ಕೋಲಾರ: ಪ್ರತಿಯೊಂದು ಚುನಾವಣೆ ಕ್ಷ್ರೇತ್ರ ಜನಸಂಖ್ಯೆಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ವ್ಯತ್ಯಾಸ ಬರದಂತೆ ನಿಗಾ ವಹಿಸಲಾಗಿದೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಪ್ರಸ್ತುತ ಸೀಮೆಯನ್ನು ನಿಗದಿಸಲಾಗಿದೆ. ಈ ಬಗ್ಗೆ ಯಾವುದೇ ಆೇಪಣೆ ಇದ್ದಲ್ಲಿ ಲಿಖಿತ ಮೂಲಕ ಮನವಿ ನೀಡಿದಲ್ಲಿ ಅದರ ಸಾಧಕ ಬಾಧಕಗಳನ್ನು ನಿಯಮಾವಳಿಗಳನ್ನು ಮೀರದಂತೆ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ
ಅಕ್ರಂ ಪಾಷಾ ಹೇಳಿದರು.
ಗ್ರಾ.ಪಂ. ಹಾಗೂ ತಾ.ಪಂ. ಚುನಾವಣೆ ಕ್ಷ್ರೇತ್ರಗಳಿಗೆ ಸದಸ್ಯ ಸ್ಥಾನಗಳನ್ನು ರ್ನಿಣಯಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. 2011ರ ಜನಗಣತಿಯಂತೆ ಗ್ರಾಮೀಣ ಜನಸಂಖ್ಯೆಯ ಮಾಹಿತಿ ಆಧಾರದ ಮೇಲೆ ಜಿಲ್ಲೆಯಲ್ಲಿ ಒಟ್ಟು 10,67,063 ಜನಸಂಖ್ಯೆ ಹೊಂದಿದ್ದು, ಇವರಲ್ಲಿ 5,40,598 ಪುರುಷರು ಹಾಗೂ 5,26,465 ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 107 ತಾ.ಪಂ. ಸದಸ್ಯರು ಹಾಗೂ 29 ಜಿ.ಪಂ. ಸದಸ್ಯರಿದ್ದಾರೆ ಎಂದರು.
ಕೆಜಿಎಫ್ ತಾಲೂಕಿನಲ್ಲಿ 12, ಬಂಗಾರಪೇಟೆ 16, ಶ್ರೀನಿವಾಸಪುರ 18, ಮಾಲೂರು 20, ಮುಳಬಾಗಿಲಿನಲ್ಲಿ 21 ಹಾಗೂ ಕೋಲಾರ ತಾಲೂಕಿನಲ್ಲಿ 20 ತಾ.ಪಂ ಕ್ಷ್ರೇತ್ರಗಳನ್ನು ಗುರುತಿಸಲಾಗಿದೆ. ಅದರಂತೆ ಕೆಜಿಎಫ್ 3, ಬಂಗಾರಪೇಟೆ 4, ಶ್ರೀನಿವಾಸಪುರ 5, ಮಾಲೂರು 5, ಮುಳಬಾಗಿಲು 6 ಹಾಗೂ ಕೋಲಾರ ತಾಲೂಕಿನಲ್ಲಿ 6 ಜಿ.ಪಂ. ಕ್ಷ್ರೇತ್ರ ಗಳನ್ನಾಗಿ ವಿಂಗಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.
ಶಾಸಕ ಕೆ.ವೈ.ನಂಜೇಗೌಡ, ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್, ಚುನಾವಣಾ ತಹಸೀಲ್ದಾರ್ ನಾಗವೇಣಿ, ಚುನಾವಣಾ ಶಿರಸ್ತೇದಾರ್ ಮಂಜುಳಾ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಇದ್ದರು.
ಅಧಿಸೂಚನೆಯಂತೆ ಕ್ಷೇತ್ರ ವಿಂಗಡಣೆ: ಗ್ರಾಪಂ, ತಾಪಂ ಹಾಗೂ ಜಿಪಂ ಕ್ಷ್ರೇತ್ರಗಳನ್ನು ಮರುವಿಂಗಡಣೆಗೊಳಿಸಲಾಗುತ್ತಿದೆ. ತಾಲೂಕು ಪಂಚಾಯಿತಿ ಚುನಾಯಿತರ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸುವಾಗ ಪ್ರತಿ 10,000 ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯರು ಇರಬೇಕೆಂಬ ನಿಯಮಾವಳಿ ಇದೆ. ಹೊಸದಾಗಿ ರಚಿಸುವ ಜಿ.ಪಂ ಕ್ಷ್ರೇತ್ರಗಳ ಹೆಸರನ್ನು ನಿಗದಿಪಡಿಸುವಾಗ 2015ರ ಅಧಿಸೂಚನೆಯಲ್ಲಿ ಇದ್ದಂತೆ ನಿಗದಿಪಡಿಸಲಾಗಿದೆ. ಒಂದು ವೇಳೆ ಅಧಿಸೂಚನೆಯಲ್ಲಿ ಇಲ್ಲದಿದ್ದಲ್ಲಿ ಆಯಾ ಕ್ಷ್ರೇತ್ರದ ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರನ್ನು ಆ ಚುನಾವಣೆ ಕ್ಷ್ರೇತ್ರದ ಹೆಸರನ್ನಾಗಿ ಪರಿಗಣಿಸಲಾಗುವುದು. ಒಂದು ವೇಳೆ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರನ್ನಲ್ಲದೆ ಐತಿಹಾಸಿಕ ಶೈಕ್ಷಣಿಕ ಸಾಂಸತಿಕ ವಾಣಿಜ್ಯ ಇತ್ಯಾದಿ ಮಹತ್ವವಿರುವ ಗ್ರಾಮದ ಹೆಸರನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕ್ಷೇತ್ರ ವಿಂಗಡಣೆ ಅಚ್ಚುಕಟ್ಟು
ಅಕ್ಕಪಕ್ಕದ ಭೌಗೋಳಿಕವಾಗಿ ಹೊಂದಿಕೊಂಡಿರುವ ಗ್ರಾ.ಪಂ.ಗಳನ್ನು ಒಟ್ಟುಗೂಡಿಸಲಾಗುವುದು. ಜಿ.ಪಂ. ಕ್ಷ್ರೇತ್ರದೊಳಗೆ ಬರುವ ಪೂರ್ಣ ಗ್ರಾ.ಪಂ.ಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಒಟ್ಟುಗೂಡಿಸಿ ತಾ.ಪಂ ಕ್ಷ್ರೇತ್ರಗಳನ್ನು ನಿರ್ಧರಿಸಲಾಗಿದೆ. ತಾ.ಪಂ.ಗಳನ್ನು ಜಿ.ಪಂ. ೇತ್ರದೊಳಗೆ ಒಟ್ಟುಗೂಡಿಸುವ ಸಂದರ್ಭ ಯಾವುದೇ ಕಾರಣಕ್ಕೂ ಒಂದು ತಾ.ಪಂ. ಕ್ಷ್ರೇತ್ರವು ಎರಡು ಜಿ.ಪಂ. ಕ್ಷ್ರೇತ್ರಗಳಿಗೆ ವಿಭಜನೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಡಿಸಿ ಹೇಳಿದರು.