ಗಾಂಧಿ ಜಯಂತಿ ಕಾರ್ಯಕ್ರಮ 
ಕೊಡಗು

ಬಾಪು ತತ್ವಾದರ್ಶ ಅನುಸರಿಸಿ

ಡೆನಿಸ್ ಡಿಸೋಜ ಅಭಿಪ್ರಾಯ

ಸುಂಟಿಕೊಪ್ಪ: ಸಮಾಜಕ್ಕೆ ಮಹಾತ್ಮಾ ಗಾಂಧಿ ಅವರ ಆದರ್ಶ ತತ್ವಗಳು ಅಗತ್ಯವಾಗಿದ್ದು, ಇಂದಿನ ಯುವ ಪೀಳಿಗೆ ಅದನ್ನು ಅಳವಡಿಸಿಕೊಂಡರೆ ಮಾತ್ರ ಉಜ್ವಲ ಭಾರತವನ್ನು ಕಾಣಲು ಸಾಧ್ಯ ಎಂದು ಮಹಾತ್ಮಾ ಗಾಂಧಿ ಮೆಮೋರಿಯಲ್ ಟ್ರಸ್ಟ್‌ನ ಕಾರ್ಯದರ್ಶಿ ಡೆನಿಸ್ ಡಿಸೋಜ ಅಭಿಪ್ರಾಯಪಟ್ಟರು

ಎಸ್.ಎಂ.ಜಿ.ಎಂ. ಟ್ರಸ್ಟ್ ನ ವತಿಯಿಂದ ಹರದೂರಿನಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧಿ ಬದುಕಿನ ಅರಿವು ಮೂಡಿಸಲು ಎಲ್ಲ ವಿದ್ಯಾಸಂಸ್ಥೆಗಳು ಮತ್ತು ಸರ್ಕಾರ ಕಾರ್ಯೋನ್ಮುಖವಾಗುವ ಅಗತ್ಯತೆ ಇದೆ ಎಂದು ಹೇಳಿದರು.

ಟ್ರಸ್ಟ್‌ನ ಸಂಚಾಲಕ ಎಂ.ಇ.ಮೊಹಿದ್ದೀನ್ ಸ್ವಾಗತಿಸಿ, ಟ್ರಸ್ಟಿ ಕರ್ನಲ್ ಬಿ.ಜಿ.ವಿ ಕುಮಾರ್ ವಂದಿಸಿದರು.