ಮಡಿಕೇರಿ ಕೋಟೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಂಪರಾ ಸಪ್ತಾಹ-2025ರ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಡಾ. ನಾಯಕಂಡ ಸಿ. ಪ್ರಕಾಶ್, ಗಡಮ್ ಶ್ರೀನಿವಾಸ್, ಸುನಿಲ್ ಕುಮಾರ್, ಚೊಟ್ಟೆಯಂಡ ಸಂಜು ಕಾವೇರಪ್ಪ, ಕೇಶವ ಮೂರ್ತಿ ಮತ್ತಿತರರು ಇದ್ದರು. 
ಕೊಡಗು

ವಿಶ್ವ ಪರಂಪರಾ ಸಪ್ತಾಹ-2025 ಸಮಾರೋಪ

ಸುನಿಲ್ ಪೊನ್ನೇಟಿ
ಮಡಿಕೇರಿ:
ಶಿಲಾ ಶಾಸನ ಶಾಖೆ, ಉತ್ಖನನ ಶಾಖೆ ಮೈಸೂರು ಮತ್ತು ಭಾರತ ಸÀರ್ಕಾರದ ಸಹಯೋಗದಲ್ಲಿ ಮಡಿಕೇರಿ ಕೋಟೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಂಪರಾ ಸಪ್ತಾಹ-2025ರ ಸಮಾರೋಪ ಸಮಾರಂಭ ಮಂಗಳವಾರ ನಡೆಯಿತು.
ಪುರಾತತ್ವ ಇಲಾಖೆಯ ಶಿಲ್ಪಕಲೆಗಳ ಛಾಯಾಚಿತ್ರ, ಕೊಡಗಿನ ಪರಂಪರೆಯ ಛಾಯಾಚಿತ್ರ, ಪುರಾತನ ವಸ್ತುಗಳ ಪ್ರದರ್ಶನ ಈ ಸಂದರ್ಭ ನಡೆದವು. ವಂದೇ ಮಾತರಂ ಮತ್ತು ಭಾರತದ ಸ್ವಾತಂತ್ರ‍್ಯ ಚಳವಳಿಯ ಕುರಿತು ರಸಪ್ರಶ್ನೆ ಸ್ಪರ್ಧೆ, ಶಾಲಾಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಕೊಡಗಿನ ಪ್ರಾದೇಶಿಕ ಇತಿಹಾಸ ಕುರಿತು ವಿಶೇಷ ಉಪನ್ಯಾಸ, ಕೊಡಗಿನ ಜಾನಪದ ಗೀತೆಯ ಕುರಿತು ವಿಶೇಷ ಕಾರ್ಯಕ್ರಮ, ವಂದೇ ಮಾತರಂ ಸಾಮೂಹಿಕ ಗಾಯನ, ಪಾರಂಪರಿಕ ನಡಿಗೆ ಹಾಗೂ ಇತರ ಕಾರ್ಯಕ್ರಮಗಳು ಏರ್ಪಾಡಾಗಿದ್ದವು.
ಕೋಟೆ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುರಾತತ್ವ ಇಲಾಖೆಯ ನಿವೃತ್ತ ಉಪ ಮುಖ್ಯ ಪುರಾತತ್ವ ತಜ್ಞ ಡಾ. ನಾಯಕಂಡ ಸಿ. ಪ್ರಕಾಶ್ ಭಾಗವಹಿಸಿ ಮಾತನಾಡಿದರು. ಪುರಾತತ್ವ ಇಲಾಖೆಯ ಉಪ ಮುಖ್ಯ ಪುರಾತತ್ವ ಅಭಿಯಂತರ ಗಡಮ್ ಶ್ರೀನಿವಾಸ್, ಸುನಿಲ್ ಕುಮಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಪುರಾತನ ನಾಣ್ಯ ಸಂಗ್ರಾಹಕ ಕೇಶವ ಮೂರ್ತಿ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.