ಕೊಕ್ಕರ್ಣೆ ದಸರಾ 2024ರ ಶಾರದಾ ಮಾತೆಯ ಶ್ರೀ ಶಾರದಾ ಜಲಸ್ತಂಬನ ಕೊಕ್ಕರ್ಣೆ ಸೀತಾನದಿಯಲ್ಲಿ ಜರುಗಿತು. 
ಜಿಲ್ಲೆ

ಕೊಕ್ಕರ್ಣೆ ದಸರಾ ಸಂಪನ್ನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಕೊಕ್ಕರ್ಣೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸಮಿತಿ, 32ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಹಾಗೂ ತೃತೀಯ ವರ್ಷದ ಶಾರದೋತ್ಸವ ಕೊಕ್ಕರ್ಣೆ ದಸರಾ 2024 ಕಾರ್ಯಕ್ರಮ ಅ.3ರಿಂದ ಅ.12ರ ವರೆಗೆ ಜರುಗಿತು.

ರಾಘವೇಂದ್ರ ಪಡಿಯಾರ್ ಅರ್ಚಕತ್ವದಲ್ಲಿ ಮಹೇಶ್ ಭಟ್ ಬಸ್ರೂರು ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಗಣಪತಿ ಹೋಮ, ಬೊಬ್ಬರ್ಯ ಸ್ವಾಮಿ ಹಾಗೂ ನಾಗದೇವರ ಪೂಜೆ, ಅನನ್ಯ ಪಡಿಯಾರ್ ಅವರಿಂದ ಭರತನಾಟ್ಯ, ಭಕ್ತಿಗೀತೆ, ಜಾನಪದ ಗೀತೆ ಸ್ಪರ್ಧೆ, ಶ್ರೀಲಕ್ಷ್ಮೀನಾರಾಯಣ ಹೃದಯಹವನ, ಸಪ್ತಶತಿ ಪಾರಾಯಣ, ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳ ಚೇರ್ಕಾಡಿ ಅವರಿಂದ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ, ಅನ್ನಪೂರ್ಣ ಹವನ, ಭಜನಾ ಮಹಾ ಸಂಗಮ ನಗರ ಸಂಕೀರ್ತನೆ, ಚೆಗ್ರಿಬೆಟ್ಟು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ಷಟ್ಲ್ ಪಂದ್ಯಾಟ, ಸೂಕ್ತ ಹವನ ಜರುಗಿತು.

ಕಾಡೂರು ಚಿನ್ಮಯ ಕ್ರೀಡಾಂಗಣದಲ್ಲಿ ವಾಲಿಬಾಲ್ ಪಂದ್ಯಾಟ, ಸಂಗೀತ ರಿಯಾಲಿಟಿ ಸ್ಪರ್ಧೆ ವಾಯ್ಸ ಆಫ್ ದಸರಾ, ಶ್ರೀ ದುರ್ಗಾ ಹವನ, ಆಲ್ವಿನ್ ಅಂದ್ರಾದೆ ಪಾಂಡೇಶ್ವರ ಮತ್ತು ಬಳಗದವರಿಂದ ನಗೆ ಪಂಚ್ ಕಜ್ಜಾಯ, ಶ್ರೀ ಪಂಚದುರ್ಗಾ ಹವನ, ಯೋಗಿ ಪ್ರವೀಣಾ ಜಿ.ಹೆಗ್ಡೆಯವರಿಂದ ಯೋಗ ಪ್ರದರ್ಶನ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಯಕ್ಷಗಾನ ಮಂಡಳಿಯಿಂದ ಕಂಸವಧೆ ಯಕ್ಷಗಾನ, ಶ್ರೀ ಶಿರಡಿ ಸಾಯಿಬಾಬಾಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗದಿಂದ ಜೋಡು ದಿವಟಿಗೆ ನಾಟಕ, ಶ್ರೀ ನಾಮತ್ರಯ ಹವನ, ಅರ್ಪಿತಾ ದಿನೇಶ್ ಕುಂದನಹಳ್ಳಿಯವರಿಂದ ಭರತನಾಟ್ಯ, ಮನು ಹಂದಾಡಿ ತಂಡದವರಿಂದ ನಗೆ ಸುಗ್ಗಿ, ನವದುರ್ಗಾ ಹವನ, ದುರ್ಗಾದೀಪ ನಮಸ್ಕಾರ, ವಿ.ಎಸ್.ಎಸ್.ಕಲಾಸಿರಿ ವೈಭವ, ಕಾಡೂರು ಚಿನ್ಮಯ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡೆ, ದಸರಾ ವೇದಿಕೆಯಲ್ಲಿ ಮುದ್ದು ಶಾರದೆ ಸ್ಪರ್ಧೆ, ಶಾರದಾ ಮೂರ್ತಿಯ ವೈಭವದ ಪುರಮೆರವಣಿಗೆ ಜರುಗಿತು.

ಉತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.
ವಿವಿಧ ಸಾಂಸ್ಕೃತಿಕ ಕಲಾತಂಡದಿಂದ ಭಜನೆ, ತಾಲೀಮು, ಬ್ಯಾಂಡ್ ಸೆಟ್, ಪಿಲಿ ನಲಿಕೆ, ಚೆಂಡೆ, ನಾಸಿಕ್ ಬ್ಯಾಂಡ್, ಗೊಂಬೆ ಬಳಗದೊಂದಿಗೆ ಶ್ರೀ ದೇವಳದಿಂದ ಹೊರಟು ಕೊಕ್ಕರ್ಣೆ ಮುಖ್ಯ ರಸ್ತೆಯಲ್ಲಿ ಪೂರ್ವಕ್ಕೆ ಸಾಗಿ ಕಾಲೇಜು ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ ನಾರಾಯಣಗುರು ಸಭಾಭವನದಿಂದ ಮುಂಭಾಗದಿಂದ ಮುಖ್ಯ ರಸ್ತೆಯನ್ನು ಸೇರಿ ಅಲ್ಲಿಂದ ಕಾಡೂರು ಬಸ್ ನಿಲ್ದಾಣ ತಲುಪಿ ಅಲ್ಲಿಂದ ಸೀತಾ ನದಿಯಲ್ಲಿ ಅಬ್ಬರದ ಸುಡುಮದ್ದಿನ ಪ್ರದರ್ಶನದೊಂದಿಗೆ ಶ್ರೀ ಶಾರದಾ ಜಲಸ್ತಂಬನ ನೆರವೇರಿತು.