ಜಿಲ್ಲೆ

ಸಾಲ ಶೂಲಕ್ಕೆ ಮಹಿಳೆ ಬಲಿ

ಉಡುಪಿ: ಕೊಡವೂರು ಕಾನಂಗಿಯಲ್ಲಿ ಸಾಲದ ಹೊರೆಯಿಂದ ಬೇಸತ್ತ ಮಹಿಳೆಯೊಬ್ಬರು ಮಂಗಳವಾರ ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾನಂಗಿ ನಿವಾಸಿ ಬೀನಾ (34 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಇವರು 4 ವರ್ಷದ ಹಿಂದೆ ಗುಂಡಿಬೈಲು ನಿವಾಸಿ ನಿತ್ಯಾನಂದ ಎಂಬವರನ್ನು ವಿವಾಹವಾಗಿದ್ದರು. ಪತಿ ನಿತ್ಯಾನಂದ ಅವರು 9 ತಿಂಗಳ ಹಿಂದೆ ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ನಿಧನರಾದ ಬಳಿಕ ಸಾಲ ತೀರಿಸುವ ಹೊಣೆ ಬೀನಾ ಅವರ ಮೇಲಿತ್ತು. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಅವರು, ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.