ಮಲಯಾಳಿ ಸಮುದಾಯ ಬಾಂಧವರು ಸಡಗರ ಸಂಭ್ರಮ 
ಕೊಡಗು

ಶ್ರೀ ಪೊನ್ನ ಮುತ್ತಪ್ಪ ದೇವಾಲಯದಲ್ಲಿ ದೀಪಾವಳಿ ಆಚರಣೆ

ಮಲಯಾಳಿ ಸಮುದಾಯ ಬಾಂಧವರ ಸಡಗರ ಸಂಭ್ರಮ

ನಾಪೋಕ್ಲು: ಇಲ್ಲಿನ ಶ್ರೀ ಪೊನ್ನ ಮುತ್ತಪ್ಪ ದೇವಾಲಯದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಮಲಯಾಳಿ ಸಮುದಾಯ ಬಾಂಧವರು ಸಡಗರ ಸಂಭ್ರಮದಿಂದ ಹಾಗೂ ಶ್ರದ್ಧಾ-ಭಕ್ತಿಗಳಿಂದ ಆಚರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ದೇವಾಲಯದ ವತಿಯಿಂದ ಸತತ ಮೂರು ದಿನಗಳವರೆಗೆ ದೇವಾಲಯ ಆವರಣದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ದೀಪಾವಳಿ ಮಹೋತ್ಸವವನ್ನು ಸಂಭ್ರಮಿಸಿದರು.

ಆಚರಣೆಯ ಭಾಗವಾಗಿ ಮೂರೂ ದಿನಗಳವರೆಗೆ ಶ್ರೀ ಪೊನ್ನ ಮುತ್ತಪ್ಪ ದೇವರಿಗೆ ಪೈಂಗುತ್ತಿ ಸೇರಿದಂತೆ ಸೇವಾ ಆರಾಧನೆಯನ್ನು ನೆರವೇರಿಸಿ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ಪಲಾವ್, ಕೇಸರಿ ಬಾತ್ ಪ್ರಸಾದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯದ ಪ್ರಮುಖ ರಘು ಅವರು, ಕಳೆದ ಐದಾರು ವರ್ಷಗಳಿಂದ ದೇವಾಲಯದಲ್ಲಿ ದೀಪಾವಳಿಯನ್ನು ಶ್ರದ್ಧೆಯಿಂದ ಆಚರಿಸಲಾಗುತ್ತಿದ್ದು, ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಈ ವರ್ಷದ ಆಚರಣೆಯು ಯಶಸ್ವಿಯಾಗಿ ನೆರವೇರಿದೆ ಎಂದರು.

ನಾಪೋಕ್ಲುವಿನ ಶ್ರೀ ಪೊನ್ನ ಮುತ್ತಪ್ಪ ದೇವಾಲಯದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಮಲಯಾಳಿ ಸಮುದಾಯದವರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.