಯರ್ಥಿ ಎಂದು ಉಸ್ತುವಾರಿ ಸಚಿವ ಮುನಿರತ್ನ, ಸಚಿವ ಡಾ.ಕೆ.ಸುಧಾಕರ್ ಹೇಳುತ್ತಿದ್ದಾರಾದರೂ, ಇದು ಮೂಲ ಬಿಜೆಪಿಗರು ಮತ್ತು ಸಂ ಪರಿವಾರದವರಿಗೆ ಸುತಾರಾಂ ಇಷ್ಟವಿಲ್ಲ. ಚುನಾವಣೆಯಲ್ಲಿ ಕುರುಬ ಸಮುದಾಯದ ಮುಖಂಡರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಜತೆ ರಾಜಿಯಾದರೆ ಪಕ್ಷದ ಮರ್ಯಾದೆ ಮೂರಾಬಟ್ಟೆಯಾಗುತ್ತದೆ. ಇನ್ನು ಗೆದ್ದ ಮೇಲೂ ಅವರು ಕೈಕೊಡುವುದಿಲ್ಲ ಎಂಬುದಕ್ಕೆ ಖಾತ್ರಿ ಇಲ್ಲ. ಹೀಗಾಗಿ ಅವರಿಗೆ ಟಿಕೆಟ್ ಸಿಗುವುದಿಲ್ಲ. ಹೈಕವಾಂಡ್ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬ ವಾತುಗಳು ಬಲವಾಗಿ ಕೇಳಿಬರುತ್ತಿವೆ.
5 ರಿಂದ 10 ಕೋಟಿ ರೂ. ಕೈ ಕಚ್ಚಿಸಿಕೊಂಡರು!: ಕ್ಷೇತ್ರದಲ್ಲಿ ಸವಾಜ ಸೇವಕರು ಖರ್ಚು ವಾಡಿದ್ದು ಲಕ್ಷಗಳಲ್ಲಿ ಅಲ್ಲ, ಕೋಟಿಗಳಲ್ಲಿ. ಕಷ್ಟವೆಂದು ಬಂದವರಿಗೆ ನೋಟುಗಳನ್ನು ಕೊಡುತ್ತಿದ್ದರು. ಗ್ರಾಮಗಳಿಗೆ ಅಗತ್ಯವಾದ ಮೂಲಸೌಲಭ್ಯ, ದೇವಾಲಯ, ಮದುವೆ, ಮುಂಜಿ, ತಿಥಿ, ಕ್ರೀಡೆ, ನಾಟಕ, ಕಡೆಗೆ ಬಾಡೂಟಕ್ಕೂ ಹಣ ಕೊಟ್ಟರು. ಜನರು ಈ ಜನಸೇವಕರನ್ನು ಹೊತ್ತು ಸಂಭ್ರಮಿಸಿದ್ದರು. ಆದರೆ ಕಾಂಗ್ರೆಸ್ ವಾತ್ರವಲ್ಲ, ಇತರ ಪಕ್ಷಗಳವರೂ ಇವರ ಸೇವೆ ಗುರುತಿಸದೇ ಹೋದಾಗ, ಸವಾಜ ಸೇವೆ ಬಂದ್ ವಾಡಿ ಕ್ಷೇತ್ರ, ಜನರ ಸಹವಾಸವೇ ಬೇಡ ಎಂದು ಅಜ್ಞಾತವಾಗಿದ್ದಾರೆ.
