Koda's Shravya selected for National Hockey Karnataka team 
ಜಿಲ್ಲೆ

ರಾಷ್ಟ್ರೀಯ ಹಾಕಿ ಕರ್ನಾಟಕ ತಂಡಕ್ಕೆ ಕೊಡಗಿನ ಶ್ರಾವ್ಯಾ ಆಯ್ಕೆ

ನಾಪೋಕ್ಲು: ಜಾಖರ್ಂಡ್‌ನ ರಾಂಚಿಯಲ್ಲಿ ಸೆ.30 ರಿಂದ ನಡೆಯುವ ರಾಷ್ಟ್ರೀಯ ಜೂನಿಯರ್ ಕರ್ನಾಟಕ ತಂಡದ ಗೋಲ್ ಕೀಪರ್ ಆಗಿ ಸಮೀಪದ ಕಕ್ಕಬೆ-ಕುಂಜಿಲ ಗ್ರಾಮದ ಬಿ.ಡಿ.ಶ್ರಾವ್ಯಾ ಆಯ್ಕೆಯಾಗಿದ್ದಾರೆ. ಮುಂಬೈನ ಎನ್‌ಸಿಒಇ ತಂಡದಲ್ಲಿ ತರಬೇತಿ ಪಡೆಯುತ್ತಿರುವ ಶ್ರಾವ್ಯಾ ಈಗ ಕರ್ನಾಟಕದ ಜೂನಿಯರ್ ತಂಡದಲ್ಲಿ ಆಯ್ಕೆ ಆಗಿದ್ದಾರೆ. ಈಕೆ ಕಕ್ಕಬೆ-ಕುಂಜಿಲ ಗ್ರಾಮದ ದೇವಯ್ಯ, ಚಿತ್ರಾ ದಂಪತಿ ಪುತ್ರಿ.