ಜಿಲ್ಲೆ

ಕೊಗ್ರೆ ಅಷ್ಟಬಂಧ ಮಹೋತ್ಸವ ಫೆ.12ರಿಂದ

ವೀರೇಶ ಸೌದ್ರಿ

ಅಂಕೋಲಾ: ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಶ್ರೀ ಬೊಮ್ಮಯ್ಯ ದೇವರ ಅಷ್ಟಬಂಧ, ಕಲಾಭಿವೃದ್ಧಿ ಹಾಗೂ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಫೆ. 12ರಿಂದ 16ರವರೆಗೆ ನಡೆಯಲಿವೆ ಎಂದು ಶ್ರೀ ಕೊಗ್ರೆ ಬೊಮ್ಮಯ್ಯ ದೇವರ ದೇಗುಲ ನವೀಕರಣ ಸಮಿತಿ ಅಧ್ಯಕ್ಷ ಬಾಸಗೋಡಿನ ದೇವಾನಂದ ಬೊಮ್ಮಯ್ಯ ಗಾಂವಕರ ಹೇಳಿದರು.

ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 6 ಶತಮಾನಗಳ ಪರಂಪರೆಯನ್ನು ಹೊಂದಿರುವ ಕೊಗ್ರೆ ಬೊಮ್ಮಯ್ಯ ದೇವರು ಹಾಗೂ ಪರಿವಾರ ದೇವರುಗಳ ಬಂಡಿ ಹಬ್ಬ ರಾಜ್ಯದಲ್ಲಿ ಖ್ಯಾತಿ ಹೊಂದಿದೆ. ದೇವಾಲಯ ನಿರ್ಮಾಣಕ್ಕೆ ವೈಜ್ಞಾನಿಕ ವಿಧಾನ ಅನುಸರಿಸಲಾಗಿದೆ. ಆಗಮಶಾಸ್ತ್ರದನ್ವಯ ಅಷ್ಟಬಂಧ ಮಹೋತ್ಸವ ಆಯೋಜಿಸಲಾಗಿದೆ. ಕಳಸ ಪ್ರತಿಷ್ಠಾಪನೆ, 305ಹೊಸ ಮೆಟ್ಟಿಲುಗಳ ಲೋಕಾರ್ಪಣೆಗೊಳ್ಳಲಿದೆ. ಫೆ. 16ರಂದು ಮಹಾಪೂಜೆ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ. ಹೊನ್ನಾವರ ಹಳದೀಪುರದ ಜ್ಯೋತಿಷಾಚಾರ್ಯ ಧರಣೇಂದ್ರ ಎಂ., ಇಂದ್ರಜೈನ್ ನೇತೃತ್ವದಲ್ಲಿ ಅಷ್ಟಬಂಧ ಮಹೋತ್ಸವ ಜರುಗಲಿದೆ ಎಂದರು.

ವಕೀಲ ನಾಗರಾಜ ವಿ.ನಾಯಕ ಮಾತನಾಡಿ, ಫೆ.16ರ ರಾತ್ರಿ 8.30 ಗಂಟೆಗೆ ಗೌರವ ಸಮರ್ಪಣೆ ಹಾಗೂ ಕೊಗ್ರೆ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ಸಮಿತಿಯ ಸದಸ್ಯ ವಿನೋದ ನಾಯಕ ಶೆಟಗೇರಿ ಮಾತನಾಡಿದರು. ಕಾರ್ಯದರ್ಶಿ ಗುರುಪ್ರಸಾದ ನೀಲಕಂಠ ನಾಯಕ ಬಾಸಗೋಡ, ಸಹಕಾರ್ಯದರ್ಶಿ ನಾರಾಯಣ ವೆಂಕಟಮರಣ ನಾಯಕ, ಕೋಶಾಧ್ಯಕ್ಷ ತಿಮ್ಮಣ್ಣ ಎಸ್. ನಾಯಕ, ಸದಸ್ಯರಾದ ನಾರಾಯಣ ಮೋನಪ್ಪ ನಾಯಕ, ಹಮ್ಮಣ್ಣ ಮಾಣೇಶ್ವರ ನಾಯಕ, ಗಣಪತಿ ಆರ್.ನಾಯಕ, ಗಣಪತಿ ಬಿ.ನಾಯಕ ಶೀಳ್ಯ, ಬೊಮ್ಮಯ್ಯ ಬಿ.ನಾಯಕ, ವೆಂಕಟರಮಣ ಎಸ್.ಗೌಡ, ನಾಗರಾಜ ವಿ.ಗುನಗಾ ಸೂರ್ವೆ, ಮೋಹನ ಜಾಯು ಗೌಡ, ರಾಘವೇಂದ್ರ ಗೌಡ, ಜೈರಾಮ ಆರ್. ನಾಯಕ, ಗೋಪಾಲಕೃಷ್ಣ ವಿ.ನಾಯಕ, ಜಗದೀಶ ದೇವು ಆಗೇರ, ರವೀಶ ಎನ್. ಆಚಾರಿ, ಸಂಜೀವ ವಿ.ಗುನಗಾ, ಮಹಾದೇವ ಗೌಡ, ವಾಸುದೇವ ಜಿ.ನಾಯಕ, ಮುರುಳಿಧರ ವೆಂಕಟೇಶ ನಾಯಕ, ಪ್ರಕಾಶ ಎನ್.ನಾಯಕ ಇತರರು ಉಪಸ್ಥಿತರಿದ್ದರು.