ವಿರಾಜಪೇಟೆ: ಸಮೀಪದ ಬೇಟೋಳಿ ರಾಮನಗರದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹೆಗ್ಗಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸೇವಾ ಭಾರತಿ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿತ್ತು. ಮಾಯಿಲಮಕ್ಕಿಯಿಂದ ರಾಮನಗರದವರೆಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಸೇವಾ ಭಾರತಿ ತಂಡದ ಸದಸ್ಯರು ರಸ್ತೆಬದಿ ಬಿದ್ದಿದ್ದ ಪ್ಲಾಸ್ಟಿಕ್, ಪೇಪರ್ ಹಾಗೂ ಬಾಟಲಿಗಳನ್ನು ತೆರಗುಗೊಳಿಸಿದರು. ಪ್ರೌಢ ಶಾಲೆ ವಿದ್ಯಾರ್ಥಿಗಳು ರಾಮನಗರದಲ್ಲಿ ಅಭಿಯಾನದ ಮಹತ್ವ ಹಾಗೂ ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಸುತ್ತಮುತ್ತಲ ವಾತಾವರಣ ಸ್ವಚ್ಛವಾಗಿಟ್ಟು ಪರಿಸರವನ್ನು ಸಂರಕ್ಷಣೆ ಮಾಡಿ ಎಂದು ಸಾರಿ ಹೇಳಿದರು.
ಸೇವಾ ಭಾರತಿ ಸಂಸ್ಥೆಯ ರಕ್ಷಿತ್, ಗೌರಿಶಂಕರ್, ವಿದ್ಯಾ ಪ್ರಸಾದ್, ಸಂಗೀತಾ, ಹೆಗ್ಗಳ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುನಿತಾ ಹಾಗೂ ವೇಣುಗೋಪಾಲ್, ರಘು, ಲತೀಶ್ ,ಸುದೀಶ್ ,ಮಹೇಶ್ ರಜಾಕ್, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.