ಕೈಗ್ ಸ್ಪೋರ್ಟ್ಸ್ ಪೌಂಡೇಷನ್ ವತಿಯಿಂದ ನಡೆಯುವ ಹೊನಲು ಬೆಳಕಿನ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಜರ್ಸಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಸಿ.ಎಸ್. ಅರುಣ್ ಮಾಚಯ್ಯ, ಕರ್ನಲ್ ಬಾಳೆಯಡ ಸುಬ್ರಮಣಿ, ಚೆಪ್ಪುಡೀರ ಎಸ್. ಪೂಣಚ್ಚ, ಮೊಳ್ಳೆರ ಸದಾ ಅಪ್ಪಚ್ಚು ಮತ್ತಿತರರು ಇದ್ದರು. 
ಕೊಡಗು

ಕೈಗ್ ಹೊನಲು ಬೆಳಕಿನ ಹಾಕಿ ಜರ್ಸಿ ಬಿಡುಗಡೆ

ಗೋಣಿಕೊಪ್ಪಲು

ಕ್ರೀಡೆಯಲ್ಲಿ ಸಾಧನೆ ಮಾಡಿದವರು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಮುಂದುವರೆಸಬಹುದು ಎನ್ನುವುದಕ್ಕೆ ನಮ್ಮ ಮುಂದೆಯೇ ಸಾಕಷ್ಟು ಉದಾಹರಣೆಗಳಿವೆ ಎಂದು ಕರ್ನಾಟಕ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಹೇಳಿದರು. ಗೋಣಿಕೊಪ್ಪಲುವಿನ ಕ್ಯಾಲ್ಸ್ ವಿದ್ಯಾ ಸಂಸ್ಥೆಯ ಟರ್ಫ್ ಮೈದಾನದಲ್ಲಿ ನ.17ರಿಂದ 22ರವರೆಗೆ ಕೈಗ್ ಸ್ಪೋರ್ಟ್ಸ್ ಪೌಂಡೇಷನ್ ವತಿಯಿಂದ 6 ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಜರ್ಸಿಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದರು.

ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ಲಭಿಸುತ್ತಿದೆ. ಹಾಕಿಯನ್ನು ಪ್ರೋತ್ಸಾಹಿಸಲು ಸಾಕಷ್ಟು ಸಂಸ್ಥೆಗಳು ಮುಂದೆ ಬರುತ್ತಿರುವುದು ಶ್ಲಾಘನೀಯ. ಕೊಡಗಿನಲ್ಲಿ ಕ್ರೀಡೆಗೆ ಸಾಕಷ್ಟು ವಿಫುಲ ಅವಕಾಶಗಳಿವೆ. ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ಶಾಸಕ ಎ.ಎಸ್. ಪೊನ್ನಣ್ಣ ವಿ.ಬಾಡಗದಲ್ಲಿ 100 ಕೋಟಿ ರೂ. ವೆಚ್ಚದ ಕ್ರೀಡಾ ಸಂಕೀರ್ಣಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಕೊಡಗಿನ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ಲಭ್ಯವಾಗಲಿದೆ. ಕೊಡಗು ಶಾಶ್ವತವಾಗಿ ಕ್ರೀಡಾ ಕ್ಷೇತ್ರವಾಗಲಿದೆ ಎಂದರು.

ಒಲಿಂಪಿಯನ್ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ 16 ಹಾಗೂ 18 ವಯಸ್ಸಿನ ಕೆಳಗೆ ಇರುವ ಮಕ್ಕಳಿಗೆ ಹಾಕಿಯ ಬಗ್ಗೆ ಹೆಚ್ಚಿನ ತರಬೇತಿಗಳು ಸಿಗುವಂತಾಗಬೇಕು ಇದರಿಂದ ರಾಷ್ಟç ಹಾಗೂ ಅಂತಾರಾಷ್ಟಿçÃಯ ಮಟ್ಟದಲ್ಲಿ ಕೊಡಗಿನ ಮಕ್ಕಳು ಆಡುವ ಅವಕಾಶ ಹೆಚ್ಚಾಗಿ ಲಭಿಸಲಿದೆ. ಈ ನಿಟ್ಟಿನಲ್ಲಿ ನೂತನ ಹಾಕಿ ಅಕಾಡೆಮಿ ಪ್ರಾರಂಭವಾಗಬೇಕು. ನುರಿತ ಕೋಚ್‌ಗಳ ಮೂಲಕ ಯುವ ಪ್ರತಿಭೆಗಳಿಗೆ ನಿರಂತರ ತರಬೇತಿಗಳು ಸಿಗುವಂತಾಗಬೇಕು ಎಂದು ಹೇಳಿದರು.

ಒಲಿಂಪಿಯನ್ ಚೆಪ್ಪುಡೀರ ಎಸ್. ಪೂಣಚ್ಚ ಮಾತನಾಡಿ ವಾರ್ಷಿಕವಾಗಿ ಕೊಡಗಿನ ಮಕ್ಕಳಿಗೆ ಹಾಕಿ ಕ್ರೀಡೆಯಲ್ಲಿ ಭಾಗವಹಿಸಲು ಹಾಗೂ ಹಾಕಿಯನ್ನು ಪ್ರೋತ್ಸಾಹಿಸಲು ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮುವ ವಿಶ್ವಾಸ ಹೊಂದಿದ್ದೇವೆ. ಕೈಗ್ ಸಂಸ್ಥೆಯು ವಾರ್ಷಿಕವಾಗಿ ಕೊಡಗಿನಲ್ಲಿ ಹಾಕಿ ಕ್ರೀಡೆಯ ಬೆಳವಣಿಗೆಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಇದು ನಿರಂತರವಾಗಿ ಮುಂದುವರೆಯಲಿ ಎಂದರು.

