ಮಡಿಕೇರಿ ಸÀರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ರೋರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ರೋಟರಿ ಮತ್ತು ರೋರ‍್ಯಾಕ್ಟ್ ಪದಾಧಿಕಾರಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. ಕೆ. ವಸಂತ್ ಕುಮಾರ್, ಎಸ್.ಎಸ್. ಸಂಪತ್ ಕುಮಾರ್, ಕಿರಣ್ ಕುಂದರ್, ಶ್ರೀರಕ್ಷಾ ಪ್ರಭಾಕರ್ ಮತ್ತಿತರರು ಇದ್ದರು. 
ಕೊಡಗು

ಅವಕಾಶಗಳಿಗೆ ಕಾಯದೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು

ಮಡಿಕೇರಿ

ವಿಶಾಲವಾದ ಮರದಂತಿರುವ ರೋಟರಿ ಸಂಸ್ಥೆಯ ಒಂದು ಸಣ್ಣ ಚಿಗುರೇ ರೋರ‍್ಯಾಕ್ಟ್ ಕ್ಲಬ್ ಆಗಿದ್ದು, ವಿದ್ಯಾರ್ಥಿಗಳು ರೋರ‍್ಯಾಕ್ಟ್ ಕ್ಲಬ್ ಸೇರುವ ಮೂಲಕ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ಮುಂದಿನ ದಿನಗಳಲ್ಲಿ ರೋಟರಿಯನ್‌ಗಳಾಗಿ ಗುರುತಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆ 3181ರ ವಲಯ 6ರ ವಲಯ ಸೇನಾನಿ ಕೆ. ವಸಂತ್ ಕುಮಾರ್ ಹೇಳಿದರು. ಇಲ್ಲಿನ ಸÀರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿದ್ದ 2026-27ನೇ ಸಾಲಿನ ರೋರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಅವಕಾಶಗಳಿಗಾಗಿ ಕಾಯದೆ, ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ರೋಟರಿ ವುಡ್ಸ್ನ ಸ್ಥಾಪಕ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಮಾತನಾಡಿ ರೋರ‍್ಯಾಕ್ಟರ್‌ಗಳು ಸಣ್ಣ ಸಣ್ಣ ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಳ್ಳುವತ್ತ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಮಾತೃ ಸಂಸ್ಥೆಯಾದ ರೋಟರಿ ವುಡ್ಸ್ ಎಲ್ಲಾ ರೀತಿಯ ಸಕಾರ ನೀಡಲಿದೆ ಎಂದರು.

ರೋಟರಿ ವುಡ್ಸ್ನ ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಕಳೆದ ಸಾಲಿನಲ್ಲಿ ಆರಂಭಗೊAಡಿರುವ ಈ ಕ್ಲಬ್ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಿ ರೋಟರಿ ಜಿಲ್ಲೆಯಲ್ಲೇ ಅತ್ಯುತ್ತಮ ಕ್ಲಬ್ ಆಗಿ ಹೊರಹೊಮ್ಮಬೇಕು. ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ರೋರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ಶ್ರೀರಕ್ಷಾ ಪ್ರಭಾಕರ್ ಮಾತನಾಡಿ, ಕಾಲೇಜಿನ ರೋರ‍್ಯಾಕ್ಟ್ ಕ್ಲಬ್À ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿ, ತಾನು ರೋರ‍್ಯಾಕ್ಟರ್ ಆಗಿ ಬೆಳೆಯಲು ರೋಟರಿ ವುಡ್ಸ್ ನೀಡಿದ ಮಾರ್ಗದರ್ಶನವೇ ಕಾರಣ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ವೇಣುಗೋಪಾಲ್ ಮಾತನಾಡಿ, ರೋಟರಿ ವುಡ್ಸ್ ಸಹಯೋಗದಲ್ಲಿ ಕಾಲೇಜಿನಲ್ಲಿ ಹಲವು ಉಪಯುಕ್ತ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಕ್ಲಬ್‌ನ ಎಲ್ಲಾ ಕಾರ್ಯಕ್ರಮಗಳಿಗೆ ಕಾಲೇಜಿನ ಸಂಪೂರ್ಣ ಸಹಕಾರ ಇರಲಿದೆ ಎಂದರು.

ಇತ್ತೀಚೆಗೆ ಅಧ್ಯಾಪಕ ಭೂಷಣ ಪ್ರಶಸ್ತಿ ಪಡೆದ ರೋರ‍್ಯಾಕ್ಟ್ ಕ್ಲಬ್ ಸಮನ್ವಯಾಧಿಕಾರಿ ರಾಖಿ ಪೂವಣ್ಣ ಅವರನ್ನು ರೋಟರಿ ವುಡ್ಸ್ ವತಿಯಿಂದ ಸನ್ಮಾನಿಸಲಾಯಿತು. ಶ್ರೀರಕ್ಷಾ ಪ್ರಭಾಕರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ, ಕಾರ್ಯದರ್ಶಿ ಸ್ಮಿತಾ ಚೆಂಗಪ್ಪ ಕಾಲೇಜಿನ ಅಧ್ಯಾಪಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೋರ‍್ಯಾಕ್ಟ್ ಅಧ್ಯಕ್ಷೆಯಾಗಿ ಅಶಿತಾ, ಕಾರ್ಯದರ್ಶಿಯಾಗಿ ಭೂಮಿಕಾ ಇದೇ ವೇಳೆ ಅಧಿಕಾರ ಸ್ವೀಕರಿಸಿದರು.