ಜಿಲ್ಲೆ

ಸಂಭ್ರಮದಿಂದ ನಡೆದ ಕೋಲ ಉತ್ಸವ

reportermys

ಮಡಿಕೇರಿ: ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಪಾಲೂರು ಗ್ರಾಮದ ಮಂದನೆರವಂಡ ಕುಟುಂಬದಲ್ಲಿ ೫ ವರ್ಷಕ್ಕೊಮ್ಮೆ ನಡೆಯುವ ಕೋಲ ಉತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.


ಮಂದನೆರವಂಡ ಐನ್ ಮನೆಯಲ್ಲಿ ನಡೆದ ಎರಡು ದಿನದ ಆಚರಣೆಯಲ್ಲಿ ಗುರು ಕಾರಣ ತೆರೆ ಸೇರಿದಂತೆ ೭ ದೈವಗಳ ಕೋಲ ಉತ್ಸವವನ್ನ ನೆರವೇರಿಸಲಾಯಿತು. ಮಂದಣ್ಣ ಮೂರ್ತಿ, ಕುಟ್ಟಿಚಾತ, ಭೈರವ, ಭಗವತಿ ನುಚಿಟ್ಟೆ, ಪೆರುವ ಗುಳಿಗ, ಚೌಂಡಿ ದೇವರಕೋಲದ ಜತೆಗೆ ಗುರು ಕಾರಣ-ಅಜ್ಜಪ್ಪ ದೈವದ ಕೋಲಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಊರಿನ ಭಕ್ತಾದಿಗಳು ಪಾಲ್ಗೊಂಡು ದೈವದ ಕೃಪೆಗೆ ಪಾತ್ರರಾದರು.