ಪೊನ್ನಂಪೇಟೆ: ಮೈಸೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ನ ರಾಜ್ಯಮಟ್ಟದ ಸ್ಪೋರ್ಟ್ಸ್ ಡಾನ್ಸ್ ಸ್ಪರ್ಧೆಯಲ್ಲಿ ಟಿ.ಶೆಟ್ಟಿಗೇರಿಯ ರೂಟ್ಸ್ ಎಜುಕೇಷನಲ್ ಟ್ರಸ್ಟ್ನ ನೆಕ್ಸ್ಟ್ ಜನರೇಷನ್ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಂಡಗಳು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ.
ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿಯ ಬಿ.ಆರ್.ರಿಷಿಕಾ ಕಾವೇರಮ್ಮ, ಯಶ್ಮಿತಾ, ಗಾನ ಅಯ್ಯಪ್ಪ, ಪಿ.ಶಿರೀಷಾ ಕಾರ್ಯಪ್ಪ, ಮೇಘನಾ, ಕೆ.ಜಿ.ಪ್ರಾಪ್ತಿ ಪೂವಮ್ಮ ಹಾಗೂ ಸೀತಮ್ಮ ಭಾಗವಹಿಸಿದ್ದರು.
ಪ್ರಾಥಮಿಕ ವಿಭಾಗದಲ್ಲಿ ಬಿ.ಆರ್.ಶ್ರಾವ್ಯಾ ಪೊನ್ನಮ್ಮ, ರಿತಿಕಾ, ಲಾಸ್ಯಾ, ಹಂಸಿನಿ, ರಿಯಾ, ಆರ್ಯ, ಡಿಂಪಲ್, ಶಮಿತಾ ಹಾಗೂ ಶಸ್ವಿತಾ ಭಾಗವಹಿಸಿದ್ದರು.
ಎರಡೂ ವಿಭಾಗಗಳ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ರೂಟ್ಸ್ ಎಜುಕೇಷನಲ್ ಟ್ರಸ್ಟ್ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಪಾಲಕರು ಅಭಿನಂದನೆ ಸಲ್ಲಿಸಿದರು.
ಪೋಟೋ: ಡ್ಯಾನ್ಸ್ ಅಸೋಸಿಯೇಷನ್