ದುಂಡಳ್ಳಿ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸೆಪ್ಟೆಂಬರ್ ಮಾಹೆಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಮಕ್ಕಳಿಗೆ ಪೌರಾಣಿಕ ಕತೆ, ಜಾನಪದ ಗೀತೆ ಹಾಡುವುದನ್ನು ಹೇಳೊಕೊಟ್ಟ ಹಿರಿಯ ಮಹಿಳೆಯರು ಮತ್ತು ಗ್ರಂಥಾಲಯ ಮೇಲ್ವಿಚಾರಕಿ ದಿವ್ಯಾ ಇತರರು ಇದ್ದರು.  arivu
ಕೊಡಗು

ದುಂಡಳ್ಳಿ ಗ್ರಾಪಂ ಗ್ರಂಥಾಲಯದಲ್ಲಿ ಅರಿವು

ಕೇಂದ್ರದಲ್ಲಿ ಸೆಪ್ಟಂಬರ್ ಮಾಹೆಯ ಸಂಭ್ರಮ

ಶನಿವಾರಸಂತೆ: ಸಮಿಪದ ದುಂಡಳ್ಳಿ ಗ್ರಾಪಂ ಗ್ರಂಥಾಲಯ ಅರಿವು ಕೇಂದ್ರದಲ್ಲಿ ‘ಓದುವ ಬೆಳಕು’ ಅಡಿಯಲ್ಲಿ ಸೆಪ್ಟೆಂಬರ್ ಮಾಹೆಯ ಚಟುವಟಿಕೆಗಳ ಸಂಭ್ರಮ ಕಾರ್ಯಕ್ರಮವನ್ನು ಅರಿವು ಕೇಂದ್ರದ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಶಿಕ್ಷಕರ ದಿನಾಚರಣೆ ಮಹತ್ವ ಸಾರುವ ಧನ್ಯವಾದ ಕಾರ್ಡ್ ತಯಾರಿಸುವ ಚಟುವಟಿಕೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹತ್ವ ಬಗ್ಗೆ ಮಕ್ಕಳಿಗೆ ಅರಿವು, ಇಂಜಿನಿಯರ್ ದಿನಾಚರಣೆ ಪ್ರಯುಕ್ತ ಕೌಶಲ ಅರಿವು, ವಿಶ್ವ ಅಜ್ಜ- ಅಜ್ಜಿಯ ದಿನಾಚರಣೆ ಪ್ರಯುಕ್ತ ಹಿರಿಯರ ಮಹತ್ವದ ಬಗ್ಗೆ ತಿಳಿವಳಿಕೆಯನ್ನು ಮೂಡಿಸಲಾಯಿತು. ಇದರೊಂದಿಗೆ ಜಾನಪದ ಗೀತೆ, ಕಥೆ ಹೇಳುವುದು, ಪೌರಾಣಿಕ ಕತೆ ಹೇಳಿಕೊಡುವುದು ಮತ್ತು ಕೌಶಲ ಚಟುವಟಿಕೆಗಳನ್ನು ಮಕ್ಕಳಿಗೆ ತರಬೇತಿ ಮೂಡಲ ನೀಡಲಾಯಿತು.

ಹಿರಿಯರಾದ ಕೆಂಚಮ್ಮ, ಶಾರದಮ್ಮ, ಗಂಗಮ್ಮ ಮಕ್ಕಳಿಗೆ ಪೌರಾಣಿಕ ಕತೆಗಳು ಮತ್ತು ಜಾನಪದ ಗೀತೆಗಳನ್ನು ಹೇಳಿಕೊಟ್ಟರು. ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ. ದಿವ್ಯಾ ಹಾಜರಿದ್ದರು.