ಕುಶಾಲನಗರ:
ಕೂಡಿಗೆ ಕೊಡವ ಕೂಟದ ಕೈಲ್ ಪೊಳ್ದ್ ಹಬ್ಬದ ಸಂತೋಷ ಕೂಟ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುAಡÀ ಅಧ್ಯಕ್ಷತೆಯಲ್ಲಿ ಭಾನುವಾರ ಕೂಡುಮಂಗಳೂರುವಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ನಾಪೊಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚಟ್ಟೊಳಂಡ ಮನು ಮುತ್ತಪ್ಪ ಮಾತನಾಡಿ ನಮ್ಮ ಜನಾಂಗದ ಆಚಾರ ವಿಚಾರಗಳನ್ನು ಬೆಳಸಿ ನಮ್ಮ ಮುಂದಿನ ಪಿಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ.
ನಾವು ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತೇವೆ. ಆದರೆ ಮಕ್ಕಳು ಅಲ್ಲಿಯೇ ಇರಲು ಬಯಸುತ್ತಾರೆ. ಅದಕ್ಕೆ ದಯವಿಟ್ಟು ಅವಕಾಶ ಕೊಡಬೇಡಿ ಎಂದು ಹೇಳಿದರು.
ಅಧ್ಯಕ್ಷ ಮನು ನಂಜುAಡ ಮಾತನಾಡಿ ಈಗಿನ ಪರಿಸ್ಥಿತಿಯಲ್ಲಿ ನಾವು ತೆಗೆದು ಕೊಳ್ಳುವ ಆಹಾರ ಪ್ರತಿಯೊಂದು ಕೂಡ ಔಷಧಿಯಲ್ಲಿ ಬೆಳೆಯುತ್ತಿರುದರಿಂದ ನಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಎಲ್ಲರೂ ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಕೂಟದ ಕಾರ್ಯದರ್ಶಿ ಮುಂಡAಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ, ನಿರ್ದೇಶಕರುಗಳಾದ ಕೊಳುವಂಡ ಮಂದಪ್ಪ, ಐಮುಡಿಯಂಡ ರಮೇಶ್, ಪಟ್ಟಡ ಚಿಟ್ಟಿಯಪ್ಪ, ಮುಕ್ಕಾಟಿರ ಮನು ತಿಮ್ಮಣ್ಣ, ಪಾಲೇಂಗಡ ಸುಜಾ ಸತೀಶ್, ಪಟ್ಟಡ ಬೀನ ಚಿಟ್ಟಿಯಪ್ಪ, ಕೋಡಿಮಣಿಯಂಡ ಸಾವಿತ್ರಿ ಕುಮಾರ್ ಇದ್ದರು.