ನಾಪೋಕ್ಲು : ಇಲ್ಲಿನ ಬಿಲ್ಲವ ಸಮಾಜದ ಮಹಿಳಾ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡು ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಾಪೋಕ್ಲು ಅಜ್ಜಿಮುಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿದ್ದ ಕಾಡು ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಶ್ರಮದಾನದಲ್ಲಿ ಬಿಲ್ಲವ ಸಮಾಜದ ಮಹಿಳಾ ಅಧ್ಯಕ್ಷೆ ಬಿ.ಎಸ್.ರಮ್ಯಾ, ಉಪಾಧ್ಯಕ್ಷರು ಬಿ.ಕೆ.ದೇವಕಿ, ರೀಣಾ ಜಗನ್ನಾಥ್, ಕಾರ್ಯದರ್ಶಿ ಕವಿತಾ ರಾಜೇಶ್, ಡಿ.ಪಿ.ಶೀಲಾ, ಬಿ.ಬಿ.ಚಂದ್ರಾವತಿ, ಬಿ.ಎಂ.ವನಿತಾ, ನಳಿನಿ, ಬಿ.ಎಚ್.ದಿವ್ಯಾ, ಕವಿತಾ, ಗಂಗೆ, ಗೌರಿ, ದಾಮಿನಿ, ಆಶಾ ಲಿಂಗಪ್ಪ, ದಿವ್ಯಾ ರೇವತಿ, ಪ್ರಿಯದರ್ಶಿನಿ ಹಾಗೂ ಶಾಲಾ ಶಿಕ್ಷಕಿ ಪುಷ್ಪಾವತಿ ಧನಂಜಯ ಇತರರು ಇದ್ದರು.