ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮದಲಾಪುರ ಗ್ರಾಮದಲ್ಲಿ ಏರ್ಪಡಿಸಿರುವ ವಾರ್ಷಿ ವಿಶೇಷ ಶಿಬಿರದಲ್ಲಿ ಶಿಬಿಬಿರಾರ್ಥಿಳ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ. ದೀಪಿಕಾ ಮೂರ್ತಿ, ಕೆ.ಪಿ. ವಿನಯ್, ಜಿ. ಜಯಣ್ಣ, ಎಂ. ರೇಣುಕಾ, ಕವಿತಾ ಇದ್ದರು. 
ಕೊಡಗು

ಯುವಜನತೆ ಆರೋಗ್ಯದ ಕಡೆ ನಿಗಾ ಕೊಡಬೇಕು

ಕುಶಾಲನಗರ:
ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ವ್ಯಸನಮುಕ್ತರಾಗಿ ಆರೋಗ್ಯದ ಕಡೆ ಹೆಚ್ಚು ನಿಗಾ ವಹಿಸುವ ಮೂಲಕ ಸದೃಢ, ಸಮರ್ಥ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಬೇಕೆಂದು ಕೂಡಿಗೆ ಸರ್ಕಾರಿ ಅಸ್ಪತ್ರೆಯ ವೈದ್ಯಾಧಿಕಾರಿ ಡಾ. ದೀಪಿಕಾ ಮೂರ್ತಿ ಹೇಳಿದರು.
ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮದಲಾಪುರ ಗ್ರಾಮದಲ್ಲಿ ಏರ್ಪಡಿಸಿರುವ ವಾರ್ಷಿ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದರು.
ತಂತ್ರಜ್ಞಾನ ಮತ್ತು ವಿಜ್ಞಾನದ ಈ ಯುಗದಲ್ಲಿ ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣದ ಅರಿವು ಪಡೆಯುವ ಮೂಲಕ ಹೆಚ್ಚು ಜ್ಞಾನವಂತರಾಗಿ ಶಿಕ್ಷಣದ ಗುರಿ ಸಾಧಿಸಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
ಶಿಬಿರಾಧಿಕಾರಿಗಳಾದ ಕೆ.ಪಿ. ವಿನಯ್, ಜಿ. ಜಯಣ್ಣ, ಮದಲಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ. ರೇಣುಕಾ, ಆಶಾ ಕಾರ್ಯಕರ್ತೆ ಕವಿತಾ ಇದ್ದರು.
ಯುವಕರಿಗಾಗಿ ನನ್ನ ಭಾರತ - ಡಿಜಿಟಲ್ ಸಾಕ್ಷರತೆ ಎಂಬ ಧ್ಯೇಯಘೋಷದೊಂದಿಗೆ ಒಂದು ವಾರ ಕಾಲ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳ ಆರೋಗ್ಯ ಪರಿಶೀಲನೆ ನಡೆಸಲಾಯಿತು.