ಕೊಡ್ಲಿಪೇಟೆ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಮಾಡುತ್ತಿರುವ ಸಂಘದ ಸದಸ್ಯರು 
ಜಿಲ್ಲೆ

ಕೊಡ್ಲಿಪೇಟೆ ಸಹಕಾರ ಸಂಘದ ಚುನಾವಣೆ

ಶಿವಶಂಕರ್ ಎಂ. ಹೆಬ್ಬಳ್ಳ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-30ನೇ ಸಾಲಿನ ಆಡಳಿತ ಮಂಡಳಿಗೆ ಶನಿವಾರ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಯಿತು.

ಒಟ್ಟು 11 ನಿರ್ದೇಶಕ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿದ್ದು, ಸಂಘದಲ್ಲಿ 2490 ಮಂದಿ ಸಾಲಗಾರ ಸದಸ್ಯರಿದ್ದು, 556 ಮಂದಿ ಸಾಲಗಾರಲ್ಲದ ಸದಸ್ಯರಿದ್ದಾರೆ. ಈ ಪೈಕಿ ಸಾಲಗಾರರ ಕ್ಷೇತ್ರದ 10 ಸ್ಥಾನ ಮತ್ತು ಸಾಲಗಾರಲ್ಲದ ಸಾಮಾನ್ಯ ಕ್ಷೇತ್ರದ 1 ಸ್ಥಾನ ಸೇರಿದಂತೆ ಒಟ್ಟು 11 ಸ್ಥಾನಗಳಿಗೆ 41 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಸ್ಪರ್ಧಿಸಿದ್ದಾರೆ.