ಡಾ. ಕಸ್ತೂರಿರಂಗನ್ ವರದಿಗೆ ಸಂಬAಧಿಸಿದAತೆ ಪಂಚಾಯಿತಿ ಆಡಳಿತಾಧಿಕಾರಿ ಸಚಿನ್ ಅಧ್ಯಕ್ಷತೆಯಲ್ಲಿ ನಡೆದ ಕುಂದಚೇರಿ ಗ್ರಾ.ಪಂ. ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಅಭಿಪ್ರಾಯ ಮಂಡಿಸಿದರು. 
ಕೊಡಗು

ಕಸ್ತೂರಿರಂಗನ್ ವರದಿ ವಿರೋಧಿಸಿ ಗ್ರಾಮ ಸಭೆ

ಮಡಿಕೇರಿ

ಡಾ. ಕಸ್ತೂರಿರಂಗನ್ ವರದಿಗೆ ಸಂಬAಧಿಸಿದAತೆ ಕುಂದಚೇರಿ ಗ್ರಾ.ಪಂ. ವಿಶೇಷ ಗ್ರಾಮ ಸಭೆ ಪಂಚಾಯಿತಿ ಆಡಳಿತಾಧಿಕಾರಿ ಸಚಿನ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಕುಂದಚೇರಿ ಗ್ರಾ.ಪಂ ವ್ಯಾಪ್ತಿಗೆ ನಾಲ್ಕು ಗ್ರಾಮಗಳು ಒಳಪಡುತ್ತಿದ್ದು, ನಾಲ್ಕು ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಗ್ರಾಮಗಳು ಶಾಲೆ, ಅಂಗನವಾಡಿ, ಆಸ್ಪತ್ರೆ, ಸಮುದಾಯ ಭವನ, ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳು, ಕುಡಿಯುವ ನೀರಿನ ಕಟ್ಟೆಗಳು, ಪೈಪ್ ಲೈನ್‌ಗಳು ಸೇರಿದಂತೆ ಜನ ವಸತಿ ಪ್ರದೇಶಗಳನ್ನು ಹೊಂದಿವೆ.

2014ರ ಕಸ್ತೂರಿ ರಂಗನ್ ವರದಿಯಲ್ಲಿ ಶೇ.37ರಷ್ಟು ಅರಣ್ಯ ಪ್ರದೇಶವನ್ನು ಹೊಂದಲು ಶಿಫಾರಸ್ಸು ಮಾಡಲಾಗಿತ್ತು. ಕುಂದಚೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ 7388 ಹೆಕ್ಟೇರ್ ಭೂಪ್ರದೇಶವಿದ್ದು, 4152 ಹೆಕ್ಟೇರ್ ಎಂದರೆ ಶೇ.56.25 ಅರಣ್ಯ ಪ್ರದೇಶವಾಗಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಿರುವುದಕ್ಕಿಂತ ಹೆಚ್ಚಿನ ಭಾಗ ಅರಣ್ಯವಿರುವುದರಿಂದ ಸೂಕ್ಷö್ಮ ವಲಯ ಪ್ರದೇಶಗಳನ್ನು ಶೂನ್ಯ ಮಾಡುವಂತೆ ಸಭೆಯಲ್ಲಿ ಒಮ್ಮತದ ಒತ್ತಾಯದ ನಿರ್ಧಾರ ಕೈಗೊಳ್ಳಲಾಯಿತು.

ಹಿಂದೆ 1980 ರಿಂದ ಸರ್ಕಾರದ ವತಿಯಿಂದ ರೈತರು, ಕಾರ್ಮಿಕರು ಹಾಗೂ ನಿವೃತ್ತ ಯೋಧರಿಗೆ ಹಕ್ಕುಪತ್ರ, ಪಹಣಿ ಪತ್ರ ಮತ್ತು ಮಂಜೂರಾತಿ ಪತ್ರ ನೀಡಲಾಗಿದೆ. ಈ ಜಾಗಗಳನ್ನು ಹೊರತುಪಡಿಸಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಹದ್ದುಬಸ್ತು ಗುರುತಿಸಿಕೊಡಬೇಕೆಂದು ಹಿರಿಯರಾದ ಕೆದಂಬಾಡಿ ಸುರೇಂದ್ರ ಅಭಿಪ್ರಾಯ ಮಂಡಿಸಿದರು. ಇದಕ್ಕೆ ಸರ್ವರೂ ಸಮ್ಮತಿ ಸೂಚಿಸಿದರು.

