ಸೋಮವಾರಪೇಟೆ: ಇಲ್ಲಿನ ವೀರಶೈವ ಲಿಂಗಾಯತ ಸಮಾಜ, ಅಕ್ಕನ ಬಳಗ, ಚಾಮುಂಡೇಶ್ವರಿ ಭಜನಾ ಮಂಡಳಿ, ಬಸವೇಶ್ವರ ಯುವಕ ಸಂಘ, ಚಾಮುಂಡೇಶ್ವರಿ ಭಜನಾ ಮಂಡಳಿ ವತಿಯಿಂದ ಅದ್ದೂರಿ ಶರನ್ನವರಾತ್ರಿ ಉತ್ಸವ ಆಚರಿಸುತ್ತಿದ್ದು, ಅದರ ಪ್ರಯುಕ್ತ ಭಾನುವಾರ ಬಸವೇಶ್ವರ ದೇವಾಲಯದಲ್ಲಿ ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಬೆಳಗ್ಗೆ ಆನೆಕೆರೆಯಿಂದ ಗಂಗೆ ಪೂಜೆಯನ್ನು ಮಾಡಿ, ದೇವಾಲಯದ ಸದಸ್ಯರು ಶ್ರೀ ದುರ್ಗಾದೇವಿಯ ಮೂರ್ತಿಯನ್ನು ದೇವಾಲಯಕ್ಕೆ ತಂದು ಪುಣ್ಯಾಹ ಸ್ವಸ್ತಿ ವಾಹನ ಪಂಚಾಮೃತ ಅಭಿಷೇಕದೊಂದಿಗೆ ನವದುರ್ಗೆ ಘಟ ಸ್ಥಾಪಿಸಲಾಯಿತು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಬಿ.ಪಿ. ಶಿವಕುಮಾರ್. ಶೆಟ್ರು ಮೃತ್ಯಂಜಯ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಯುವರಾಜು, ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು ಹಾಗೂ ಸಮಾಜದ ಬಾಂಧವರು ಇದ್ದರು.