ಪೊನ್ನಂಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ದಯಾ ಚಂಗಪ್ಪ, ಸುರೇಶ್, ಮಂಜುನಾಥ್, ರುದ್ರಪ್ಪ, ಕರ್ಣ, ದಿನೇಶ್ ಇತರರಿದ್ದರು. 
ಕೊಡಗು

ಬಸವೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯೆಯ ಶ್ರೀರಾಮ ಮಂದಿರದ ವಾರ್ಷಿಕೋತ್ಸವ
  • ಭಜನಾ ಕಾರ್ಯಕ್ರಮ
ಪೊನ್ನಂಪೇಟೆ: ಅಯೋಧ್ಯೆಯ ಶ್ರೀರಾಮ ಮಂದಿರದ ವಾರ್ಷಿಕೋತ್ಸವ ಪ್ರಯುಕ್ತ ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ನೆರವೇರಿತು.
ಶ್ರೀ ಬಸವೇಶ್ವರ ದೇವಾಲಯ ಆಡಳಿತ ಮಂಡಳಿಯಿಂದ ವಿವಿಧ ಪೂಜಾ ಕೈಂಕರ್ಯ ನೆರವೇರಿತು. ಬಾಳೆಲೆಯ ಕಾವೇರಿ ಕಲಾ ಸಮಿತಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಮಹಾಪೂಜೆ, ಮಹಾಮಂಗಳಾರತಿ ನೆರವೇರಿತು. ನಂತರ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಸುರೇಶ್,ಮಂಜುನಾಥ್, ರುದ್ರಪ್ಪ, ಕರ್ಣ, ಪಿ.ಟಿ.ಸುರೇಶ್, ಟಿ.ಆರ್.ದಿನೇಶ್, ಹರೀಶ್, ಮಂಜು ಇತರರಿದ್ದರು.
ಚಿತ್ರ ಶಿರ್ಷಿಕೆ:22ಠಿಠಿಣ03