ಕತ್ತಲೆಕಾಡು-ಜೇನುಕೊಲ್ಲಿಯ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ 20ನೇ ವರ್ಷದ ಗೌರಿ ಗಣೇಶೋತ್ಸವ ಸಂಭ್ರಮದಿAದ ನಡೆಯಿತು. ಟ್ರಸ್ಟ್ ಪದಾಧಿಕಾರಿಗಳು, ಊರಿನ ಪ್ರಮುಖರು, ಕಲಾವಿದರು ಇದ್ದರು. 
ಕೊಡಗು

ಕತ್ತಲೆಕಾಡಿನಲ್ಲಿ ಗಣೇಶೋತ್ಸವ ಸಂಭ್ರಮ

ಮಡಿಕೇರಿ

ಇಲ್ಲಿಗೆ ಸಮೀಪದ ಕತ್ತಲೆಕಾಡು-ಜೇನುಕೊಲ್ಲಿಯ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ 20ನೇ ವರ್ಷದ ಗೌರಿ ಗಣೇಶೋತ್ಸವ ಈಚೆಗೆ ಸಂಭ್ರಮದಿAದ ನಡೆಯಿತು. ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಂತರ ಭಾರತ್ ಮಾತಾ ಪೂಜೆ ನೆರವೇರಿತು. ಬಳಿಕ ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಪರಪ್ಪು ಕೃಷ್ಣಪ್ಪ, ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಸುಶೀಲ, ನಿವೃತ್ತ ಶಿಕ್ಷಕಿ ಎಂ.ಟಿ. ಲಕ್ಷ್ಮೀ, ಫುಟ್‌ಬಾಲ್ ತರಬೇತುಗಾರ್ತಿ ಸುಶ್ಮಿತಾ ರೈ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಗ್ರಾಮಸ್ಥರಿಗೆ ವಿವಿಧ ಮನರಂಜನಾ ಕ್ರೀಡಾ ಸ್ಪರ್ಧೆಗಳು ನಡೆದವು. ಗೂನಡ್ಕದ ಶ್ರೀ ಕೃಷ್ಣ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ವಿನಾಯಕ ಸೇವಾ ಟ್ರಸ್ಟ್ ಭಜನಾ ತಂಡದವರಿಗೆ ಭಜನೆ ಹಾಡುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಆಶ್ಲೇಷ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸ್ಥಳೀಯ ಪ್ರತಿಭೆಗಳಿಂದ ಸಂಗೀತ ರಸಮಂಜರಿ ಕಾರ್ಯುಕ್ರಮಗಳು ನಡೆದವು. ಮಹಾಪೂಜೆ ಬಳಿಕ ಗ್ರಾಮದಲ್ಲಿ ಗೌರಿ ಗಣೇಶ ಮೂರ್ತಿಯ ಮೆರವಣಿಗೆ ನಡೆಸಿ ಬಳಿಕ ಕ್ಲೊಸ್‌ಬರ್ನ್ ಕೆರೆಯಲ್ಲಿ ವಿಸರ್ಜಿಸಲಾಯಿತು. ಕೊಡಗಿನ ಸಾಂಪ್ರದಾಯಿಕ ವಾದ್ಯಗೋಷ್ಠಿ, ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಕುಣಿತ ಭಜನೆ ತಂಡದ ಪ್ರದರ್ಶನ, ಬೊಂಬೆ ಕಲಾವಿದರ ಪ್ರದರ್ಶನ ಮೆರವಣಿಗೆಗೆ ಸಾಂಪ್ರದಾಯಿಕ ರಂಗು ನೀಡಿತು. ವೇದಮೂರ್ತಿ ಗಿರೀಶ್ ತಂತ್ರಿ ಪೂಜಾ ಕಾರ್ಯಗಳನ್ನು ನಡೆಸಿದರು.