ಜಿ.ನಾಗರಾಜ್, ಬೂದಿಕೋಟೆ
ಎಸಿ ರೂಮಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಉದ್ಯೋಗಿಗಳು, ಕರೊನಾ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡವರು ಮರಳಿ ಊರಿನತ್ತ ಮುಖ ಮಾಡಿ ಕೃಷಿ ಹಾಗೂ ಹೈನುಗಾರಿಕೆ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರು ನಗರ ಸೇರಿ ಇತರ ಪ್ರದೇಶಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ವಾಡುತ್ತಿದ್ದ ಗ್ರಾಮೀಣ ಯುವಕರು ಕೆಲಸ ಕಳೆದುಕೊಂಡರೂ ಧೃತಿಗೆಡದೆ ಸ್ವಂತ ಗ್ರಾಮಗಳಲ್ಲಿ ಪರ್ಯಾಯ ಆದಾಯಕ್ಕಾಗಿ ಹೈನುಗಾರಿಕೆ, ಪಶು ಸಂಗೋಪನೆ, ಕೃಷಿ ಆಯ್ಕೆ ವಾಡಿಕೊಂಡು ಪ್ರತಿನಿತ್ಯ ಬೆವರು ಹರಿಸುತ್ತಿದ್ದಾರೆ.
ಹೈನುಗಾರಿಕೆಗೆ ಒತ್ತು: ಹೈನುಗಾರಿಕೆಗೆ ಒತ್ತು ನೀಡಿ 2-3 ಹಸುಗಳನ್ನು ಖರೀದಿಸಿ ಪ್ರತಿದಿನ 20-30 ಲೀಟರ್ ಹಾಲನ್ನು ವಾರಾಟ ವಾಡಿ ತಿಂಗಳಿಗೆ 15ರಿಂದ 20 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಲಾಕ್‌ಡೌನ್ ಎಲ್ಲ ವರ್ಗದವರಿಗೂ ಪಾಠ ಕಲಿಸಿದ್ದು, ಪ್ರಕೃತಿ ಸೂಕ್ತ ಸಮಯದಲ್ಲಿ ಎಲ್ಲವನ್ನೂ ಮರಳಿ ನೀಡುತ್ತಿದೆ. ಕೃಷಿಭೂಮಿ ಹೊಂದಿರುವ ವಿದ್ಯಾವಂತರು ಮರಳಿ ಕೃಷಿಗೆ ಹಿಂದಿರುಗುತ್ತಿದ್ದಾರೆ.
ಸುಸ್ಥಿರ ಜೀವನದ ಕನಸು: ಪ್ರತಿದಿನ ಗಂಟೆಗಟ್ಟಲೆ ಸಂಚರಿಸಿ ಕಷ್ಟಪಟ್ಟು ದುಡಿದರೆ ತಿಂಗಳಿಗೆ 15 ಸಾವಿರ ಗಳಿಸಬಹುದು. ಎರಡು ಹಸುಗಳನ್ನು ಪೋಷಸಿ ಹಾಲು ವಾರಟ ವಾಡಿದರೆ ಅದೇ ಹಣ ಸಿಗುತ್ತದೆ ಎಂಬ ಅಭಿಪ್ರಾಯ ಹೊಂದಿ ಕೃಷಿಯಿಂದ ಸುಸ್ಥಿರ ಜೀವನ ನಡೆಸುವ ಕನಸನ್ನು ಸಾಕಷ್ಟು ಯುವಕರು ಕಂಡಿದ್ದು, ಪೂರ್ಣ ಸಮಯ ವ್ಯವಸಾಯದ ಹಾದಿ ಹಿಡಿದಿದ್ದಾರೆ.
ಹಸುಗಳಿಗೆ ಡಿವಾಂಡ್: ಉತ್ತಮ ಮಳೆಯಿಂದ ಬೇಕಾಗುವಷ್ಟು ಮೇವು ಸಿಗುತ್ತಿರುವ ಕಾರಣದಿಂದ ಮತ್ತು ನಿರುದ್ಯೋಗದಿಂದ ಬಹಳಷ್ಟು ಜನ ಹೈನುಗಾರಿಕೆಗೆ ಮುಂದಾಗಿರುವ ಕಾರಣ ಸೀಮೆ ಹಸುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಬೆಲೆಯೂ ಏರಿಕೆಯಾಗುತ್ತಿದೆ.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕೆಲಸ ವಾಡುತ್ತಿದ್ದು, ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡೆ. ಜೀವನೋಪಾಯಕ್ಕೆ ಕಷ್ಟವಾಗಬಾರದೆಂದು 3 ಸೀಮೆ ಹಸು ಸಾಕಾಣಿಕೆಗೆ ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ಕನಿಷ್ಠ 15 ಹಸು ಸಾಕಿ ಮಿನಿ ಡೇರಿ ಸ್ಥಾಪಿಸಬೇಕೆಂಬ ಉದ್ದೇಶವಿದೆ. ಹರೀಶ್ ಬಾಬು, ರಾಮಸಂದ್ರ ಗ್ರಾಮ 15 ವರ್ಷ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕರೋನಾದಿಂದ ಕೆಲಸ ಬಿಟ್ಟು ಊರಿನಲ್ಲಿ ತಂದೆಯೊಂದಿಗೆ 7 ಹಸು ಸಾಕುತ್ತಾ ಸುಮಾರು 40 ಲೀಟರ್ ಹಾಲನ್ನು ಮಾರಾಟ ಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನು 10 ಹಸು ಸಾಕುವ ಆಲೋಚನೆ ಇದೆ. ಮೋಹನ್, ಬೂದಿಕೋಟೆ ನಿವಾಸಿ