ಗೋಣಿಕೊಪ್ಪಲು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದಲ್ಲಿ ಆಚರಿಸಲಾದ ಪೇರಲೆ ದಿನದಲ್ಲಿ ಪೊನ್ನಂಪೇಟೆ ಬೇಗೂರಿನ ಕೂರ್ಗ್ ಸಿಗ್ನೇಚರ್ ಅಕಾಡೆಮಿ ಮಕ್ಕಳು ಪ್ರಾಯೋಗಿಕ ಮತ್ತು ಕ್ಷೇತ್ರ ಆಧಾರಿತ ಅನುಭವಗಳನ್ನು ಪಡೆದುಕೊಂಡರು. ಡಾ. ಸಂಗಪ್ಪ, ಡಾ. ಕೆ.ಟಿ. ಮೋಹನ್, ಬೆನೆಸಿಯೊ ಫೆರ್ನಾಂಡಿಸ್, ಡಾ. ವೀರೇಂದ್ರ ಕುಮಾರ್ ಮತ್ತಿತರರು ಇದ್ದರು. 
ಕೊಡಗು

ಗೋಣಿಕೊಪ್ಪಲಿನಲ್ಲಿ ಪೇರಲೆ ದಿನಾಚರಣೆ

ಗೋಣಿಕೊಪ್ಪಲು

ಇಲ್ಲಿನ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಪೊನ್ನಂಪೇಟೆ ಬೇಗೂರಿನ ಕೂರ್ಗ್ ಸಿಗ್ನೇಚರ್ ಅಕಾಡೆಮಿ ಸಹಯೋಗದೊಂದಿಗೆ ಅತ್ತೂರಿನ ಐಸಿಎಆರ್-ಕೆವಿಕೆ ಫಾರ್ಮ್ನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭೇಟಿ ಹಾಗೂ ಪೇರಲ ದಿನ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಕ್ಷೇತ್ರ ಆಧಾರಿತ ಅನುಭವಗಳ ಮೂಲಕ ಕೃಷಿ ಪದ್ಧತಿಗಳ ಕುರಿತು ಕಲಿಯಲು ಈ ಕಾರ್ಯಕ್ರಮ ಪೂರಕವಾಗಿತ್ತು.

ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಸಂಗಪ್ಪ ಕಾರ್ಯಕ್ರಮದ ದೃಷ್ಟಿಕೋನವನ್ನು ಹಂಚಿಕೊAಡು. ತರಗತಿಯ ಸೈದ್ಧಾಂತಿಕ ಕಲಿಕೆಯನ್ನು ಪ್ರಾಯೋಗಿಕ ಕೃಷಿ ಅನುಭವಗಳೊಂದಿಗೆ ಜೋಡಿಸುವುದರ ಮಹತ್ವವನ್ನು ವಿವರಿಸಿದರು. ಪೇರಲ ದಿನದ ಅಂಗವಾಗಿ ವಿದ್ಯಾರ್ಥಿಗಳನ್ನು ಪೇರಲ ತೋಟಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಪೇರಲ ತೋಟಗಾರಿಕೆ, ಹಣ್ಣಿನ ಉತ್ಪಾದನಾ ಪದ್ಧತಿಗಳು ಹಾಗೂ ಪೇರಲದ ಪೌಷ್ಟಿಕಾಂಶದ ಮಹತ್ವದ ಬಗ್ಗೆ ಮಾಹಿತಿ ಪಡೆದರು. ಮರಗಳಿಂದ ನೇರವಾಗಿ ತಾಜಾ ಹಣ್ಣುಗಳನ್ನು ಕಿತ್ತು ರುಚಿ ನೋಡುವ ಮೂಲಕ ವಿದ್ಯಾರ್ಥಿಗಳು ಕಲಿಕೆಯನ್ನು ಆನಂದಿಸಿದರು. ಈ ತೋಟದ ಭೇಟಿಯನ್ನು ಡಾ. ಕೆ.ಟಿ. ಮೋಹನ್ ಕುಮಾರ್ ಮತ್ತು ಕಾರ್ಯಕ್ರಮ ಸಹಾಯಕ ಬೆನೆಸಿಯೊ ಫೆರ್ನಾಂಡಿಸ್ ಸಂಯೋಜಿಸಿದ್ದರು.

