ಕೊಡೇಕಲ್ ಗ್ರಾಮದ ಮಂಡೇಲ್ಲಮ್ಮ ದೇವಿ ಜಾತ್ರೋತ್ಸವ ನಿಮಿತ್ತ ಮಂಗಳವಾರ ದೇವಿಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು. ರಂಗನಾಥ ದೊರಿ, ಕನಕು ಜಿರಾಳ, ಡಾ.ಬಿ.ಬಿ.ಬಿರಾದಾರ, ಗಿರಿಯಪ್ಪ ಮನ್ಯಾಳ, ಪಾಯಣ್ಣ ಸಾಹುಕಾರ, ರಮೇಶ ಉಪ್ಪಲದಿನ್ನಿ, ಬಸಣ್ಣ ತುಂಬಗಿ, ಸಿದ್ರಾಮ ತುಂಬಗಿ ಇತರರಿದ್ದರು. 
ಜಿಲ್ಲೆ

ಮಂಡೇಲ್ಲಮ್ಮ ದೇವಿ ಅದ್ದೂರಿ ಮೆರವಣಿಗೆ

ಕೊಡೇಕಲ್: ಗ್ರಾಮದಲ್ಲಿ ಮಂಡೇಲ್ಲಮ್ಮ ದೇವಿ ಜಾತ್ರೋತ್ಸವ ನಿಮಿತ್ತ ಮಂಗಳವಾರ ದೇವಿ ಮೂರ್ತಿ ಮತ್ತು ಕಳಸದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕರ‍್ಯಕ್ರಮಗಳ ನಂತರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸಕಲ ವಾದ್ಯಮೇಳದೊಂದಿಗೆ ದೇವಿಯ ಬೆಳ್ಳಿ ಮೂರ್ತಿ ಮತ್ತು ದೇವಸ್ಥಾನದ ಕಳಸವನ್ನು ಮೆರವಣಿಗೆ ಮೂಲಕ ಗಂಗಾಸ್ನಾನಕ್ಕೆ ತರಲಾಯಿತು. ಈ ವೇಳೆ ಪುರವಂರ ಸೇವೆ ಎಲ್ಲರ ಗಮನ ಸೆಳೆಯಿತು. ಮಂಡೇಲ್ಲಮ್ಮ ದೇವಿಗೆ ವಿಶೇಷ ಪೂಜೆ ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಿ ದೈವದ ಸೀರೆ ಸಮರ್ಪಿಸಲಾಯಿತು.

ಮಂಗಳಾರತಿಯೊಂದಿಗೆ ನೈವೇದ್ಯ ಅರ್ಪಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸೋಮವಾರ ಅಹೋರಾತ್ರಿ ಭಜನೆ ನಡೆಯಿತು.

ರಂಗನಾಥ ದೋರಿ, ಕನಕು ಜಿರಾಳ, ಡಾ.ಬಿ.ಬಿ.ಬಿರಾದಾರ, ಗಿರಿಯಪ್ಪ ಮನ್ಯಾಳ, ಪಾಯಣ್ಣ ಸಾಹುಕಾರ ಬಪ್ಪರಗಿ, ರಮೇಶ ಉಪ್ಪಲದಿನ್ನಿ, ಬಸಣ್ಣ ತುಂಬಗಿ, ಸಿದ್ರಾಮ ತುಂಬಗಿ, ಮಲ್ಲಣ್ಣ ಲಕ್ಷ್ಮೀಪುರ, ಸಂಗಮೇಶ ಬಿಜಾಪುರ, ಮನೋಹರ ಬಬಲೇಶ್ವರ, ಮುತ್ತು ಬಿರಾದಾರ, ವಿಶಾಲ ಅಂಗಡಿ, ಹಣಮಂತ್ರಾಯ ಕುಂಬಾರ, ಚಿನ್ನಪ್ಪ ಕುಂಬಾರ, ಶಿವು ಕುಂಬಾರ, ವಿಶ್ವನಾಥ ಬಬಲೇಶ್ವರ, ಭೀಮಾಶಂಕರ ತಮದಡ್ಡಿ ಇತರರಿದ್ದರು.