ಹುಲುಸೆ ಗ್ರಾಮದ ಗ್ರಾಮ ದೇವತೆ ಬನದೊಳಗಿನ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವತಾ ಸನ್ನಿಧಿಯಲ್ಲಿ ನವರಾತ್ರಿ ಪೂಜೋತ್ಸವ ಹಿನ್ನೆಲೆಯಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರು. 
ಕೊಡಗು

ಹುಲುಸೆಯಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮ

ಕುಶಾಲನಗರ

ಕುಶಾಲನಗರ ತಾಲೂಕು ಹುಲುಸೆ ಗ್ರಾಮದ ಗ್ರಾಮ ದೇವತೆ ಬನದೊಳಗಿನ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವತಾ ಸನ್ನಿಧಿಯಲ್ಲಿ ನವರಾತ್ರಿ ಪೂಜೋತ್ಸವ ಬುಧವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಗ್ರಾಮದ ಮೂಕಾಂಬಿಕಾ, ಪ್ರಕೃತಿ, ಜ್ಞಾನಜ್ಯೋತಿ, ನೇತ್ರಾವತಿ, ಕಾವೇರಿ ಸ್ತ್ರೀ ಶಕ್ತಿ ಸಂಘಗಳ ವತಿಯಿಂದ ಮಹಿಳಾ ಭಕ್ತರು ಸೇರಿ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಬೆಳಗ್ಗೆ ದೇವಾಲಯದ ಸನ್ನಿಧಿಯಲ್ಲಿ ದೇವತಾ ಮೂರ್ತಿಗಳಿಗೆ ವಿವಿಧ ಅಭಿಷೇಕಗಳನ್ನು ನಡೆಸಲಾಯಿತು. ನಂತರ ಬಗೆ ಬಗೆಯ ಪುಷ್ಪಗಳು, ಹಾಗೂ ವಸ್ತ್ರಾಭರಣಗಳಿಂದ ದೇವತಾ ಮೂರ್ತಿಯನ್ನು ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಸುಮಂಗಲಿಯರಿಗೆ ಅರಿಶಿಣ - ಕುಂಕುಮ, ಬಳೆಗಳನ್ನು ನೀಡಿ ಸತ್ಕರಿಸಲಾಯಿತು. ಚಿತ್ರಕುಮಾರ್ ಹಾಗೂ ಮಂಜುನಾಥ್ ಪೂಜಾ ವಿಧಿ ನಡೆಸಿಕೊಟ್ಟರು.

ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳಾದ ಅಶ್ವಿನಿ, ಶುಭ, ದ್ರಾಕ್ಷಾಯಿಣಿ, ರತ್ನ, ರೇಣುಕಾ, ಪ್ರೇಮ, ಯಶೋಧ, ಮಲ್ಲಿಗೆ, ತೇಜಾಂಬಿಕೆ, ಶಾಂತಿ, ರೇಶ್ಮಾ,

ಗ್ರಾಮದ ದೇವತಾ ಸಮಿತಿ ಅಧ್ಯಕ್ಷ ಶಿವನಂಜಪ್ಪ