ವಿರಾಜಪೇಟೆಯಲ್ಲಿ ಖಾಸಗಿ ಬಸ್ ಕಾರ್ಮಿಕರ ಸಂಘ ಹಮ್ಮಿಕೊಂಡಿರುವ ಆಯುಧ ಪೂಜಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಮುಖಂಡರಾದ ಜೂಡಿವಾಜ್, ದಿನೇಶ್ ನಾಯರ್, ವಿನುತ್, ಅಜಯ್ ಇದ್ದರು. poster
ಕೊಡಗು

ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ 20 ರಂದು ಆಯುಧಪೂಜಾ ಉತ್ಸವ

ಪೋಸ್ಟರ್ ಬಿಡುಗಡೆ

ವಿರಾಜಪೇಟೆ : ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದಿಂದ ವಿರಾಜಪೇಟೆಯಲ್ಲಿ 19ನೇ ವರ್ಷದ ಅದ್ದೂರಿ ಆಯುಧ ಪೂಜಾ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಅ. 20 ರಂದು ನೆರವೇರಲಿದೆ ಎಂದು ಸಂಘದ ಅಧ್ಯಕ್ಷ ಜೂಡಿವಾಸ್ ತಿಳಿಸಿದರು.

ಅಂದು ಬೆಳಗ್ಗೆ 10 ಗಂಟೆಗೆ ಸಂಘದ ಕಚೇರಿಯಲ್ಲಿ ಆಯುಧ ಪೂಜೆ, 10.30ಕ್ಕೆ ಸ್ಥಳೀಯ ಕಲಾ ಪ್ರತಿಭೆಗಳು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ ಎಂದು ಅವರು ಸೋಮವಾರ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ವಿವರಿಸಿದರು.

ಅಂದು ಮಧ್ಯಾಹ್ನ 1ಕ್ಕೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 3ಕ್ಕೆ ಪ್ರಖ್ಯಾತ ಬೈಕ್ ಸವಾರರಿಂದ ಸಾಹಸ ಪ್ರದರ್ಶನ ಜರುಗಲಿದೆ ಎಂದರು.

ಸಂಜೆ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಸಂಗೀತ ರಸಮಂಜರಿ, ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಿರಿಯರು, ಪೌರಕಾರ್ಮಿಕರು, ಸಮಾಜ ಸೇವಕರು, ನಿವೃತ್ತ ಬಸ್ ಕಾರ್ಮಿಕರು ಹಾಗೂ ಪ್ರತಿಭಾವಂತ ಮಕ್ಕಳಿಗೆ ಗೌರವಿಸಲಾಗುವುದು. ನಂತರ ಕ್ಯಾಲಿಕಟ್ ನ ಪ್ರಖ್ಯಾತ ಸರಿಗಂ ಸಂಗೀತ ಹಾಗೂ ಮ್ಯಾಜಿಕ್ ಡ್ಯಾನ್ಸ್ ನೆರವೇರಲಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್, ಖಜಾಂಚಿ ಬಿ.ವಿ. ವಿನಂತು ಹಾಗೂ ನಿರ್ದೇಶಕ ಕೆ.ಈ. ಅಜಯ್ ಉಪಸ್ಥಿತರಿದ್ದರು.