ವಿಟ್ಲ: ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲೆ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಪುಣಚ ದೇವಿ ನಾಗರ ಶ್ರೀ ದೇವಿ ವಿದ್ಯಾಕೇಂದ್ರದ ಸಿಂಧೂರ ಭಾರತಿ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಖೋ ಖೋ ಪಂದ್ಯಾಟ ಮಂಗಳವಾರ ನಡೆಯಿತು.
ಪಂದ್ಯಾಟವನ್ನು ವಿಟ್ಲ ಸಪ್ತ ಜ್ಯುವೆಲ್ಸ್ ಪಾಲುದಾರ ಅಜಕ್ಕಳ ಶ್ಯಾಂ ಭಟ್ ಉದ್ಘಾಟಿಸಿದರು. ಪುಣಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಮೈ ಜನಾರ್ದನ ಭಟ್ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಽಕಾರಿ ವೆಂಕಟ್ರಮಣ ರಾವ್ ಮಂಕುಡೆ, ಶ್ರೀ ದೇವಿ ವಿದ್ಯಾಕೇಂದ್ರದ ಸಂಚಾಲಕ ರವೀಶ್ ನಾಯಕ್ ಪೊಸವಳಿಕೆ, ಸದಸ್ಯರಾದ ನಾರಾಯಣ ಭಟ್ ಕುಪ್ಳುಚ್ಚಾರ್, ಮಲ್ಯ ಶಂಕರ್ ಭಟ್, ಓ.ಜಯಂತ ಗೌಡ, ಈಶ್ವರ ನಾಯ್ಕ ಉಪಸ್ಥಿತರಿದ್ದರು.
ಪ್ರೌಢಶಾಲೆಯ ಮುಖ್ಯಶಿಕ್ಷಕಿ ರಜನಿ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಲೋಕೇಶ್ ವಂದಿಸಿದರು. ಸಹ ಶಿಕ್ಷಕಿ ಶ್ವೇತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.