ಕೋಲಾರ: ಗೊತ್ತಿದ್ದೋ, ಗೊತ್ತಿಲ್ಲದೆಯೇ ಸರ್ಕಾರಿ ಜಾಗದಲ್ಲಿ ವ್ಯವಸಾಯ ವಾಡುತ್ತಿರುವ ರೈತರ ಮೇಲೆ ದಬ್ಬಾಳಿಕೆ ತೋರದೆ, ಕೊಂಚ ಕಾಲಾವಕಾಶ ಕೊಟ್ಟು ನಂತರ ಒತ್ತುವರಿ ತೆರವುಗೊಳಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುವಾರ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಹೊಳಲಿ ಗ್ರಾಮದಲ್ಲಿ ಶುಕ್ರವಾರ ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಾತನಾಡಿ, ಹೊಳಲಿ ಗ್ರಾಮದ ಸ.ನಂ.103ರಲ್ಲಿ ಕೋಚಿಮುಲ್‌ಗೆ 50 ಎಕರೆ, ಕ್ರಿಕೆಟ್ ಸ್ಟೇಡಿಯಂಗೆ 16 ಎಕರೆ ಹಾಗೂ ವಸತಿ ಶಾಲೆಗೆ 10 ಎಕರೆ ಮಂಜೂರಾಗಿದ್ದು, ಸಂಪೂರ್ಣ ಸರ್ವೇ ವಾಡಿ, ರೈತರಿಗೆ ತೊಂದರೆಯಾಗದಂತೆ ಒತ್ತುವರಿ ತೆರವುಗೊಳಿಸಬೇಕು ಎಂದರು.
ಸರ್ಕಾರಿ ಭೂಮಿ, ಕೆರೆ-ಕುಂಟೆ, ಗುಂಡು ತೋಪು ಕಬಳಿಕೆ ತಪ್ಪು, ಒಂದು ವೇಳೆ ದಾಖಲೆಗಳಿದ್ದರೆ ರಿಯಾಯಿತಿ ತೋರಬೇಕು, ಇಲ್ಲದಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಿ ಎಂದರು.
ನಮ್ಮ ದೇಶದಲ್ಲಿ ಹಣಬಲ, ತೋಳ್ಬಲ ಇರುವವರು ಅಕ್ರಮ ಎಸಗಿದರೂ ಬಚಾವಾಗುತ್ತಾರೆ. ಆದರೆ ಬಡ ರೈತರು, ದಲಿತರು, ಭೂರಹಿತರು ಅರಿವಿನ ಕೊರತೆಯಿಂದ ಅಥವಾ ಪ್ರಚೋದನೆಗೆ ಒಳಗಾಗಿ ಸಣ್ಣ ತಪ್ಪು ವಾಡಿದರೆ ಬೀದಿಗೆ ತಳ್ಳುತ್ತಾರೆ. ರೈತರನ್ನು ಹಾಳು ವಾಡಿದರೆ ಅಧಿಕಾರಿಗಳಿಗೆ ಪಾಪ ಸುತ್ತಿಕೊಳ್ಳುತ್ತದೆ, ಹಾಗಾಗಿ ಸರಿಯಾಗಿ ದಾಖಲೆ ಪರಿಶೀಲಿಸಿ, ಬೆಳೆ ಬೆಳೆದಿರುವ ರೈತರಿಗೆ ಕಟಾವು ಮುಗಿಯುವವರೆಗೆ ಅವಕಾಶ ನೀಡಿ, ನಂತರ ತೆರವುಗೊಳಿಸಿ ಎಂದರು.
ಕೋಚಿಮುಲ್ ಅಧ್ಯಕ್ಷ, ವಾಲೂರು ಶಾಸಕ ಕೆ.ವೈ.ನಂಜೇಗೌಡ ವಾತನಾಡಿ, ಈ ಹಿಂದೆ ಡಿ.ಕೆ.ರವಿ ಡಿಸಿಯಾಗಿದ್ದಾಗ ಕೋಚಿಮುಲ್‌ಗೆ ಜಾಗ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೆವು. ಕೂಡಲೆ ಸ್ಥಳ ಪರಿಶೀಲಿಸಿ 50 ಎಕರೆ ಮಂಜೂರು ವಾಡಿದ್ದು ಈ ಜಾಗವನ್ನು ಅಭಿವೃದ್ಧಿ ಪಡಿಸುವ ಸಂಬಂಧ ನಿರ್ದೇಶಕ ಹರೀಶ್ ವಿಶೇಷ ಕಾಳಜಿ ತೋರಿದ್ದರಿಂದ ಒತ್ತುವರಿ ತೆರವಿಗೆ ಅನುಕೂಲವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾತನಾಡಿ, ಡೇರಿಗೆ 50 ಎಕರೆ ನೀಡಬೇಕು, ಇನ್ನು ಕೆಸಿವ್ಯಾಲಿ ನೀರು ಹೊಳಲಿಗೆ ಕೆರೆಗೆ 6 ತಿಂಗಳಲ್ಲಿ ಹರಿಯಲಿದ್ದು, ಸಂಸದರು ಈಗಾಗಲೆ ನಡೆಸುತ್ತಿರುವ ಕೆರೆಗಳ ಸ್ವಚ್ಛತಾ ಕಾರ್ಯವನ್ನು ಈ ಕೆರೆಗೂ ವಿಸ್ತರಿಸಿದರೆ 3 ತಾಲೂಕುಗಳಿಗೂ ಅನುಕೂಲವಾಗಲಿದೆ ಎಂದರು.
ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ವಾತನಾಡಿ, ಕೋಚಿಮುಲ್‌ಗೆ ನೀಡಲಾಗಿರುವ
50 ಎಕರೆ ಉಪಯೋಗಿಸಿಕೊಂಡು ವಿಜಯವಾಡದಲ್ಲಿರುವ ಪ್ರಾತ್ಯಕ್ಷಿಕೆ ಕೇಂದ್ರ ವಾದರಿಯಲ್ಲಿ ಇಲ್ಲೂ ಅಭಿವೃದ್ಧಿ ಕಾರ್ಯ ನಡೆಸಲು ತೀರ್ವಾನಿಸಲಾಗಿದೆ ಎಂದರು.
ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‌ಸಿ ನಜೀರ್ ಅಹಮದ್, ಕೂಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಎಸಿ ಸೋಮಶೇಖರ್, ತಹಸೀಲ್ದಾರ್ ಆರ್.ಶೋಭಿತಾ ಮತ್ತಿತರರಿದ್ದರು.
ಕೋಚಿಮುಲ್ ವಿಭಜನೆ ಆಗುವುದು ಖಚಿತ, ನಮ್ಮ ಪಾಲಿನ ಆಸ್ತಿ ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಮುಂದುವರೆಸಿಕೊಂಡು ಹೋಗಬೇಕಿದೆ, ಚಿಕ್ಕಬಳ್ಳಾಪುರದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಿಸಲಾಗಿದೆ. ಆದರೆ 185 ಕೋಟಿ ರೂ. ವೆಚ್ಚದಲ್ಲಿ ಎಂವಿಕೆ ಗೋಲ್ಡನ್ ಡೇರಿ ನಿರ್ಮಿಸಲು ತಡೆಯಾಜ್ಞೆ ವಿಧಿಸಿರುವುದು ನೋವಿನ ಸಂಗತಿ. ಕೆ.ವೈ.ನಂಜೇಗೌಡ, ಕೋಚಿಮುಲ್ ಅಧ್ಯಕ್ಷ