ಜಿಲ್ಲೆ

ಬ್ಯಾಡ್ಮಿಂಟನ್‌ನಲ್ಲಿ ಕೋಹನಾ-ಮೌಲ್ಯ ಜೋಡಿ ಸಾಧನೆ

ಅವಿನಾಶ್ ಜೈನಹಳ್ಳಿ

ರಾಜ್ಯ ಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ನಗರದ ಜೆ.ಎನ್.ಕೋಹನಾ ಹಾಗೂ ಎಂ.ಎನ್.ಮೌಲ್ಯ ಜೋಡಿ ಗಮನಾರ್ಹ ಸಾಧನೆ ಮಾಡಿದೆ.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಷಿಯೇಷನ್ ಸಹಯೋಗದಲ್ಲಿ ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಯೋನೆಕ್ಸ್ ಸನ್‌ರೈಸ್ ರಾಜ್ಯ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ 15 ವರ್ಷದೊಳಗಿನ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಈ ಜೋಡಿ ರನ್ನರ್ ಅಪ್ ಪ್ರಶಸ್ತಿ ಗಳಿಸಿದೆ. 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಕೋಹನಾ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಗಮನ ಸೆಳೆದಿದ್ದಾರೆ.

ಈ ಜೋಡಿ ಚಿಕ್ಕಮಗಳೂರಿನಲ್ಲಿ ಜುಲೈ ಮೊದಲ ವಾರ ನಡೆದ ರಾಜ್ಯ ಮಟ್ಟದ ಯೋನೆಕ್ಸ್ ಸನ್‌ರೈಸ್ ರಾಜ್ಯ ಸಬ್ ಜೂನಿಯರ್ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯ 15 ವರ್ಷದೊಳಗಿನ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿತ್ತು. ಕೋಹನಾ-ಮೌಲ್ಯ ಜೋಡಿ ನಗರದ ಗೋಪಾಲಸ್ವಾಮಿ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅರ್ಜುನ್ ಟಿ.ರಾಮ್ ಬಳಿ ತರಬೇತಿ ಪಡೆಯುತ್ತಿದೆ.