ನಂತರ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ ಪಶು ವಿಜ್ಞಾನ ಘಟಕ ಹಾಗೂ ನರ್ಸರಿ ಬ್ಲಾಕ್‌ಗೆ ಕರೆದೊಯ್ಯಲಾಯಿತು. ಡಾ. ಎಸ್.ಸಿ. ಸುರೇಶ್ Ä ಜಾನುವಾರು ನಿರ್ವಹಣೆ ಮತ್ತು ಸಂಬAಧಿತ ಚಟುವಟಿಕೆಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ನೈಸರ್ಗಿಕ ಕೃಷಿ ಘಟಕಕ್ಕೂ ಭೇಟಿ ನೀಡಿ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅರಿತುಕೊಂಡರು.

ಮಧ್ಯಾಹ್ನದ ಊಟದ ನಂತರ ವಿಜ್ಞಾನಿ ಡಾ. ವೀರೇಂದ್ರ ಕುಮಾರ್, ಮಾರುಕಟ್ಟೆಯಿಂದ ರೋಗ ಮತ್ತು ಕೀಟಮುಕ್ತ ಹಣ್ಣುಗಳನ್ನು ಗುರುತಿಸುವ ಹಾಗೂ ಆಯ್ಕೆ ಮಾಡುವ ವಿಧಾನಗಳ ಕುರಿತು ಸಂವಾದಾತ್ಮಕ ಗೋಷ್ಠಿ ನಡೆಸಿಕೊಟ್ಟರು.

ಮಧ್ಯಾಹ್ನದ ಅವಧಿಯಲ್ಲಿ ಹಣ್ಣು ಗುರುತಿಸುವ ಆಟಗಳು, ಕೃಷಿ ರಸಪ್ರಶ್ನೆ, ತ್ವರಿತ ಪ್ರಶ್ನೋತ್ತರ ಸ್ಪರ್ಧೆಗಳು ಹಾಗೂ ತಂಡ ಆಧಾರಿತ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಈ ಮೋಜಿನ ಚಟುವಟಿಕೆಗಳು ಬೆಳಗಿನ ಭೇಟಿಯಲ್ಲಿ ಕಲಿತ ಕೃಷಿ ಜ್ಞಾನವನ್ನು ಪುನರಾವರ್ತಿಸಲು ಮತ್ತು ವಿದ್ಯಾರ್ಥಿಗಳ ನಡುವೆ ಸಕ್ರಿಯ ಸಂವಹನ ಹೆಚ್ಚಿಸಲು ನೆರವಾದವು .ಕಾರ್ಯಕ್ರಮ ಸ್ವಚ್ಛತಾ ಹಿ ಸೇವಾ ಅಭಿಯಾನದೊಂದಿಗೆ ಮುಕ್ತಾಯಗೊಂಡಿತು. ಈ ವೇಳೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಭೇಟಿಯ ಅನುಭವಗಳು ಮತ್ತು ಕಲಿಕೆಯನ್ನು ಹಂಚಿಕೊAಡರು. ಈ ಶೈಕ್ಷಣಿಕ ಭೇಟಿ ತೋಟಗಾರಿಕೆ, ಜಾನುವಾರು ಸಾಕಣೆ, ನರ್ಸರಿ ನಿರ್ವಹಣೆ, ನೈಸರ್ಗಿಕ ಕೃಷಿ, ಸಸ್ಯ ಸಂರಕ್ಷಣೆ ಮತ್ತು ಉತ್ತಮ ಕೃಷಿ ಪದ್ಧತಿಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಪ್ರಾಯೋಗಿಕ ಜ್ಞಾನವನ್ನು ನೀಡಿತು.

ಕೇಂದ್ರದ ವಿಜ್ಞಾನಿ ಡಾ. ಬಿ. ಪ್ರಭಾಕರ, ಶಿಕ್ಷಕರಾದ ವೀಣಾ, ವಿದ್ಯಾಶ್ರೀ, ಸ್ವಾತಿ, ಕಾವೇರಮ್ಮ, ಅಕ್ಷಿತಾ, ನೀಲಂ, ರಚನಾ, ದೇಚಮ್ಮ, ನೀತಾ ಈ ಸಂದರ್ಭ ಇದ್ದರು.