ಸಿದ್ದರಾಮಯ್ಯಗೆ ಸುಲಭವಲ್ಲ: ಡಾ.ಜಿ.ಪರಮೇಶ್ವರ್, ಖರ್ಗೆ, ಕೆ.ಎಚ್.ಮುನಿಯಪ್ಪ ಮೂಲೆಗುಂಪಾಗುವುದರಲ್ಲಿ ಸಿದ್ದರಾಮಯ್ಯ ಪಾತ್ರವಿದೆ ಎಂಬ ಅಭಿಪ್ರಾಯ ಪ್ರಜ್ಞಾವಂತ ದಲಿತರಲ್ಲಿದೆ. ಕ್ಷೇತ್ರದ 2 ಲಕ್ಷ 20 ಸಾವಿರ ಮತದಾರರ ಪೈಕಿ 70 ಸಾವಿರಕ್ಕೂ ಹೆಚ್ಚಿರುವ ಎಸ್ಸಿ, ಎಸ್ಟಿ ಸಮುದಾಯ ಸಿದ್ದರಾಮಯ್ಯ ಕೈಹಿಡಿಯುವ ಸಾಧ್ಯತೆ ಕಡಿಮೆ. ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿದರೆ 65 ಸಾವಿರದಷ್ಟಿರುವ ಮುಸ್ಲಿಂ, ಕ್ರಿಶ್ಚಿಯನ್ ಮತಗಳು, 50 ಸಾವಿರಕ್ಕೂ ಹೆಚ್ಚಿರುವ ಒಕ್ಕಲಿಗರ ಮತಗಳು ಹೆಚ್ಚಿನ ಪ್ರವಾಣದಲ್ಲಿ ಜೆಡಿಎಸ್ ಅಭ್ಯರ್ಥಿಗೇ ಬೀಳಬಹುದು. ಅಷ್ಟೇ ಪ್ರವಾಣದಲ್ಲಿರುವ ಹಿಂದುಳಿದವರು, 20 ಸಾವಿರದಷ್ಟಿರುವ ಕುರುಬರ ಮತಗಳು ವರ್ತೂರು ಸ್ಪರ್ಧಿಸಿದರೆ ಹಂಚಿಹೋಗುತ್ತವೆ. ಆಗ ತ್ರಿಕೋನ ಸ್ಪರ್ಧೆ ಏರ್ಪಟ್ಟು ಸಿದ್ದರಾಮಯ್ಯ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ.
ಇವರೇ ಅಭ್ಯರ್ಥಿ ಎನ್ನುವ ಸ್ಥಿತಿ ಇಲ್ಲ: ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಪ್ರತಿಷ್ಠಿತ ಕ್ಷೇತ್ರ ಕೋಲಾರ. ಜಿಲ್ಲಾಕೇಂದ್ರವೂ ಆಗಿರುವುದರಿಂದ ಇಲ್ಲಿ ಶಾಸಕರಾದವರ ಪ್ರಭಾವ ಜಿಲ್ಲಾಡಳಿತ, ಜಿಪಂ ಸೇರಿ ಆಡಳಿತದ ಮೇಲೆ ನೇರ ಪ್ರಭಾವ ಬೀರುತ್ತದೆ. ಎಂ.ವಿ.ಕೃಷ್ಣಪ್ಪ, ಸಿ.ಬೈರೇಗೌಡ, ಪಿ.ವೆಂಕಟಗಿರಿಯಪ್ಪ ಅಂತಹ ಖಡಕ್ ರಾಜಕಾರಣಿಗಳನ್ನು ಕಂಡ ಕೋಲಾರದಲ್ಲಿ ಎರಡು ರಾಜಕೀಯ ಪಕ್ಷಗಳು, ಪ್ರಾದೇಶಿಕ ಪಕ್ಷ ಇಂತಹವರೇ ನಮ್ಮ ಅಭ್ಯರ್ಥಿ ಎಂದು ೋಷಿಸುವ ಸ್ಥಿತಿಯಲ್ಲಿಲ್ಲ. ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಹುತೇಕ ಪೂರ್ಣಗೊಳಿಸಿದ್ದರೂ, ಅಭ್ಯರ್ಥಿ ಆಯ್ಕೆಯನ್ನು ಆಯಾ ಪಕ್ಷಗಳ ಸ್ವಯಂಕೃತ ಅಪರಾಧದಿಂದ ಕಗ್ಗಂಟಾಗಿಸಿಕೊಂಡು ಕುಳಿತಿರುವುದು ಕ್ಷೇತ್ರದ ದೌರ್ಭಾಗ್ಯವೇ ಸರಿ.