2014 ನವೆಂಬರ್ 25 ರಂದು ವಿಶೇಷ ಸಭೆ ನಡೆಸಿ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ನಂತರ 2026 ಜುಲೈ 4 ರಂದು ಗ್ರಾಮಸ್ಥರ ಸಭೆಯಲ್ಲಿ ಚರ್ಚಿಸಿ ರಸ್ತೆ ತಡೆ ಪ್ರತಿಭಟನೆ ನಡೆಸಿ ಪಿಡಿಒ ಅವರ ಮೂಲಕ ಆಕ್ಷೇಪಣೆ ಸಲ್ಲಿಸಲಾಗಿದೆ. ಅಲ್ಲದೆ ಗ್ರಾಮಗಳ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

2013 ನವೆಂಬರ್ 13ರ ನೋಟಿಫಿಕೇಶನ್ ಹಿಂಪಡೆಯಬೇಕು, ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ ಮತ್ತು ದೋಷಗಳಿರುವುದರಿಂದ ಯಥಾವತ್ತಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಪರಿಸರ ಅಧ್ಯಯನಕ್ಕೆ ಗ್ರಾಮ ಮಟ್ಟದಲ್ಲಿ ಹೊಸ ಸಮಿತಿ ರಚಿಸಬೇಕು, ಸ್ಥಳೀಯವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. 7388 ಹೆಕ್ಟೇರ್ ಭೂಪ್ರದೇಶದಲ್ಲಿ 4152 ಹೆಕ್ಟೇರ್ ಪ್ರದೇಶ ಅರಣ್ಯವಿರುವುದರಿಂದ ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ಎರಡು ಗ್ರಾಮಗಳನ್ನು ವರದಿ ವ್ಯಾಪ್ತಿಯಿಂದ ಕೈಬಿಡಬೇಕು. ಕಸ್ತೂರಿ ರಂಗನ್ ವರದಿ ಆಧಾರದ ಮೇಲೆ ಇಎಸ್‌ಎ ಜಾರಿಗೆ ತರುವ ಸಂದರ್ಭ ಸ್ಥಳೀಯ ಜನರ ಅಭಿಪ್ರಾಯ ಮತ್ತು ಗ್ರಾಮಗಳ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಪಿ.ಬಿ. ದಿನೇಶ್, ಮಾಜಿ ಸದಸ್ಯ ಕೆ.ಯು. ಹ್ಯಾರಿಸ್, ಪ್ರಮುಖರಾದ ಕೀರ್ತಿ ಉತ್ತಪ್ಪ, ಕೀರ್ತಿ ಕುಮಾರ್, ದಬ್ಬಡ್ಕ ಶ್ರೀಧರ್, ಸೆಟ್ಟೇಜನ ಬ್ರಿಜೇಶ್, ಕೆದಂಬಾಡಿ ಜಯಪ್ರಕಾಶ್, ಮಂಗೇರಿರ ಸೋಮಯ್ಯ, ಸಿ.ಎಸ್. ವೇಣು ಗೋಪಾಲ್, ಕೆದಂಬಾಡಿ ಪ್ರವೀಣ್ ಕುಮಾರ್, ಕಾಡಂಡ ಭೀಮಯ್ಯ ಡಾ. ಕಸ್ತೂರಿರಂಗನ್ ವರದಿಗೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದರು. ಆಡಳಿತಾಧಿಕಾರಿ ಸಚಿನ್ ಸಭೆಯ ನಿರ್ಣಯ ಹಾಗೂ ಜನಾಭಿಪ್ರಾಯವನ್ನು ಸಂಬAಧಪಟ್ಟ ಇಲಾಖೆಗೆ ತಲುಪಿಸುವುದಾಗಿ ತಿಳಿಸಿದರು. ಪಿಡಿಒ ಹರೀಶ್ ಇದ್ದರು.