ಜಿಲ್ಲೆ

ಕೋಡಿ ಬಿದ್ದ ಬಾಚಣಕಿ ಜಲಾಶಯ

ಬಸವರಾಜ ವೀರಪ್ಪ ಗರಗ

ಮುಂಡಗೋಡ: ನಿರಂತರ ಮಳೆಯಿಂದ ತಾಲೂಕಿನ ಬಾಚಣಕಿ ಜಲಾಶಯ ಸೋಮವಾರ ಬೆಳಗ್ಗೆ ಭರ್ತಿಯಾಗಿ ಕೋಡಿ ಹರಿಯಲು ಆರಂಭಿಸಿದ್ದು, ಇದರಿಂದ ಜಲಾಶಯದ ಕೆಳಭಾಗದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಬಾಚಣಕಿ ಗ್ರಾಮದ ಸನಿಹ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಈ ಜಲಾಶಯವೂ ಬಾಚಣಕಿ, ಕೊಪ್ಪ, ಇಂದೂರ, ಇಂದಿರಾನಗರ, ಕುಸೂರ ಸೇರಿದಂತೆ ವಿವಿಧ ಭಾಗಗಳ ಗದ್ದೆಗಳಿಗೆ ಬೇಸಿಗೆ ಹಾಗೂ ಮಳೆಗಾಲದಲ್ಲಿ ನೀರು ಹಾಯುತ್ತದೆ. ಈ ಜಲಾಶಯದ ನೀರು ನಂಬಿಕೊಂಡು ಸಾವಿರಾರು ರೈತರು ಬೆಳೆಗಳನ್ನು ಬೆಳೆಯುತ್ತಾರೆ. ಇದೀಗ ಈ ಜಲಾಶಯ ಭರ್ತಿಯಾಗಿರುವ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಜಲಾಶಯ ಭರ್ತಿಯಾಗಿ ಕೋಡಿ ಹರಿಯುವುದನ್ನು ವೀಕ್ಷಿಸಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.