ಬೆಂಗಳೂರು ಯಲಹಂಕ ಗೌಡ ಸಮಾಜದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಸಮಾರಂಭಲ್ಲಿ ಸಮಾಜದ ಸಾಧಕರನ್ನು ಗೌರವಿಸಲಾಯಿತು. ಕುಂಞಳಿಯನ ಅಜೀತ್ ಕುಮಾರ್, ಆನಂದ ಕರಂದ್ಲಾಜೆ, ನಂಗಾರು ನಿಂಗರಾಜು, ಕೋಟೇರ ವೇಣುಗೋಪಾಲ್, ಅಚ್ಚಲ್ಪಾಡಿ ಲಕ್ಷಕುಮಾರ್, ಕಲ್ಲುಮುಟ್ಟು ನಿತ್ಯಾನಂದ, ಕನ್ನಡ್ಕ ವಿಜಯಲಕ್ಷ್ಮಿ ಜಯರಾಮ್ ಮತ್ತಿತರರು ಇದ್ದರು. 
ಕೊಡಗು

ಬೆಂಗಳೂರು ಯಲಹಂಕ ಗೌಡ ಸಮಾಜದ ಮಹಾಸಭೆ

ಸುನಿಲ್ ಪೊನ್ನೇಟಿ
ಮಡಿಕೇರಿ:
ಬೆಂಗಳೂರು ಯಲಹಂಕ ಗೌಡ ಸಮಾಜದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಸಮಾರಂಭ ಸಂಘದ ಅಧ್ಯಕ್ಷ ಕುಂಞಳಿಯನ ಅಜೀತ್ ಕುಮಾರ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆಯಿತು. ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಎಂಪ್ಲಾಯಿಸ್ ಇನ್ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ, ಶಾಲೆ-ಕಾಲೇಜುಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾಜದಲ್ಲಿ ಹೊಸದಾಗಿ ವಿವಾಹವಾದ ದಂಪತಿಗೆ ನವ ದಂಪತಿಗಳ ಪರಿಚಯ ಕಾರ್ಯಕ್ರಮದ ಮೂಲಕ ಸ್ವಾಗತಿಸಲಾಯಿತು. ಸಮಾಜಕ್ಕೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಹಿರಿಯ ಸದಸ್ಯರಿಗೆ ಗೌರವ ಸನ್ಮಾನ ಕೈಗೊಳ್ಳಲಾಯಿತು. ಹೊಸದಾಗಿ ಸೇರಿರುವ ಸದಸ್ಯರನ್ನೂ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ಸಂಘದ ವಿಸ್ತಾರ ಮತ್ತು ಒಗ್ಗಟ್ಟು ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಒಗ್ಗಟ್ಟು, ಶಿಕ್ಷಣ, ಉದ್ಯೋಗಾವಕಾಶಗಳು ಹಾಗೂ ಯುವಕರ ಪಾತ್ರ ಕುರಿತು ಮಾರ್ಗದರ್ಶನ ನೀಡಿದರು. ನಂಗಾರು ನಿಂಗರಾಜು, ಕೋಟೇರ ವೇಣುಗೋಪಾಲ್, ಅಚ್ಚಲ್ಪಾಡಿ ಲಕ್ಷಕುಮಾರ್, ಕಲ್ಲುಮುಟ್ಟು ನಿತ್ಯಾನಂದ, ಕನ್ನಡ್ಕ ವಿಜಯಲಕ್ಷ್ಮಿ ಜಯರಾಮ್, ಕಲ್ಲುಮುಟ್ಲು ಪವನ್, ಅಯ್ಯಣರ ಶಾಲಿನಿ ನಿತ್ಯ, ಕೋಳುಮುಡಿಯನ ಮಿಲನ್ ವೇದಿಕೆಯಲ್ಲಿ ಇದ್ದರು.
ಸಮಾಜದ ಯುವಕ-ಯುವತಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೃತ್ಯ, ಜನಪದ ಹೀಗೆ ವಿವಿಧ ಕಲಾಪ್ರದರ್ಶನಗಳು ಪ್ರೇಕ್ಷಕರ ಮನಸ್ಸು ಗೆದ್ದವು. ಮಹಿಳಾ ಘಟಕದ ವಿಶೇಷ ಕಾರ್ಯಕ್ರಮಗಳು ಸಮಾರಂಭಕ್ಕೆ ಹೆಚ್ಚಿನ ಕಳೆ ನೀಡಿದವು.