ಪಾರಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೊಡಗಿನ ಆದಿಕವಿ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಜನ್ಮದಿನದ ಅಂಗವಾಗಿ, ಅವರ ಮರಿಮೊಮ್ಮಗ ಅಪ್ಪನೆರವಂಡ ವಿನುಮಾದಪ್ಪನವರಿಂದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ನಾಪೋಕ್ಲು : ಕೊಡಗಿನ ಆದಿಕವಿ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಜನ್ಮದಿನದ ಅಂಗವಾಗಿ, ಅವರ ಮರಿಮೊಮ್ಮಗ ಅಪ್ಪನೆರವಂಡ ವಿನುಮಾದಪ್ಪನವರಿಂದ ಪಾರಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಿಸಲಾಯಿತು.
ಕೊಡಗು

ಹರದಾಸ ಅಪ್ಪಚ್ಚಕವಿ ಜನ್ಮದಿನ

ಪಾರಾಣೆ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ನಾಪೋಕ್ಲು : ಕೊಡಗಿನ ಆದಿಕವಿ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಜನ್ಮದಿನದ ಅಂಗವಾಗಿ, ಅವರ ಮರಿಮೊಮ್ಮಗ ಅಪ್ಪನೆರವಂಡ ವಿನುಮಾದಪ್ಪನವರಿಂದ ಪಾರಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಿಸಲಾಯಿತು.

ತಮ್ಮ ಮುತ್ತಜ್ಜ ಅಪ್ಪಚ್ಚ ಕವಿಯವರ ಹುಟ್ಟುಹಬ್ಬವನ್ನು ಪ್ರತಿವರ್ಷ ವಿಭಿನ್ನ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ವಿನುಮಾದಪ್ಪನವರು, ಕಳೆದ ಮೂರು ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಪರಿಕರಗಳನ್ನು ವಿತರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಬಿ.ಕಿಶೋರ್ ಕುಮಾರ್, ಅತಿಥಿ ಶಿಕ್ಷಕಿ ಮಂಜುಳಾ ಮತ್ತು ಸುಮಿತ್ರಾ, ಸ್ಥಳೀಯರಾದ ಅಪ್ಪನೆರವಂಡ ರಾಜೇಶ್ ಹಾಗೂ ನಯನಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.