ಮಡಿಕೇರಿ: "ಕೊಡವ ತಕ್ಕಾಫ್-೨೦೨೨" ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ "ಕೊಡಗ್ ಕೂಟ" ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಜಾಲ ಮಾಧ್ಯಮದಲ್ಲಿ ಬಲ್ಲಚಂಡ ನೈನಾ ಹಾಗೂ ಮರ್ಕರ ಹೋಮ್ ಆಫೀಸ್ ಆಯೋಜಿಸುತ್ತಿರುವ "ಕೊಡವ ತಕ್ಕಾಫ್" ಪೈಪೋಟಿಯಲ್ಲಿ ವಿವಿಧ ದೇಶದ ಏಳು ತಂಡಗಳು ಭಾಗವಹಿಸಿತ್ತು. ಇದರಲ್ಲಿ ಕೊಡಗು ತಂಡ ಪ್ರಥಮ ಬಹುಮಾನ ಪಡೆದುಕೊಂಡರೆ, ಯು.ಎಸ್.ಎ ತಂಡ ದ್ವಿತೀಯ ಹಾಗೂ ಮಿಡಲ್ ಈಸ್ಟ್ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡಿದೆ.
ಪೈಪೋಟಿಯಲ್ಲಿ ಮೊದಲ ವರ್ಷ ಕೊಡಗು ತಂಡ ಜಯಗಳಿಸಿತ್ತು. ದ್ವಿತೀಯ ವರ್ಷದಲ್ಲಿ ಕೂಡ ಕೊಡಗು ತಂಡ ೨೦ ಅಂಕಗಳ ಅಂತರದಲ್ಲಿ "ಕೊಡವ ತಕ್ಕಾಫ್-೨೦೨೨" ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅ೧ರಂದು ಹಾಗೂ ಅ೯ರಂದು ನಡೆದ ಎರಡು ಹಂತದ ಪೈಪೋಟಿಯಲ್ಲಿ ಕೊಡಗು ತಂಡದ ಪರ ಬಾಳೆಯಡ ದಿವ್ಯಾ ಮಂದಪ್ಪ ನೇತೃತ್ವದಲ್ಲಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ಮುಲ್ಲೇಂಗಡ ಮಧೋಶ್ ಪೂವಯ್ಯ, ಬೊಳ್ಳಾಜೀರ ಯಮುನಾ ಅಯ್ಯಪ್ಪ ಹಾಗೂ ಚಮ್ಮಟೀರ ಪ್ರವೀಣ್ ಉತ್ತಪ್ಪ ಭಾಗವಹಿಸಿದ್ದರು.