ಮಡಿಕೇರಿ:
ಕೊಡವ ಮಕ್ಕಡ ಕೂಟದ ಅಧ್ಯಕ್ಷರಾಗಿ ಬೊಳ್ಳಜೀರ ಬಿ.ಅಯ್ಯಪ್ಪ ಮತ್ತು ಕಾರ್ಯದರ್ಶಿಯಾಗಿ ಪುತ್ತರಿರ ಕರುಣ್ ಕಾಳಯ್ಯ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಬಾಳೆಯಡ ಪ್ರತೀಶ್ ಪೂವಯ್ಯ, ಚೆಪ್ಪುಡಿರ ರಾಕೇಶ್ ದೇವಯ್ಯ ಹಾಗೂ ತೆನ್ನೀರ ಟೀನಾ ಚಂಗಪ್ಪ, ಜಂಟಿ ಕಾರ್ಯದರ್ಶಿಯಾಗಿ ಕೇಲೇಟಿರ ದೇವಯ್ಯ, ನಿರ್ದೇಶಕರಾಗಿ ಪೊನ್ನೋಲತಂಡ ವಿನೋದ್ ಉತ್ತಪ್ಪ, ಮಡ್ಲಂಡ ಮೋನೀಶ್ ಸುಬ್ಬಯ್ಯ, ಚೊಟ್ಟೇಯಂಡ. ಕಾರ್ಸನ್ನ್ ಮುತ್ತಪ್ಪ, ಬಾಳೆಯಂಡ ದಿವ್ಯಾ ಮಂದಪ್ಪ, ಪುತ್ತರಿರ ಶಿವು ನಂಜಪ್ಪ, ಪೇರಿಯಂಡ ಜಯಂತಿ ಉತ್ತಪ್ಪ, ಶಾಂತೆಯAಡ ಶ್ವೇತಾ ಕಾರ್ಯಪ್ಪ, ಆಪಾಡಂಡ ಝಾನ್ಸಿ ಗಣಪತಿ, ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ, ಕರವಂಡ ಸೀಮಾ ಗಣಪತಿ, ಪೇರಿಯಂಡ ಯಶೋಧ, ಬೋಟ್ಟೊಳಂಡ ನಿವ್ಯಾ ದೇವಯ್ಯ, ಚೀಯಕ್ ಪೂವಂಡ ಶ್ವೇತನ್ನ್ ಚಂಗಪ್ಪ, ಕುಳುವಂಡ ಶೃತಿ ಪೂಣಚ್ಚ, ಪಚ್ಚಾರಂಡ ನಿಶಾ ಸುಬ್ರಮಣಿ ಆಯ್ಕೆ ಆಗಿದ್ದಾರೆ.
ಸಲಹೆಗಾರರಾಗಿ ಕುಲೇಟಿರ ಅಜಿತ್ ನಾಣಯ್ಯ, ಐಚಂಡ ರಶ್ಮಿ ಮೇದಪ್ಪ, ಉಡುವೇರ ರೇಖಾ ರಘು, ಆಯ್ಕೆಯಾಗಿದ್ದಾರೆ. ಹಿರಿಯ ವಕೀಲÀ ಮಂಡೇಟಿರ ಬಿದ್ದಪ್ಪ ಕಾನೂನು ಸಲಹೆಗಾರರಾಗಿರುತ್ತಾರೆ.
ನವೆಂಬರ್ 24ರ ಭಾನುವಾರ ಕೂಟದ ದಾಖಲೆಯ 100ನೇ ಪುಸ್ತಕ ಪುತ್ತರಿರ ಕರುಣ್ ಕಾಳಯ್ಯ ಅವರ ಸಂಪಾದಕತ್ವದ "ನೂರನೇ ಮೊಟ್ಟ್ " ಪುಸ್ತಕ ಬಿಡುಗಡೆ ಸೇರಿದಂತೆ ಲೇಖಕರಾದ ಐಚಂಡ ರಶ್ಮಿ ಮೇದಪ್ಪ, ಕರವಂಡ ಸೀಮಾ ಗಣಪತಿ, ತೆನ್ನೀರ ಟೀನಾ ಚಂಗಪ್ಪ, ಯಶೋಧ ಪೇರಿಯಂಡ ಅವರು ರಚಿಸಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಬೊಳ್ಳಜೀರ ಬಿ.ಅಯ್ಯಪ್ಪ ಮತ್ತು ಪುತ್ತರಿರ ಕರುಣ್ ಕಾಳಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.