ಜಿಲ್ಲೆ

ಗ್ರಾಮಗಳಲ್ಲಿ ಸ್ಚಚ್ಛತೆ ಕಾಪಾಡಿ

ಶಹಾಪುರ: ಕೊಂಗಂಡಿ ಗ್ರಾಮದಲ್ಲಿ ನ್ಯೂಮೋನಿಯಾದಿಂದ ಅಸುನೀಗಿದ ಐದು ವರ್ಷದ ಬಾಲಕಿಯ ಪಾಲಕರ ಮನೆಗೆ ಶುಕ್ರವಾರ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಅಗತ್ಯವಾದ ಆಹಾರ ವಸ್ತು ನೀಡಿ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು, ಸಾಕಷ್ಟು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೀರಿ. ಯಾರು ಹೆದರಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಜತೆ ನಾವಿದ್ದೇವೆ. ಇದ್ದ ಒಬ್ಬ ಮಗಳನ್ನು ಕಳೆದುಕೊಂಡಿರುವುದನ್ನು ಕೇಳಿ ತುಂಬಾ ಬೇಸರವಾಯಿತು. ಅದರಲ್ಲಿ ಕರೊನಾ ಶಂಕೆಯಿಂದ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಯಿಂದ ತಾಲೂಕಿನ ಜನತೆ ಭೀತಿಗೆ ಒಳಗಾದರು. ಆದರೆ ಅವಳ ಅಸುನೀಗಿದ್ದು ನ್ಯೂಮೋನಿಯಾದಿಂದ ಎಂಬ ವರದಿಯಿಂದ ಸಮಧಾನ ತಂದಿದೆ ಎಂದರು.

ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಯನ್ನು ಕೈಗೊಳ್ಳಬೇಕು. ಗುಳೆ ಬಂದ ಎಲ್ಲ ಕುಟುಂಬಗಳಿಗೆ ಪಡಿತರ ಆಹಾರ ಧಾನ್ಯವನ್ನು ವಿತರಿಸಲು ತಹಸೀಲ್ದಾರ್ ಅವರಗೆ ಸೂಚಿಸಲಾಗುವುದು. ಜಾಗದ ಸಮಸ್ಯೆಯಾದರೆ ಬೇರೆಡೆ ತಾತ್ಕಾಲಿಕವಾಗಿ ವಾಸಿಸಲು ಅವಕಾಶ ಮಾಡಿಕೊಡುವೆ. ಎಲ್ಲರೂ ಹೋಂ ಕ್ವಾರಂಟೈನ್ ನಿಯಮ ಪಾಲಿಸಿ. ಮನೆಯಿಂದ ಹೊರ ಬರಬೇಡಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದರು. ನಗರಸಭೆಯ ಮಾಜಿ ಸದಸ್ಯ ವಸಂತ ಸುರಪುರಕರ್,ಹೇಮರಡ್ಡಿ ಸೂಗರಾಳ, ಶಿವಕುಮಾರ ಬಿಲ್ಲಂಕೊಂಡಿ, ತಿಮ್ಮಾರಡ್ಡಿ, ರಂಗಪ್ಪ ದೊರೆ, ಹಣಮಂತರಾಯ ಇದ್ದರು.