ಹೊಂಬೆಳಕು ಕಿರಣ 248’ ಮಾಸಿಕ ತತ್ತ್ವ ಚಿಂತನಾಗೋಷ್ಠಿ ನಡೆಯಿತು. ಶ್ರೀಶೈಲ ಬೀಳಗಿ , ಡಾ. ರೇಣುಕಾ ಪ್ರಸಾದ್ , ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು. tattva chintana
ಕೊಡಗು

ವ್ಯಕ್ತಿತ್ವ ವಿಕಸನ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಸಲಹೆ

ಹೊಂಬೆಳಕು ಕಿರಣ 248 ಮಾಸಿಕ ತತ್ತ್ವ ಚಿಂತನಾಗೋಷ್ಠಿ

ವಿರಾಜಪೇಟೆ : ಇಂದಿನ ಆಧುನಿಕ ಜೀವನ ವ್ಯವಸ್ಥೆಯು ಅತಿ ವೇಗವಾಗಿ ಸಾಗುತ್ತಿದ್ದರೂ, ನಮ್ಮ ನೈತಿಕ ನೆಲೆಗಟ್ಟುಗಳು ಕುಸಿಯುತ್ತಿರುವುದು ಆತಂಕಕಾರಿ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾಹಿತಿಗಳಾದ ಶ್ರೀಶೈಲ ಬೀಳಗಿ ಅವರು ಅಭಿಪ್ರಾಯಪಟ್ಟರು.

ಶ್ರೀ ಅರಮೇರಿ ಕಳಂಚೇರಿ ಮಠದಲ್ಲಿ ಹಮ್ಮಿಕೊಂಡಿದ್ದ ’ಹೊಂಬೆಳಕು ಕಿರಣ 248’ ಮಾಸಿಕ ತತ್ತ್ವ ಚಿಂತನಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮ ಸುದೀರ್ಘ ವೃತ್ತಿಜೀವನದ ನೆನಪುಗಳನ್ನು ಮೆಲುಕು ಹಾಕುತ್ತಾ, ಇಂದಿನ ಜೀವನ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿ ವೃಂದದ ಕುರಿತು ಅತ್ಯಮೂಲ್ಯ ವಿಚಾರಗಳನ್ನು, ತಮ್ಮ ಶಿಕ್ಷಣ ಇಲಾಖೆಯ ವೃತ್ತಿಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹತ್ತಿರದಿಂದ ಕಂಡ ಅನುಭವವನ್ನು ಹಂಚಿಕೊಂಡ ಅವರು, ಇಂದಿನ ವಿದ್ಯಾರ್ಥಿ ವೃಂದವು ಕೇವಲ ಅಂಕಗಳಿಗೆ ಅಥವಾ ಕಾಗದದ ಪದವಿಗಳಿಗೆ ಮಾತ್ರ ಸೀಮಿತರಾಗಬಾರದು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿ ವ್ಯಾಮೋಹದಿಂದ ಹೊರಬರಬೇಕು. ಪಕ್ಕದ ಮನೆಯವರೊಂದಿಗೆ ಬೆರೆಯದ ಸಂಕುಚಿತ ಮನೋಭಾವ ಇಂದು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ವಿಶಾಲ ಹೃದಯವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.