ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಉದ್ಘಾಟಿಸಿದರು. ಸಂಪತ್, ವಿಜಯ್, ಮಹೇಶ್ ಇದ್ದರು.  
ಕೊಡಗು

ಕಡ್ಡಾಯವಾಗಿ ಮಾತೃಭಾಷೆ ಕಲಿಯಿರಿ

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಸಲಹೆ

ಸೋಮವಾರಪೇಟೆ: ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಎಸ್.ವಿ.ಸಂಪತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಪಟ್ಟಣದಲ್ಲಿರುವ ಎಲ್ಲ ಪ್ರತಿಮೆಗಳಿಗೆ ಮಾಲಾರ್ಪಣೆ, ಆಟೋಗಳ ಮೆರವಣಿಗೆ ನಡೆಯಿತು.

ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ವೇದಿಕೆ ಸಮಾರಂಭವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಗೆ ಕವಿಗಳು ಮತ್ತು ಸಾಹಿತಿಗಳ ಕೊಡುಗೆ ಅಪಾರ. ಅವರ ಶ್ರಮ, ತ್ಯಾಗವನ್ನು ನಾವು ಮನನ ಮಾಡಿಕೊಳ್ಳಬೇಕು. ಮಾತೃಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದರು.

ಕರವೇ(ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಮಾತನಾಡಿ, ನೆಲ-ಜಲ, ನಾಡು-ನುಡಿಗೆ ಧಕ್ಕೆಯಾದಾಗ ಹೋರಾಟ ಮಾಡಲೇಬೇಕು ಎಂದು ಹೇಳಿದರು.

ಹಿಂದೂ ಮಲೆಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ಪತ್ರಕರ್ತ ಎಸ್.ಮಹೇಶ್, ಜೇಸಿ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಪ್ರಮುಖರಾದ ಬಿ.ಬಿ.ಭಾರತೀಶ್, ವಸಂತ್ ಆಚಾರಿ, ಯೋಗೇಂದ್ರ, ಕೆ.ಈ.ಸುಲೈಮಾನ್, ರೋಹಿತ್ ಪೂಜಾರಿ, ಪಾಣತ್ತಲೆ ಶಶಿಧರ್, ಕಾರ್ಯದರ್ಶಿ ಪಿ.ಎಂ.ಕವನ್, ಪದಾಧಿಕಾರಿಗಳಾದ ರವೀಶ್ ಕಲ್ಕಂದೂರು, ಯಡೂರು ಪ್ರಸನ್ನ, ವಿಜು ಐಗೂರು, ಆರ್.ಮೋಹನ್, ಎ.ಸಿ.ಜಗದೀಶ್ ಮತ್ತಿತರು ಇದ್ದರು. ಶಾಲಾ ಮಕ್ಕಳು ನೃತ್ಯ ಪ್ರದರ್ಶನ ನಡೆಸಿಕೊಟ್ಟರು.