ಅಮ್ಮತ್ತಿಯ ಕಾವೇರಿ ರಾಯಲ್ಸ್ ರಿಕ್ರೇಷನ್ ಕ್ಲಬ್ ಅಧ್ಯಕ್ಷ ಮೊಳ್ಳೆರ ಸದಾ ಅಪ್ಪಚ್ಚು ಮಾತನಾಡಿ, ಜಿಲ್ಲೆಯಲ್ಲಿ ಹಾಕಿ ಕ್ರೀಡೆಯ ಪ್ರೋತ್ಸಾಹಕ್ಕೆ ಕೈಗ್ ಸಂಸ್ಥೆ ಮುಂದೆ ಬಂದಿದೆ. ನಮ್ಮ ಸಂಸ್ಥೆ ಕೈಗ್ ಜತೆಗೆ ಕೈ ಜೋಡಿಸಿ ಈ ಬಾರಿಯ 2ನೇ ಆವೃತ್ತಿಯನ್ನು ಯಶಸ್ವಿಗೊಳಿಸಲು ಕಟಿಬದ್ದರಾಗಿದ್ದೇವೆ. ಎಂದು ಹೇಳಿದರು.

ಕೈಗ್ ಸ್ಪೋರ್ಟ್ಸ್ ಪೌಂಡೇಷನ್‌ನ ಸಿಇಒ ಸುಭಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಕಿ ಕೂರ್ಗ್ನ ಉಪಾಧ್ಯಕ್ಷೆ ಯಮುನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಅಮ್ಮಂಡಿರ ಚೇತನ್, ಅಂತಾರಾಷ್ಟಿçÃಯ ಹಾಕಿ ಪಟು ಕೂತಂಡ ಕೆ. ಪೂಣಚ್ಚ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವ ಕುಮಾರ್, ಕೈಗ್ ಸ್ಪೋರ್ಟ್ಸ್ ಪೌಂಡೇಷನ್‌ನ ಪೊನ್ನಚೆಟ್ಟಿರ ಯೋಗಿತ ಇದ್ದರು.

ಈ ಪಂದ್ಯಾವಳಿಯಲ್ಲಿ ಪ್ರತಿ ತಂಡದಲ್ಲಿ ರಾಷ್ಟಿçÃಯ ಹಾಗೂ ಅಂತಾರಾಷ್ಟಿçÃಯ ಮಟ್ಟದ 5 ಅತಿಥಿ ಆಟಗಾರರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಮಹಿಳಾ ತಂಡಗಳಿಗೆ ಹಾಕಿಯಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ 3 ದಿನಗಳ ಕಾಲ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸಾಯಿ ಎ ತಂಡ ಮಡಿಕೇರಿ, ಸಾಯಿ ಬಿ ತಂಡ ಮಡಿಕೇರಿ, ಸಿಬಿಡಿ ತಂಡ ಟೀಮ್ ಕೊಡವ ಟ್ರೆöÊಬ್, ಸ್ಲೋಕ್ ಹಾಕಿ ಕ್ಲಬ್, ಹಸ್ಟಲ್ ಹಾಕಿ ಕ್ಲಬ್ ಕೊಚ್ಚಿ, ಬಿಬಿಸಿಎಲ್ ಮುಂಬೈನ ಮಹಿಳಾ ತಂಡಗಳು ಭಾಗವಹಿಸಲಿವೆ.

ಉಳಿದಂತೆ ಪಂದ್ಯಾವಳಿಯಲ್ಲಿ ಕೂರ್ಗ್ ಚಾಲೆಂಜರ್ಸ್, ಕೋಣನಕಟ್ಟೆ ಇಲೆವೆನ್, ಮಡಿಕೇರಿ ಚಾರ್ಮರ್ಸ್, ಕುಂದ ಬೊಟ್ಟಿಯತ್‌ನಾಡ್, ಮಲ್ಮಕಕ್ಕಬ್ಬೆ, ಸೋಮವಾರಪೇಟೆ ಡಾಲ್ಫಿನ್, ಯುಎಸ್‌ಸಿ ಬೇರಳಿನಾಡ್, ಬಲಂಬೇರಿ ಮಹಾದೇವ ಸ್ಪೋರ್ಟ್ಸ್ ಕ್ಲಬ್, ಅಮ್ಮತ್ತಿ ಸ್ಪೋರ್ಟ್ ಕ್ಲಬ್, ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್, ಕಲ್ಚರಲ್ ಅಸೋಸಿಯೇಷನ್ ಕಾವೇರಿ ರಾಯಲ್ಸ್ ಅಮ್ಮತ್ತಿ, ನಾಪೋಕ್ಲು ಶಿವಾಜಿ, ಅಂಜಿಗೇರಿ ನಾಡ್, ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್, ಈಶ್ವರ ಯೂತ್ ಕ್ಲಬ್ ಬೇಗೂರು, ಹಾಗೂ ಕೈಗ್ ಜೂಮರ್ಸ್ ಸೇರಿದಂತೆ 16 ತಂಡಗಳು ಭಾಗವಹಿಸಲಿವೆ.