ಜಿಲ್ಲೆ

ರಾಜಧಾನಿಯಲ್ಲಿ ಕೊಡವ ಸಂಸ್ಕೃತಿಯ ಕಂಪು

ಸುನಿಲ್ ಪೊನ್ನೇಟಿ

ಮಡಿಕೇರಿ:

ಬೆಂಗಳೂರಿನಲ್ಲಿ ನಡೆಯುತ್ತಿರುವ ಅಸೋಸಿಯೇಷನ್ ಆಫ್ ಓಟೋಲರಿಂಗೋಲಜಿಸ್ಟ್ ಆಫ್ ಇಂಡಿಯಾದ (ಂಔIಅಔಓ) 75ನೇ ರಾಷ್ಟಿçÃಯ ಸಮ್ಮೇಳನÀದಲ್ಲಿ ಕೊಡಗಿನ ಸಂಸ್ಕೃತಿ ಸಿರಿಯ ಆಕರ್ಷಿಸಿತು.

ಬೆಂಗಳೂರಿನ ಸ್ವಿಸ್ ಟೌನ್ ನ ಕ್ಲಾಕ್ಸ್ ಎಕ್ಸೋಟಿಕಾ ಸೆಂಟರ್‌ನಲ್ಲಿ ಶನಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಡಗಿನ ಸಂಸ್ಕೃತಿ ಬಿಂಬಿಸುವ ಮದುಮಗ, ಮದುಮಗಳು, ಬೇಟೆಗಾರ, ಬಿಳಿ ಮತ್ತು ಕಪ್ಪು ಕುಪ್ಯಾಧಾರಿಗಳು ಗಮನ ಸೆಳೆದರು. ಕೊಡವ ಸಂಸ್ಕೃತಿಯ ಆಭರಣಗಳ ವಿವರಣೆ ಸಹಿತ ಫ್ಯಾಶನ್ ಶೋ, ಕೊಡವ ಹಾಡಿನ ನೃತ್ಯ, ವಾಲಗ ನೃತ್ಯ ಕೊಡಗಿನ ನಟಿ ಈರಮಂಡ ಹರಿಣಿ ವಿಜಯ್ ಅವರ ನೇತೃತ್ವದಲ್ಲಿ ನಡೆಯಿತು.

ಮೂರ್ನಾಡುವಿನ ಸಂಸ್ಕೃತಿ ಸಿರಿ ಬಳಗದ ಸದಸ್ಯರಾದ ತೋರೆರ ನಳಿನಿ ಅಯ್ಯಪ್ಪ, ಕೋಲೆಯಂಡ ನಿಶಾ ಮೋಹನ್, ಹೈ ಕೋರ್ಟ್ ನ್ಯಾಯವಾದಿ ಆನೇಡ ಹರೀಶ್ ಗಣಪತಿ, ತೋತಿಯಂಡ ಕಿರಣ್ ಸೋಮಣ್ಣ, ಅಮ್ಮಾಟಂಡ ದೇವಯ್ಯ, ವಿಂದ್ಯಾ ದೇವಯ್ಯ ಸೇರಿದಂತೆ 25 ಮಂದಿಯ ತಂಡ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ಸೇರಿದ್ದ ಗಣ್ಯರು ಹಾಗೂ ವೈದ್ಯ ಪ್ರತಿನಿಧಿಗಳ ಪ್ರಶಂಸೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಈರಮಂಡ ಹರಿಣಿ ವಿಜಯ್ ದಂಪತಿಯನ್ನು ಅಸೋಸಿಯೇಷನ್ ಆಫ್ ಓಟೋಲರಿಂಗೋಲಜಿಸ್ಟ್ ಆಫ್ ಇಂಡಿಯಾದ ವೈದ್ಯ ಪ್ರಮುಖರು ಸನ್ಮಾನಿಸಿ ಗೌರವಿಸಿದರು.
ಕೊಡಗಿನ ಹಿರಿಯ ವೈದ್ಯ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ, ಬೆಂಗಳೂರು ಜಯದೇವ ಆಸ್ಪತ್ರೆಯ ಮುಖ್ಯಸ್ಥ, ಖ್ಯಾತ ಹೃದಯ ತಜ್ಞ ಡಾ.ಮಂಜುನಾಥ್, ಡಾ.ವಿಜಯೇಂದ್ರ ಹೊನ್ನೂರಪ್ಪ, ಡಾ.ಹರಿಹರ ಮೂರ್ತಿ ಸೇರಿದಂತೆ 2000ಕ್ಕೂ ಅಧಿಕ ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.