ನಂದಿಗುಂದ ಗ್ರಾಮದಲ್ಲಿ ರಾತ್ರಿ ವೇಳೆಯಲ್ಲಿ ನಡೆಯುತ್ತಿರುವ ಕಳಪೆ ಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಕರವೆ ಸಂಘಟನೆ ಮತ್ತು ಗ್ರಾಮಸ್ಥರು KDG
ಕೊಡಗು

ಕಳಪೆ ರಸ್ತೆ ಕಾಮಗಾರಿ ತಡೆದ ಗ್ರಾಮಸ್ಥರು

ಸ್ವಾಭಿಮಾನಿ ಸೇನೆ ನೇತೃತ್ವ

ಶನಿವಾರಸಂತೆ: ಸಮಿಪದ ನಂದಿಗುಂದ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಯಮಿತ ಇಲಾಖೆ ವತಿಯಿಂದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಅವೈಜ್ಞಾನಿಕ ಮತ್ತು ಕಳಪೆ ಮಟ್ಟದ ಕಾಮಗಾರಿ ಎದ್ದು ಕಾಣುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆ ಮತ್ತು ಗ್ರಾಮಸ್ಥರು ಜಂಟಿಯಾಗಿ ಪ್ರತಿಭಟಿಸಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಘಟನೆ ನಂದಿಗುಂದ ಗ್ರಾಮದಲ್ಲಿ ನಡೆದಿದೆ.

ನಂದಿಗುಂದ ಗ್ರಾಮದಲ್ಲಿ ಕೆಆರ್‌ಐಡಿಎಲ್ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ನಿಯಮಗಳನ್ನು ಗಾಳಿಗೆ ತೂರಿ ನಡೆಸಲಾಗುತ್ತಿರುವುದು, ಸ್ಥಳದಲ್ಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿ, ಇಂಜಿನಿಯರ್ ಇಲ್ಲದಿರುವುದು ರಾತ್ರಿ ವೇಳೆಯಲ್ಲಿ ರಸ್ತೆ ಕಾಮಗಾರಿ ಕಾರ್ಯ ನಡೆಯುತ್ತಿರುವುದು, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವಾಗ ವೈಜ್ಞಾನಿಕ ರೀತಿಯನ್ನು ಅನುಸರಿಸದೆ ತುರಾತುರಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದು, ರೋಲರ್ ಮೂಲಕ ರಸ್ತೆಗೆ ಜಲ್ಲಿಕಲ್ಲುಗಳನ್ನು ಹಾಕಿ ತಳಪಾಯ ಗಟ್ಟಿಗೊಳಿಸಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ ಆದರೆ ಇಲ್ಲಿ ತಾಂತ್ರಿಕ ನಿಮಯಮಗಳನ್ನು ಗಾಳಿಗೆ ತೂರಿ ತೀರಾ ಅವೈಜ್ಞಾನಿಕವಾಗಿ ಕಳಪೆ ಮಟ್ಟದ ಕಾಮಗಾರಿಯನ್ನು ನಡೆಸಲಾಗುತ್ತಿರುವ ಮಾಹಿತಿಯನ್ನು ತಿಳಿದ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಅಧ್ಯಕ್ಷ ಪ್ರಾನ್ಸಿಸ್ ಡಿಸೋಜ ನೇತೃತ್ವದಲ್ಲಿ ನಂದಿಗುಂದ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸುವಂತೆ ತರಾಟೆಗೆ ತೆಗೆದುಕೊಂಡರು ಈ ಸಂಬಂಧ ಸಬಂಧ ಪಟ್ಟ ಅಧಿಕಾರಿ, ಇಂಜಿನಿಯರ್ ಆಗಲಿ ಗುತ್ತಿಗೆದಾರರಾಗಲಿ ಯಾರೊಬ್ಬರೂ ಸಹ ಸ್ಥಳದಲ್ಲಿ ಇಲ್ಲದೆ ಕಾರ್ಮಿಕರು ಮಾತ್ರವೇ ರಸ್ತೆ ಕಾಮಗಾರಿ ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಇಂಜಿನಿಯರ್ ಒಬ್ಬರಿಗೆ ದೂರವಾಣಿಯಲ್ಲಿ ಕರೆ ಮಾಡಿ ಕೇಳಿದಾಗ ಅವರಿಂದ ನಮಗೆ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೆ ಮಾಹಿತಿ ಇರುವುದಿಲ್ಲ ಎಂದು ಉಡಾಫೆ ಉತ್ತರ ನೀಡಿರುವ ಹಿನ್ನಯಲ್ಲಿೆ ಗ್ರಾಮಸ್ಥರು ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದರು ಮತ್ತು ಈ ಬಗ್ಗೆ ಕರವೇ ಸ್ವಾಭಿಮಾನಿ ಸೇನೆ ಮತ್ತು ಗ್ರಾಮಸ್ಥರು ಜಂಟಿಯಾಗಿ ಲೋಕಾಯುಕ್ತ ಇಲಾಖೆಗೆ ದೂರು ನೀಡಲಾಗುವುದೆಂದು ತೀರ್ಮಾನಿಸಿದರು.

ನಂದಿಗುಂದ ಗ್ರಾಮದಲ್ಲಿ ಕೆಆರ್‌ಐಡಿಎಲ್ ವತಿಯಿಂದ ನಡೆಯುತ್ತಿರುವ ಕಾಂಕ್ರಿಟ್ ರಸ್ತೆ ನಿರ್ಮಾಣ ಅವೈಜ್ಞಾನಿಕ, ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿರುವುದು ಸಾರ್ವಜನಿಕರಿಗೆ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಅನುಮಾನ ಬರುತ್ತಿರುವ ಹಿನ್ನಲೆಯಲ್ಲಿ ನಾವು ಈ ಸಂಬಂಧ ಇಲಾಖೆಯ ಅಧಿಕಾರಿ ಮತ್ತು ಇಂಜಿನಿಯರ್ ವಿರುದ್ದ ಶೀಘ್ರದಲ್ಲೆ ಲೋಕಾಯುಕ್ತಕ್ಕೆ ಅಧಿಕೃತ ದೂರು ನೀಡುತ್ತೇವೆ-ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಅಧ್ಯಕ್ಷ, ಕರವೇ ಸ್ವಾಬಿಮಾನಿ ಸೇನೆ