ಜಿಲ್ಲೆ

ಮಾನವೀಯ ಸಂಬಂಧ ಜೋಡಿಸೋಣ

ಎ. ಆರ್. ರಘುರಾಮ

ಅರಸೀಕೆರೆ ಗ್ರಾಮಾಂತರ: ಮಾನವೀಯ ಸಂಬಂಧ ಜೋಡಿಸುವ ಕೆಲಸ ಹೆಚ್ಚಾಗಬೇಕು ಎಂದು ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮದೇವಿ ದೇವಾಲಯದಲ್ಲಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ಜೀವನದಲ್ಲಿ ನೀತಿ- ನಿಯತ್ತುಗಳಿಗೆ ಬೆಲೆ ಕೊಡಬೇಕು. ನಮಗಿರುವ ವಿದ್ಯೆ ವಿನಯಕ್ಕೆ ಕಾರಣವಾಗ ಬೇಕು. ದುರಹಂಕಾರ ಎಂದಿಗೂ ಸಲ್ಲದು. ಒಳ್ಳೆಯ ಮಾತಿನಿಂದ ಬದುಕನ್ನು ಪರಿವರ್ತಿಸುವ ಶಕ್ತಿ ಇದೆ. ಹಾಗಾಗಿ ಬೆಳಕಿನ ಕಡೆಗೆ ಸಾಗುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು. ಜೀವನ ಉತ್ಸಾಹದಿಂದ ಕೂಡಿರಬೇಕು. ಭಗವಂತ ನಿರ್ಮಿಸಿಕೊಟ್ಟಿರುವ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು ಎಂದು ಸ್ವಾಮೀಜಿ ತಿಳಿಸಿದರು. ಚಂಚಲ ಮನದಿಂದ ಹೊಯ್ದಟಕ್ಕೆ ಬಿದ್ದು ಶಾಂತಿ, ನೆಮ್ಮದಿಗಳನ್ನು ಕಳೆದುಕೊಳ್ಳಬಾರದು. ಮನವನ್ನು ಶಾಂತ ಗೊಳಿಸುವ ಶಕ್ತಿ ಅಧ್ಯಾತ್ಮಕ್ಕೆ ಇದೆ ಎಂದು ಅವರು ನುಡಿದರು.

ಗ್ರಾಮದ ದಲಿತ ಸಮುದಾಯದವರು ಶ್ರೀಗಳಿಗೆ ಸನ್ಮಾನಿಸಿದರು. ಮುಖಂಡರಾದ ಎಂ.ಡಿ. ಸೋಮಶೇಖರ, ಕಟ್ಲಿ ತಿಮ್ಮಯ್ಯ, ಚಂದ್ರಪ್ಪ, ದಾಸಪ್ಪ, ಗೌರಮ್ಮ ದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ನಟರಾಜ್, ಎಂ.ಸಿ. ನಟರಾಜನ್ ಎಸ್. ಮಲ್ಲಿಕಾರ್ಜುನಪ್ಪ, ಕೊಡ್ಲಿ ಬಸವರಾಜು, ಮಾಡಾಳು ಶಿವಲಿಂಗಪ್ಪ ಇತರರು ಇದ್ದರು.