ಜಿಲ್ಲೆ

ಕೋಗಿಲಗೇರಿ ಹಾಲು ಉತ್ಪಾದಕರ ಸಂಘದ ಚುನಾವಣೆ; ಸರ್ಕಾರದ ನಿಯಮಾವಳಿ ಉಲ್ಲಂಘನೆ ಆರೋಪ

ಮಂಜುನಾಥ ಎಸ್. ಅಂಗಡಿ ಧಾರವಾಡ

ಅಳ್ನಾವರ ತಾಲೂಕಿನ ಕೋಗಿಲಗೇರಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸರ್ಕಾರದ ನಿಯಮಾವಳಿ ಉಲ್ಲಂಘಿಸಿದ ಆರೋಪ ಕೇಳಿಬಂದಿದೆ. ಸಹಕಾರ ಸಂಘಗಳ ಉಪ ನಿಬಂಧಕರು ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಲ್ಲದೆ, ತರಾತುರಿಯಲ್ಲಿ ಚುನಾವಣೆ ನಡೆಸುತ್ತಿರುವುದು ಅನೇಕ ಅನುಮಾನ ಮೂಡಿಸಿದೆ.

ಸಾಮಾನ್ಯ ವರ್ಗದ 7, ಪರಿಶಿಷ್ಟ ಜಾತಿಯ 1, ಪರಿಶಿಷ್ಟ ಪಂಗಡದ 1, ಹಿಂದುಳಿದ ಅ ಮತ್ತು ಬ ವರ್ಗದ ತಲಾ 1 ಹಾಗೂ ಇಬ್ಬರು ಮಹಿಳಾ ಸದಸ್ಯರು ಸೇರಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಮಂಡಳಿಗೆ 13 ಸದಸ್ಯರ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ. ಮುಂದಿನ 5 ವರ್ಷಗಳ ಅವಽಗೆ ಚುನಾವಣೆ ಜರುಗುತ್ತಿದೆ.

ಸಹಕಾರ ಸಂಘಗಳ ಉಪ ನಿಬಂಧಕರು ತಮ್ಮ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಪ್ರೇಮಾ ದೊಡ್ಡಮನಿ ಅವರನ್ನು ರಿಟರ್ನಿಂಗ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ಆದರೆ, ಜಿಲ್ಲಾ ಮಟ್ಟದ ಅಽಕಾರಿ ಹೊರಡಿಸಿರುವ ಆದೇಶದ ಪ್ರತಿಯಲ್ಲಿ ದಿನಾಂಕವನ್ನೇ ನಮೂದಿಸಿಲ್ಲ. ರಿಟರ್ನಿಂಗ್ ಆಫೀಸರ್ ಪ್ರೇಮಾ ಅವರು ಚುನಾವಣಾ ವೇಳಾಪಟ್ಟಿ ಮಾಡಿ ಫೆ. 20ರಂದು ಸಂಜೆ ಸಂಘದ ಕಾರ್ಯದರ್ಶಿಗೆ ಕೊಟ್ಟಿದ್ದಾರೆ. ಕಾರ್ಯದರ್ಶಿ ಸಂಘದ ಸದಸ್ಯರಿಗೆ 21ರಂದು ಚುನಾವಣಾ ವೇಳಾಪಟ್ಟಿಯ ನೋಟಿಸ್ ನೀಡಿದ್ದಾರೆ. ಸಹಕಾರ ಸಂಘಗಳ ನಿಯಮಗಳ ಪ್ರಕಾರ ಸದಸ್ಯರಿಗೆ 15 ದಿನ ಮುಂಚಿತವಾಗಿ ನೋಟಿಸ್ ತಲುಪಿಸಬೇಕು. ಅಲ್ಲದೆ, ಸಂಘದ ನೋಟಿಸ್ ಬೋರ್ಡ್ಗೆ ಅಂಟಿಸಬೇಕು. ಆದರೆ, ಇಲ್ಲಿ ಚುನಾವಣಾ ಅಽಕಾರಿ ಕರ್ತವ್ಯಲೋಪ ಎಸಗಿದ್ದಾರೆ.

ಮತ್ತೊಂದೆಡೆ ಚುನಾವಣಾ ವೇಳಾಪಟ್ಟಿಯ ಪ್ರಕಾರ ಫೆ. 22ರಿಂದ 28ರವರೆಗೆ ನಾಮಪತ್ರ ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿದೆ. ಇದರಲ್ಲಿ 3 ದಿನ ರಜೆಗಳಿದ್ದವು. ಚುನಾವಣೆ ಘೋಷಣೆಯಾದರೆ ಅಽಕಾರಿ ಗೈರಾಗುವಂತಿಲ್ಲ. ಆದರೆ, ಪ್ರೇಮಾ ದೊಡಮನಿ ಅವರು ಫೆ. 22, 23, 24 ಮತ್ತು 26ರಂದು ಗೈರಾಗಿದ್ದರು. ಅಲ್ಲದೆ, ಸೀಮಿತ ದಿನಗಳಲ್ಲಿ ಪ. ಜಾತಿ, ಪ. ಪಂಗಡ, ಹಿಂದುಳಿದ ವರ್ಗಗಳ ಸದಸ್ಯರು ಜಾತಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚುನಾವಣೆಯನ್ನು ಮುಂದೂಡುವAತೆ ಸದಸ್ಯರು ಉಪ ನಿಬಂಧಕರ ಕಚೇರಿಗೆ ಮನವಿ ಕೊಡಲು ಹೋದರೆ ಮನವಿಯನ್ನೇ ಸ್ವೀಕರಿಸಿಲ್ಲ. ಅಽಕಾರಿಗಳ ಬೇಜವಾಬ್ದಾರಿ ವಿರುದ್ಧ ಸಿಡಿದೆದ್ದಿರುವ ಸದಸ್ಯರು ಯಾವ ಸ್ಥಾನಗಳಿಗೂ ನಾಮಪತ್ರವನ್ನೇ ಸಲ್ಲಿಸಿಲ್ಲ.

ಸಹಕಾರ ಸಚಿವರಿಗೆ ದೂರು

ಸಹಕಾರ ಇಲಾಖೆ ಅಽಕಾರಿಗಳ ಕರ್ತವ್ಯಲೋಪದ ವಿರುದ್ಧ ಕೋಗಿಲಗೇರಿ ಗ್ರಾಮಸ್ಥ ಭರತೇಶ ಪಾಟೀಲ ಅವರು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ, ಉಸ್ತುವಾರಿ ಸಚಿವ ಸಂತೋಷ ಲಾಡ್, ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಬೆಳಗಾವಿ ಸಂಯುಕ್ತ ಉಪ ನಿಬಂಧಕರು, ಜಿಲ್ಲಾಽಕಾರಿ ಹಾಗೂ ಉಪ ನಿಬಂಧಕರಿಗೆ ದೂರು ನೀಡಿದ್ದಾರೆ. ಚುನಾವಣಾ ಕರ್ತವ್ಯಲೋಪ ಎಸಗಿರುವ ತಪ್ಪಿತಸ್ಥ ಅಽಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ವೇಳಾಪಟ್ಟಿ ಅನ್ವಯ ಮಾ. 8ರಂದು ಚುನಾವಣೆ ಜರುಗಬೇಕು. ಆದರೆ, ಒಂದೂ ನಾಮಪತ್ರ ಸಲ್ಲಿಕೆಯಾಗದಿರುವುದು ಅಽಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.